Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೆಸ್ಟ್‌ ಇಂಡೀಸ್ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡದಲ್ಲಿ ಲ್ಯಾಬುಶೇನ್‌ಗೆ ಸ್ಥಾನವಿಲ್ಲ

Marnus Labuschagne misses out as Australia name squad for West Indies tour

ಸಿಡ್ನಿ: ವೆಸ್ಟ್ ಇಂಡೀಸ್ ವಿರುದ್ಧದ ನಿಯಮಿತ ಓವರ್‌ಗಳ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟವಾಗಿದೆ. ತಂಡದಲ್ಲಿ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಪ್ಯಾಟ್ ಕಮಿನ್ಸ್‌ಗೆ ಸ್ಥಾನ ಲಭಿಸಿದೆ. ಆದರೆ ಕೋವಿಡ್-19 ಪ್ರಯಾಣ ನಿರ್ಬಂಧದ ಕಾರಣ ಮಾರ್ನಸ್ ಲ್ಯಾಬುಶೇನ್‌ಗೆ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಜುಲೈ 9ರಿಂದ ಆಸ್ಟ್ರೇಲಿಯಾ-ವಿಂಡೀಸ್ ಸರಣಿ ಆರಂಭವಾಗಲಿದ್ದು, ಪ್ರವಾಸವು 5 ಟಿ20ಐ, 3 ಓಡಿಗಳನ್ನು ಒಳಗೊಂಡಿರಲಿದೆ.

ವಿಶ್ವದ ಪ್ರಮುಖ ಆಟಗಾರ ಸಾಲಿನಲ್ಲಿರುವ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ಪ್ಯಾಟ್ ಕಮಿನ್ಸ್ ಸೇರಿದಂತೆ ಆಸ್ಟ್ರೇಲಿಯಾ ಆಟಗಾರರ ತಂಡ ಸೋಮವಾರ (ಮೇ 17) ಮಾಲ್ಡೀವ್ಸ್‌ನಿಂದ ಆಸ್ಟ್ರೇಲಿಯಾಕ್ಕೆ ತಲುಪಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿ ಅಮಾನತಾಗಿದ್ದರಿಂದ ಭಾರತದಿಂದ ಆಸೀಸ್ ಆಟಗಾರರು ಮಾಲ್ಡೀವ್ಸ್‌ಗೆ ತೆರಳಿದ್ದರು.

'ಆಸ್ಟ್ರೇಲಿಯಾ ಪರ ಆಡಲು ಏನನ್ನೂ ಕೂಡ ತ್ಯಾಗ ಮಾಡಲು ಸಿದ್ಧರಿರುವ ಮಾರ್ನಸ್‌ಗೆ ಪ್ರವಾಸ ಸರಣಿ ಮಿಸ್ ಆಗಿರೋದು ಬೇಸರ ತಂದಿದೆ. ಗೊಂದಲಮಯ ಪ್ರಯಾಣ ನಿರ್ಬಂಧದಿಂದ ಮಾರ್ನಸ್ ಆಸೀಸ್ ತಂಡದಲ್ಲಿ ಕಾಣಿಸಿಕೊಂಡಿಲ್ಲ,' ಎಂದು ಆಸ್ಟ್ರೇಲಿಯಾದ ಮುಖ್ಯ ಆಯ್ಕೆದಾರ ಟ್ರೆವರ್ ಹಾನ್ಸ್ ಹೇಳಿದ್ದಾರೆ.

ವಿಂಡೀಸ್ ಪ್ರವಾಸಕ್ಕೆ ಅಸ್ಟ್ರೇಲಿಯಾ ತಂಡ
ಆ್ಯರನ್ ಫಿಂಚ್ (ಸಿ), ಆ್ಯಷ್ಟನ್ ಅಗರ್, ಜೇಸನ್ ಬೆಹ್ರೆಂಡೋರ್ಫ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಜೋಶ್ ಹೇಝಲ್ವುಡ್, ಮೊಯಿಸಸ್ ಹೆನ್ರಿಕ್ಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ರಿಲೆ ಮೆರೆಡಿತ್, ಜೋಶ್ ಫಿಲಿಪ್, ಜಾಯೆ ರಿಚರ್ಡ್‌ಸನ್, ಕೇನ್ ರಿಚರ್ಡ್‌ಸನ್, ತನ್ವೀರ್ ಸಂಘ, ಡಿ'ಆರ್ಸಿ ಶಾರ್ಟ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಮಿಚೆಲ್ ಸ್ವೆಪ್ಸನ್, ಆಂಡ್ರ್ಯೂ ಟೈ, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಮ್ ಜಂಪಾ.

Story first published: Monday, May 17, 2021, 14:08 [IST]
Other articles published on May 17, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+