ಶ್ರೀಲಂಕಾ ವಿರುದ್ಧ ಕೆಟ್ಟ ಪ್ರದರ್ಶನ ನೀಡಿದ ಇಬ್ಬರು ಆಟಗಾರರನ್ನು ಹೆಸರಿಸಿದ ವಿರೇಂದ್ರ ಸೆಹ್ವಾಗ್

ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ತಂಡ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಈ ಹಿಂದೆಯೇ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿತ್ತು. ಹೀಗಾಗಿ ಹಿರಿಯ ಆಟಗಾರರನ್ನು ಹೊರತುಪಡಿಸಿ ಉಳಿದ ಆಟಗಾರರು ಮತ್ತು ಕೆಲ ಹೊಸ ಆಟಗಾರರನ್ನೂ ಸೇರಿದಂತೆ ಹೊಸ ತಂಡವನ್ನು ರಚಿಸಿ ಆ ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ ಕಳುಹಿಸಲಾಯಿತು.
ಈ ಮೂಲಕ ಶ್ರೀಲಂಕಾ ಪ್ರವಾಸ ಕೈಗೊಂಡ ಭಾರತ ತಂಡದಲ್ಲಿ ಯುವ ಪ್ರತಿಭೆಗಳು ಸೇರಿದಂತೆ ಕಳಪೆ ಪ್ರದರ್ಶನ ನೀಡಿ ತಂಡದಿಂದ ಹೊರಗುಳಿದಿದ್ದ ಆಟಗಾರರಿಗೂ ಸಹ ಉತ್ತಮ ಆಟದ ಮೂಲಕ ಭರವಸೆ ಮೂಡಿಸಿರುವ ಅವಕಾಶ ಸಿಕ್ಕಿತ್ತು. ಹೀಗೆ ಸಿಕ್ಕ ಅವಕಾಶವನ್ನು ಕೆಲವರು ಸದುಪಯೋಗ ಪಡಿಸಿಕೊಂಡರೆ ಇನ್ನೂ ಕೆಲವರು ದುರುಪಯೋಗ ಪಡಿಸಿಕೊಂಡರು. ಭಾರತ ತಂಡ ಶ್ರೀಲಂಕಾವನ್ನು 2-1 ಅಂತರದಿಂದ ಮಣಿಸಿ ಸರಣಿ ಕೈವಶ ಮಾಡಿಕೊಂಡಿದೆ. ಆದರೆ ವೀರೇಂದ್ರ ಸೆಹ್ವಾಗ್ ತಂಡದ ಆ ಇಬ್ಬರ ಪ್ರದರ್ಶನದ ಬಗ್ಗೆ ಅಸಮಾಧಾನಗೊಂಡಿದ್ದಾರೆ.
ಹೌದು ಭಾರತ ತಂಡ ಸರಣಿಯನ್ನು ಜಯ ಗಳಿಸಿದರೂ ಸಹ ಭಾರತ ತಂಡದ ಇಬ್ಬರು ಆಟಗಾರರ ಪ್ರದರ್ಶನ ದೊಡ್ಡ ಮಟ್ಟದ ನಿರಾಸೆಯನ್ನು ಮೂಡಿಸಿತು ಎಂದು ವಿರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ. ವಿರೇಂದ್ರ ಸೆಹ್ವಾಗ್ ಆ ಇಬ್ಬರೂ ಆಟಗಾರರ ಬಗ್ಗೆ ಬೇಸರ ವ್ಯಕ್ತಪಡಿಸಿದ ರೀತಿ ಈ ಕೆಳಕಂಡಂತಿದೆ ಓದಿ..

ಮನೀಷ್ ಪಾಂಡೆ ಅತಿ ಹೆಚ್ಚು ಬೇಸರ ಮೂಡಿಸಿದ ಆಟಗಾರ
ವಿರೇಂದ್ರ ಸೆಹ್ವಾಗ್ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅತಿ ಹೆಚ್ಚು ಬೇಸರಕ್ಕೊಳಗಾಗಿರುವುದು ಮನೀಷ್ ಪಾಂಡೆ ಪ್ರದರ್ಶನದಿಂದ. ಹೌದು ಸರಣಿಯ 3 ಪಂದ್ಯಗಳಲ್ಲಿಯೂ ಆಡುವ ಅವಕಾಶ ಲಭಿಸಿದರೂ ಸಹ ಉತ್ತಮ ಪ್ರದರ್ಶನ ನೀಡದ ಮನೀಷ್ ಪಾಂಡೆ ಕಳಪೆ ಪ್ರದರ್ಶನ ನೀಡಿ ಸಿಕ್ಕ ಒಳ್ಳೆಯ ಅವಕಾಶವನ್ನು ಸಹ ಕೈಚೆಲ್ಲಿದ್ದಾರೆ. ಹೀಗಾಗಿ ವಿರೇಂದ್ರ ಸೆಹ್ವಾಗ್ ಮನೀಷ್ ಪಾಂಡೆ ಆಡಿದ ರೀತಿ ನಿಜಕ್ಕೂ ದೊಡ್ಡ ಮಟ್ಟದ ಬೇಸರವನ್ನುಂಟು ಮಾಡಿತು ಎಂದು ಹೇಳಿಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ ಕೂಡ ಅಷ್ಟೆ
ಇನ್ನೂ ಮುಂದುವರಿದು ಮಾತನಾಡಿದ ವೀರೇಂದ್ರ ಸೆಹ್ವಾಗ್ ಹಾರ್ದಿಕ್ ಪಾಂಡ್ಯ ಆಟದ ಕುರಿತು ಸಹ ಬೇಸರವನ್ನು ವ್ಯಕ್ತಪಡಿಸಿದರು. ಮನೀಷ್ ಪಾಂಡೆ ನಂತರ ಹಾರ್ದಿಕ್ ಪಾಂಡ್ಯ ಕೂಡ ಸಿಕ್ಕಿದ್ದ ಒಂದೊಳ್ಳೆ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದೇ ಕಳಪೆ ಪ್ರದರ್ಶನ ನೀಡಿದರು ಎಂದು ವಿರೇಂದ್ರ ಸೆಹ್ವಾಗ್ ಬೇಸರ ವ್ಯಕ್ತಪಡಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶಾನ್ ಉತ್ತಮ ಆಟ
ಈ ಇಬ್ಬರೂ ಆಟಗಾರರಿಗೆ ಹೋಲಿಸಿದರೆ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಉತ್ತಮ ರನ್ ಕಲೆ ಹಾಕಿದರು ಹೀಗಾಗಿ ಮಧ್ಯಮ ಕ್ರಮಾಂಕದ ಆಟಗಾರರ ಆಯ್ಕೆಯಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್‌ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications