Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Manoj Tiwary: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಪಶ್ಚಿಮ ಬಂಗಾಳ ಕ್ರೀಡಾ ಸಚಿವ

ಭಾರತೀಯ ಕ್ರಿಕೆಟ್ ತಂಡದ ಆಟಗಾರ ಹಾಗೂ ಪಶ್ಚಿಮ ಬಂಗಾಳ ಕ್ರೀಡಾ ಸಚಿವರೂ ಆಗಿರುವ ಮನೋಜ್ ತಿವಾರಿ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುರುವಾರ, ಆಗಸ್ಟ್ 3ರಂದು ನಿವೃತ್ತಿ ಘೋಷಿಸಿದರು.

ಮನೋಜ್ ತಿವಾರಿ ಅವರು ಜುಲೈ 14, 2015ರಂದು ಜಿಂಬಾಬ್ವೆ ವಿರುದ್ಧ ಭಾರತ ತಂಡದ ಪರ ತಮ್ಮ ಕೊನೆಯ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ್ದರು. ಬಿಸಿಸಿಐ ಆಯ್ಕೆ ಸಮಿತಿಯು ಅವರನ್ನು ಭಾರತೀಯ ತಂಡದಿಂದ ಕೈಬಿಟ್ಟ ನಂತರ, ಮನೋಜ್ ತಿವಾರಿ ಐಪಿಎಲ್ ಹಾಗೂ ದೇಶೀಯ ಪಂದ್ಯಾವಳಿಗಳಲ್ಲಿ ಆಡುವುದನ್ನು ಮುಂದುವರೆಸಿದರು.

ನಂತರ, ಮನೋಜ್ ತಿವಾರಿ ಅವರು ಎಂದಿಗೂ ಭಾರತ ತಂಡಕ್ಕೆ ಪುನರಾಗಮನ ಮಾಡಲು ಸಾಧ್ಯವಾಗಲಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಮೂಲಕ ನಿವೃತ್ತಿ ಘೋಷಿಸಿದರು.

manoj-tiwary-announced-retirement

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮನೋಜ್ ತಿವಾರಿ ಅವರ ಅಂಕಿ-ಸಂಖ್ಯೆಯ ಮೇಲೆ ಸ್ವಲ್ಪ ಬೆಳಕು ಚೆಲ್ಲುವುದಾದರೆ, ಅವರು 12 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, 287 ರನ್ ಗಳಿಸಿದ್ದಾರೆ. ಮನೋಜ್ ತಿವಾರಿ 50-ಓವರ್ ಮಾದರಿಯಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕ ಬಾರಿಸಿದ್ದಾರೆ. ಅಲ್ಲದೆ ಭಾರತ ತಂಡಕ್ಕಾಗಿ ಮೂರು ಟಿ20 ಪಂದ್ಯಗಳನ್ನು ಸಹ ಆಡಿದ್ದು, ಅಲ್ಲಿ ಅವರು 15 ರನ್ ಗಳಿಸಿದರು.

""ಕ್ರಿಕೆಟ್ ಆಟಕ್ಕೆ ವಿದಾಯ ತಿಳಿಸುತ್ತೇನೆ. ಈ ಆಟವು ನನಗೆ ಎಲ್ಲವನ್ನೂ ನೀಡಿದೆ, ನಾನು ಕನಸು ಕಾಣದ ಪ್ರತಿಯೊಂದು ವಿಷಯವನ್ನೂ ನಾನು ಅರ್ಥೈಸಿಕೊಂಡಿದ್ದೇನೆ. ನನ್ನ ಜೀವನವು ವಿವಿಧ ರೀತಿಯ ತೊಂದರೆಗಳಿಂದ ಸವಾಲು ಪಡೆದ ಸಮಯದಿಂದ ಪ್ರಾರಂಭಿಸಿತು ಕ್ರಿಕೆಟ್‌ಗೆ ಎಂದೆಂದಿಗೂ ಕೃತಜ್ಞರಾಗಿರುತ್ತೇನೆ ಮತ್ತು ಯಾವಾಗಲೂ ನನ್ನ ಪರವಾಗಿ ಇರುವ ದೇವರಿಗೆ,'' ಎಂದು ಮನೋಜ್ ತಿವಾರಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ತಮ್ಮ ಹೇಳಿಕೆಯಲ್ಲಿ, ತಮ್ಮ ವೃತ್ತಿಜೀವನದಲ್ಲಿ ಪಾತ್ರವಹಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ತಿಳಿಸಿದ್ದಾರೆ. ಮನೋಜ್ ತಿವಾರಿ ತಮ್ಮ ಹೆತ್ತವರಿಗೆ, ಪತ್ನಿ ಸುಸ್ಮಿತಾ ರಾಯ್‌ಗೆ, ಅವರ ಅಭಿಮಾನಿಗಳಿಗೆ ಮತ್ತು ಅವರ ತರಬೇತುದಾರ ಮಾನಬೇಂದ್ರ ಘೋಷ್‌ಗೆ ಧನ್ಯವಾದ ತಿಳಿಸಿದ್ದು, ಅವರು ತಂದೆಯಂತಿದ್ದರು ಎಂದು ವಿಶೇಷವಾಗಿ ಸ್ಮರಿಸಿದರು.

2018ರಲ್ಲಿ ಕೊನೆಯ ಐಪಿಎಲ್ ಪಂದ್ಯವನ್ನು ಆಡಿದ್ದ ಮನೋಜ್ ತಿವಾರಿ

ಮನೋಜ್ ತಿವಾರಿ ಭಾರತ ತಂಡಕ್ಕಾಗಿ ಕೇವಲ 15 ಪಂದ್ಯಗಳನ್ನು ಆಡಿದ್ದರೆ, ಅವರು ಐಪಿಎಲ್‌ನಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಿದರು. ಅವರು ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್ (ಆಗ ಡೆಲ್ಲಿ ಡೇರ್‌ಡೆವಿಲ್ಸ್), ರೈಸಿಂಗ್ ಪುಣೆ ಸೂಪರ್‌ಜೈಂಟ್ ಮತ್ತು ಪಂಜಾಬ್ ಕಿಂಗ್ಸ್ (ಆಗ ಕಿಂಗ್ಸ್ ಇಲೆವೆನ್ ಪಂಜಾಬ್) ಪರ ಒಟ್ಟು 98 ಪಂದ್ಯಗಳಲ್ಲಿ ಆಡಿದ್ದಾರೆ.

ಮನೋಜ್ ತಿವಾರಿ 28.73ರ ಸರಾಸರಿಯಲ್ಲಿ 1,695 ರನ್ ಗಳಿಸಿದ್ದಾರೆ. ಐಪಿಎಲ್ 2012ರ ಫೈನಲ್‌ನಲ್ಲಿ ಗೆಲುವಿನ ರನ್ ಗಳಿಸಿದ್ದಕ್ಕಾಗಿ ಅದನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಲು ಮತ್ತು ತಮ್ಮ ಮೊದಲ ಪ್ರಶಸ್ತಿಯನ್ನು ಗೆಲ್ಲಲು ನೆರವಾದರು.

ಮೇ 20, 2018ರಂದು ಸಿಎಸ್‌ಕೆ ವಿರುದ್ಧ ಪಂಜಾಬ್‌ ತಂಡದ ಪರ ಅವರ ಕೊನೆಯ ಐಪಿಎಲ್ ಪಂದ್ಯದಲ್ಲಿ ಕಾಣಿಸಿಕೊಂಡರು. ಆ ಪಂದ್ಯದಲ್ಲಿ ಮನೋಜ್ ತಿವಾರಿ 30 ಎಸೆತಗಳಲ್ಲಿ 35 ರನ್ ಗಳಿಸಿದರು.

Story first published: Thursday, August 3, 2023, 14:04 [IST]
Other articles published on Aug 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+