ರಿಕಿ ಪಾಂಟಿಂಗ್‌ಗೆ ಕೀಟಲೆ ಮಾಡಿದ ರಿಷಭ್ ಪಂತ್

ಶಾರ್ಜಾದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ತೋರುತ್ತ ಮತ್ತೊಮ್ಮೆ ಅಂಕ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.
ಆಡಿರುವ 9 ಪಂದ್ಯಗಳಲ್ಲಿ ಏಳು ಗೆಲುವು ದಾಖಲಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬಹುತೇಕ ಯುವ ಆಟಗಾರರಿಂದ ಕೂಡಿದ್ದು ಮೈದಾನದಲ್ಲಿ ಉತ್ತಮ ಪ್ರದರ್ಶನವು ಡ್ರೆಸ್ಸಿಂಗ್ ರೂಂ ಮನಸ್ಥಿತಿಯನ್ನು ಹೆಚ್ಚಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ತಮ್ಮ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರನ್ನು ರಿಷಭ್ ಪಂತ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ಕೀಟಲೆ ಮಾಡಿದ್ದಾರೆ. ವೀಕ್ಷಕ ವಿವರಣೆಗಾರರು ರಿಕಿ ಪಾಂಟಿಂಗ್‌ರನ್ನು ಸಂದರ್ಶಿಸುತ್ತಿದ್ದರು ಈ ವೇಳೆ ಮಾರ್ಕಸ್ ಸ್ಟೋಯ್ನಿಸ್ ಮತ್ತು ರಿಷಭ್ ತಮ್ಮ ಕೋಚ್‌ಗೆ ಟೀಸ್ ಮಾಡಿದ್ದಾರೆ.
ಗಾಯಾಳವಾಗಿರುವ ಪಂತ್ ಪಂದ್ಯದಲ್ಲಿ ಆಡದಿದ್ದರೂ ರಿಕಿ ಪಾಂಟಿಂಗ್ ಹಿಂದೆ ನಿಂತು ಅವರ ಎಲ್ಲಾ ಮಾತುಗಳನ್ನು ಕೇಳಿಸಿಕೊಳ್ಳುವಂತೆ ನಿಂತಿದ್ದರು. ಪಾಂಟಿಂಗ್‌ಗೆ ವೀಕ್ಷಕ ವಿವರಣೆಗಾರರು ತಿಳಿಸಿದ ಕೂಡಲೇ ಪಾಂಟಿಂಗ್ ನಗೆಗಡಲಲ್ಲಿ ತೇಲಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications