For Quick Alerts
ALLOW NOTIFICATIONS  
For Daily Alerts
 

ನಿವೃತ್ತಿ ನಿರ್ಧಾರ ವಾಪಸ್ ಪಡೆದು ಮತ್ತೆ ಮೈದಾನಕ್ಕಿಳಿಯಲಿದ್ದಾರೆ ಭಾರತದ ಈ ಆಟಗಾರ

ಭಾರತ ಕ್ರಿಕೆಟ್ ಮತ್ತು ಬಂಗಾಳ ತಂಡದ ಮಾಜಿ ಬ್ಯಾಟರ್ ಮನೋಜ್ ತಿವಾರಿ ಅವರು ತಮ್ಮ ನಿವೃತ್ತಿಯ ನಿರ್ಧಾರವನ್ನು ವಾಪಸ್ ಪಡೆದುಕೊಳ್ಳಲು ಮತ್ತು ತಕ್ಷಣವೇ ಜಾರಿಗೆ ಬರುವಂತೆ ಬಂಗಾಳ ತಂಡಕ್ಕಾಗಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಮರಳಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.

ಪ್ರಮುಖವಾಗಿ, ಬಲಗೈ ಬ್ಯಾಟರ್ ಮನೋಜ್ ತಿವಾರಿ ಅವರು ಆಗಸ್ಟ್ 3ರಂದು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದರು.

Manoj Tiwary Will Take Back His Decision To Retire And Play Cricket Again

ಹಲವು ಮಾಧ್ಯಮ ವರದಿಗಳ ಪ್ರಕಾರ, ಕ್ರಿಕೆಟ್ ಅಸೋಸಿಯೇಷನ್ ​​ಆಫ್ ಬೆಂಗಾಲ್ (ಸಿಎಬಿ) ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಅವರೊಂದಿಗಿನ ಸಭೆಯ ನಂತರ, 37 ವರ್ಷದ ಬ್ಯಾಟರ್ ಮನೋಜ್ ತಿವಾರಿ ನಿವೃತ್ತಿಯ ಬಗ್ಗೆ ತಮ್ಮ ಮನಸ್ಸನ್ನು ಬದಲಾಯಿಸಿದ್ದಾರೆ. ಇದೇ ವೇಳೆ ಮಂಗಳವಾರ, ಆಗಸ್ಟ್ 8ರಂದು ಪತ್ರಿಕಾಗೋಷ್ಠಿ ಕರೆದು ಔಪಚಾರಿಕ ಘೋಷಣೆ ಮಾಡಲು ಸಜ್ಜಾಗಿದ್ದಾರೆ.

ಅನುಭವಿ ಕ್ರಿಕೆಟಿಗ ಮನೋಜ್ ತಿವಾರಿ ಅವರು ನಿವೃತ್ತಿ ನಿರ್ಧಾರದಿಂದ ಬಂಗಾಳ ತಂಡದ ಮಧ್ಯಮ ಕ್ರಮಾಂಕದಲ್ಲಿ ಗಮನಾರ್ಹ ಹಿನ್ನಡೆ ಉಂಟುಮಾಡಿದೆ. ಮನೋಜ್ ತಿವಾರಿ ನಾಯಕತ್ವದಲ್ಲಿ ಕಳೆದ ವರ್ಷ ರಣಜಿ ಟ್ರೋಫಿಯಲ್ಲಿ ಬಂಗಾಳ ತಂಡ ಫೈನಲ್ ತಲುಪಿತ್ತು.

Manoj Tiwary Will Take Back His Decision To Retire And Play Cricket Again

ಮನೋಜ್ ತಿವಾರಿ ಅವರ ವಾಪಸಾತಿ ತಂಡಕ್ಕೆ ದೊಡ್ಡ ಶಕ್ತಿ ತುಂಬಲಿದೆ. ಆದರೆ, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಫೈನಲ್ ಪಂದ್ಯದ ಮುಖಾಮುಖಿಯಲ್ಲಿ ಬಂಗಾಳ ತಂಡವನ್ನು ಸೌರಾಷ್ಟ್ರ ತಂಡವು ಸೋಲಿಸಿತು.

ಮನೋಜ್ ತಿವಾರಿ 10,000 ಪ್ರಥಮ ದರ್ಜೆ ರನ್‌ ತಲುಪುವ ಸನಿಹದಲ್ಲಿದ್ದಾರೆ

ಡಿಸೆಂಬರ್ 2004ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮನೋಜ್ ತಿವಾರಿ, ಆಡಿದ 141 ಪಂದ್ಯಗಳಲ್ಲಿ 48.56ರ ಸರಾಸರಿಯಲ್ಲಿ 29 ಶತಕಗಳು ಮತ್ತು 45 ಅರ್ಧಶತಕಗಳೊಂದಿಗೆ 9908 ರನ್ ಗಳಿಸಿದ್ದಾರೆ. ಈ ಮೂಲಕ 37 ವರ್ಷದ ಮನೋಜ್ ತಿವಾರಿ 10,000 ರನ್ ಗಡಿ ತಲುಪಲು ಕೇವಲ 92 ರನ್‌ಗಳ ಅಂತರದಲ್ಲಿದ್ದಾರೆ.

ಬಂಗಾಳ ತಂಡದ ಸ್ಫೋಟಕ ಬ್ಯಾಟರ್ ಮನೋಜ್ ತಿವಾರಿ 2006-07ರ ರಣಜಿ ಟ್ರೋಫಿಯಲ್ಲಿ 99.50ರ ಸರಾಸರಿಯಲ್ಲಿ 796 ರನ್ ಗಳಿಸಿ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದ್ದರು. ಗಮನಾರ್ಹವಾಗಿ, ಆ ಋತುವಿನಲ್ಲಿ ಅವರ ಪ್ರದರ್ಶನವು ಬಂಗಾಳದ ದಾಖಲೆಗಳನ್ನು ಅಳಿಸಿಹಾಕಿತ್ತು ಮತ್ತು ಬಾಂಗ್ಲಾದೇಶ ಪ್ರವಾಸಕ್ಕಾಗಿ ಭಾರತದ ತಂಡಕ್ಕೆ ಆಯ್ಕೆಯಾಗಲು ಕಾರಣವಾಯಿತು.

ಇದೇ ವೇಳೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಮನೋಜ್ ತಿವಾರಿ 169 ಪಂದ್ಯಗಳಿಂದ 42.28ರ ಸರಾಸರಿಯಲ್ಲಿ 5581 ರನ್ ಗಳಿಸಿದರು. ಅಲ್ಲದೆ, ಅವರು ಭಾರತ ತಂಡಕ್ಕಾಗಿ 12 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ ಮತ್ತು 26.09ರ ಸರಾಸರಿಯಲ್ಲಿ 287 ರನ್ ಗಳಿಸಿದ್ದಾರೆ.

ಬಂಗಳಾದ ಅನುಭವಿ ಬ್ಯಾಟರ್ ಮನೋಜ್ ತಿವಾರಿ ವೆಸ್ಟ್ ಇಂಡೀಸ್ ವಿರುದ್ಧ ಚೆನ್ನೈನಲ್ಲಿ ಅಜೇಯ ಏಕದಿನ ಶತಕ (104 ರನ್) ಗಳಿಸಿದರು. ಇದು ಏಕದಿನ ಸ್ವರೂಪದಲ್ಲಿ ಅವರ ಅತ್ಯಧಿಕ ಸ್ಕೋರ್ ಆಗಿದೆ.

ಇನ್ನು ಮನೋಜ್ ತಿವಾರಿ ಅವರು ಟಿ20 ಸ್ವರೂಪದಲ್ಲಿ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿಲ್ಲ. ಕೇವಲ ಮೂರು ಪಂದ್ಯಗಳನ್ನು ಆಡಿದ್ದಾರೆ. ಬಂಗಾಳದ ಕ್ರಿಕೆಟಿಗ ಮನೋಜ್ ತಿವಾರಿ 2015ರಿಂದ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿಲ್ಲ.

Story first published: Tuesday, August 8, 2023, 15:54 [IST]
Other articles published on Aug 8, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+