ಪಾಂಡೆ-ಪಾಂಡ್ಯ ಅಬ್ಬರ, ವಿಂಡೀಸ್ 'ಎ' ವಿರುದ್ಧ ಭಾರತ 'ಎ'ಗೆ ಏಕದಿನ ಸರಣಿ

ಆ್ಯಂಟಿಗುವಾ, ಜುಲೈ 17: ನಾಯಕ ಮನೀಶ್ ಪಾಂಡೆ ಶತಕ ಮತ್ತು ಕೃನಾಲ್ ಪಾಂಡೆ 5 ವಿಕೆಟ್ ನೆರವಿನಿಂದ ಆ್ಯಂಟಿಗುವಾದ ನಾರ್ತ್‌ಸೌಂಡ್‌ನಲ್ಲಿ ಮಂಗಳವಾರ (ಜುಲೈ 16) ನಡೆದ ವೆಸ್ಟ್ ಇಂಡೀಸ್ 'ಎ' ಮತ್ತು ಭಾರತ 'ಎ' ನಡುವಿನ 3ನೇ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ 148 ರನ್‌ಗಳ ಜಯ ಗಳಿಸಿದೆ.
ಪಾಂಡೆ 87 ಎಸೆತಗಳಿಗೆ ಭರ್ತಿ 100 ರನ್ ಸಿಡಿಸಿದರೆ, ಪಾಂಡ್ಯ ಕೇವಲ 25 ರನ್ನಿಗೆ 5 ವಿಕೆಟ್ ಉರುಳಿಸಿ ಆತಿಥೇಯರನ್ನು ಕಾಡಿದರು. ವೆಸ್ಟ್ ಇಂಡೀಸ್ ಪ್ರವಾಸದಲ್ಲಿನ ಭಾರತ 'ಎ' ತಂಡ ಈ ಗೆಲುವಿನೊಂದಿಗೆ ಐದು ಪಂದ್ಯಗಳ ಏಕದಿನ ಸರಣಿಯನ್ನು ಈಗಾಗಲೇ 3-0ಯಿಂದ ವಶ ಪಡಿಸಿಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 'ಎ', ಆರಂಭಿಕ ಬ್ಯಾಟ್ಸ್ಮನ್ ಶುಭ್‌ಮಾನ್ ಗಿಲ್ 77, ಶ್ರೇಯಸ್ ಐಯ್ಯರ್ 47, ಪಾಂಡೆ 100, ಹನುಮ ವಿಹಾರಿ 29, ಇಶಾನ್ ಕಿಶನ್ 24 ರನ್‌ನೊಂದಿಗೆ 50 ಓವರ್‌ಗೆ 6 ವಿಕೆಟ್ ಕಳೆದು 295 ರನ್ ಬಾರಿಸಿತ್ತು.
ಗುರಿ ಬೆಂಬತ್ತಿದ ವೆಸ್ಟ್ ಇಂಡೀಸ್ 'ಎ', ಜಾನ್ ಕ್ಯಾಂಪ್ಬೆಲ್ 21, ಸುನಿಲ್ ಆ್ಯಂಬ್ರಿಸ್ 30, ರೇಮನ್ ರೀಫರ್ 19, ರೋಸ್ಟನ್ ಚೇಸ್ 15, ಕೀಮೋ ಪೌಲ್ 34 ರನ್‌ನೊಂದಿಗೆ 34.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 147 ರನ್ ಪೇರಿಸಿ ಶರಣಾಯ್ತು. ವಿಂಡೀಸ್ ಇನ್ನಿಂಗ್ಸ್‌ನಲ್ಲಿ ಪಾಂಡ್ಯ 5, ಹನುಮ ವಿಹಾರಿ 2 ವಿಕೆಟ್ ಪಡೆದು ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications