Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮರ್ಲಾನ್ ಸ್ಯಾಮುಯೆಲ್ಸ್ 12 ತಿಂಗಳು ಬೌಲ್ ಮಾಡುವಂತಿಲ್ಲ!

ದುಬೈ, ಡಿ.14: ವೆಸ್ಟ್‌ಇಂಡೀಸ್‌ ನ ಆಲ್‌ರೌಂಡರ್ ಮರ್ಲಾನ್ ಸ್ಯಾಮುಯೆಲ್ಸ್ ಅವರಿಗೆ ಒಂದು ವರ್ಷದ ಅವಧಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತು ಮಾಡಲಾಗಿದೆ. ಸ್ಯಾಮುಯೆಲ್ಸ್ ಅವರ ಬೌಲಿಂಗ್ ನಲ್ಲಿ ಲೋಪ ಕಂಡು ಬಂದ ಹಿನ್ನಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. ಸದ್ಯ

ಬ್ರಿಸ್ಬೇನ್‌ನಲ್ಲಿ ಇತ್ತೀಚೆಗೆ ನಡೆದ ಬೌಲಿಂಗ್ ಪರೀಕ್ಷೆಯಲ್ಲಿ ಸ್ಯಾಮುಯೆಲ್ಸ್ ಅವರು ಫೇಲ್ ಆಗಿದ್ದಾರೆ. ಹೀಗಾಗಿ ಅವರನ್ನು ಬೌಲಿಂಗ್ ಮಾಡದಂತೆ ಐಸಿಸಿ ನಿರ್ದೇಶಿಸಿದೆ. ಸಂಶಯಾಸ್ಪದ ಬೌಲಿಂಗ್ ಶೈಲಿಯ ಹಿನ್ನೆಲೆಯಲ್ಲಿ ಐಸಿಸಿಯಿಂದ ಮಾನ್ಯತೆ ಪಡೆದ ಬೌಲಿಂಗ್ ಪರೀಕ್ಷಾ ಕೇಂದ್ರದಲ್ಲಿ ಸ್ಯಾಮುಯೆಲ್ಸ್ ಪರೀಕ್ಷೆಗೊಳಗಾಗಿ ಫೇಲ್ ಆಗಿದ್ದಾರೆ.[ಹರ್ಭಜನ್, ಅಶ್ವಿನ್ ಇಬ್ಬರು ಚಕ್ಕರ್ಸ್ ಎಂದ ಪಾಕಿಸ್ತಾನಿ]

Marlon Samuels banned from bowling in international cricket

ಕಳೆದ ಅಕ್ಟೋಬರ್‌ನಲ್ಲಿ(14-17) ಗಾಲೆಯಲ್ಲಿ ನಡೆದ ವೆಸ್ಟ್‌ಇಂಡೀಸ್-ಶ್ರೀಲಂಕಾ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ 34 ವರ್ಷ ವಯಸ್ಸಿನ ಸ್ಯಾಮುಯೆಲ್ಸ್ ಬೌಲಿಂಗ್ ಶೈಲಿಯ ಬಗ್ಗೆ ತಕರಾರು ಎತ್ತಿದ ಅಂಪೈರ್‌ಗಳು ಮ್ಯಾಚ್ ರೆಫರಿಗೆ ವರದಿ ಮಾಡಿದ್ದರು.

ಈ ಹಿಂದೆ 2013ರಲ್ಲಿ ಕೂಡಾ ಫಾಸ್ಟ್ ಎಸೆತಗಳನ್ನು ಹಾಕುವಾಗ ಸ್ಯಾಮುಯೆಲ್ಸ್ ನಿಯಮ ಮೀರಿದ ಹಿನ್ನಲೆಯಲ್ಲಿ ನಿಷೇಧಕ್ಕೊಳಗಾಗಿದ್ದರು. ಎರಡು ವರ್ಷದ ಅವಧಿಯಲ್ಲಿ ಎರಡು ಬಾರಿ ನಿಷೇಧಕ್ಕೊಳಗಾಗಿರುವುದರಿಂದ ಮುಂದಿನ 12 ತಿಂಗಳ ಅವಧಿಯಲ್ಲಿ ಅವರು ಬೌಲಿಂಗ್ ಮಾಡುವಂತಿಲ್ಲ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+