Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಜಯ್‌ ಹಜಾರೆ ಟ್ರೋಫಿ: ರಾಜ್ಯ ತಂಡಕ್ಕೆ ಮನೀಷ್ ಪಾಂಡೆ ಸಾರಥ್ಯ

ಬೆಂಗಳೂರು, ಫೆಬ್ರವರಿ. 21 : ಕೋಲ್ಕತ್ತದಲ್ಲಿ ಫೆಬ್ರುವರಿ 25ರಿಂದ ಮಾರ್ಚ್‌ 6 ವರೆಗೆ ನಡೆಯಲಿರುವ ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು ಮನೀಷ್ ಪಾಂಡೆ ನಾಯಕರಾಗಿ ನೇಮಕವಾಗಿದ್ದಾರೆ.

ತಂಡದ ನಾಯಕ ವಿನಯ್ ಕುಮಾರ್ ಗಾಯಗೊಂಡಿರುವ ಕಾರಣ ಮನೀಷ್ ಅವರಿಗೆ ನಾಯಕತ್ವದ ಜವಾಬ್ದಾರಿ ಲಭಿಸಿದೆ. ರಣಜಿ ಟೂರ್ನಿಯ ಕ್ವಾರ್ಟರ್ ಫೈನಲ್‌ ಪಂದ್ಯ ಮತ್ತು ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗೆ ತಂಡದಿಂದ ಸ್ಥಾನ ಕಳೆದು ಕೊಂಡಿದ್ದ ಅನುಭವಿ ರಾಬಿನ್ ಉತ್ತಪ್ಪ ತಂಡಕ್ಕೆ ಮರಳಿದ್ದಾರೆ.

Manish Pandey to lead State side in Vijay Hazare cricket Trophy

ತಂಡದ ವಿಕೆಟ್‌ ಕೀಪರ್ ಸಿ.ಎಂ. ಗೌತಮ್ ಕೂಡ ಈ ಟೂರ್ನಿಯಲ್ಲಿ ಆಡುತ್ತಿಲ್ಲ. ಆದ್ದರಿಂದ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಉತ್ತಪ್ಪ ನಿಭಾಯಿಸಲಿದ್ದಾರೆ. ಮುಷ್ತಾಕ್ ಅಲಿ ಟೂರ್ನಿಗೆ ಅಲಭ್ಯರಾಗಿದ್ದ ಆಲ್‌ ರೌಂಡರ್ ಸ್ಟುವರ್ಟ್‌ ಬಿನ್ನಿ ಕೂಡ ಮರಳಿದ್ದಾರೆ.

ಆಲ್‌ರೌಂಡರ್ ಶ್ರೇಯಸ್ ಗೋಪಾಲ್‌, ವೇಗಿ ಪ್ರಸಿದ್ಧ ಎಂ. ಕೃಷ್ಣ ಮತ್ತು ಬ್ಯಾಟ್ಸ್ ಮನ್ ರೋಹನ್ ಕದಮ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ತಂಡ ಹೀಗಿದೆ: ಮನೀಷ್ ಪಾಂಡೆ (ನಾಯಕ), ರಾಬಿನ್‌ ಉತ್ತಪ್ಪ (ವಿಕೆಟ್‌ ಕೀಪರ್), ಮಯಂಕ್ ಅಗರವಾಲ್, ಆರ್‌. ಸಮರ್ಥ್, ಸ್ಟುವರ್ಟ್‌ ಬಿನ್ನಿ, ಕೆ. ಗೌತಮ್, ಪವನ್‌ ದೇಶಪಾಂಡೆ, ಅನಿ ರುದ್ಧ ಜೆ. ಜೋಶಿ, ಎಸ್‌. ಅರವಿಂದ್‌ (ಉಪನಾಯಕ), ಶ್ರೇಯಸ್ ಗೋಪಾ ಲ್‌, ಜೆ. ಸುಚಿತ್, ಟಿ. ಪ್ರದೀಪ್‌, ಪ್ರಸಿದ್ಧ ಕೃಷ್ಣ, ರೋನಿತ್ ಮೋರೆ ಮತ್ತು ರೋಹನ್ ಕದಮ್.

ಸಹಾಯಕ ಸಿಬ್ಬಂದಿ: ಜೆ. ಅರುಣ್‌ ಕುಮಾರ್ (ಮುಖ್ಯ ಕೋಚ್), ಮನ್ಸೂರ್ ಅಲಿ ಖಾನ್‌ (ಸಹಾಯಕ ಕೋಚ್), ಬಿ. ಸಿದ್ದರಾಮು (ಮ್ಯಾನೇ ಜರ್), ಎ. ರಮೇಶ್‌ ರಾವ್‌ (ಲಾಜಿಸ್ಟಿಕ್ ಮ್ಯಾನೇಜರ್‌), ಜಾಬಪ್ರಭು (ಫಿಸಿಯೊ), ಪ್ರಶಾಂತ ಪೂಜಾರ (ಟ್ರೈನರ್), ಕೆ. ಕಿರಣ್ (ವಿಡಿಯೊ ವಿಶ್ಲೇಷಕ) ಮತ್ತು ಅತನು ಘೋಷ್‌.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+