ಆ್ಯಶಸ್ 5ನೇ ಟೆಸ್ಟ್ : ಅತ್ಯಂತ ಕೆಟ್ಟದಾಗಿ ಔಟಾಗಿ ಟ್ರೋಲ್ ಆದ ಮಾರ್ನಸ್ ಲ್ಯಾಬುಸ್ಚಾಗ್ನೆ

ಹೊಬಾರ್ಟ್‌ನಲ್ಲಿ ನಡೆಯುತ್ತಿರುವ ಆ್ಯಶಸ್ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ, ಆರಂಭದಲ್ಲೇ ಓಪನರ್‌ಗಳಿಬ್ಬರನ್ನು ಕಳೆದುಕೊಂಡಿತು. ಡೇವಿಡ್ ವಾರ್ನರ್ ಶೂನ್ಯಕ್ಕೆ ಔಟಾದ್ರೆ, ಸಿಡ್ನಿ ಟೆಸ್ಟ್‌ನಲ್ಲಿ ಎರಡು ಶತಕ ಸಿಡಿಸಿದ್ದ ಉಸ್ಮಾನ್ ಖವಾಜ 6 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು.
ಓಪನರ್‌ಗಳಿಬ್ಬರು ಬಹುಬೇಗನೆ ವಿಕೆಟ್ ಒಪ್ಪಿಸಿದ ಬೆನ್ನಲ್ಲೇ ಆಸೀಸ್ ಬೆಸ್ಟ್ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಶೂನ್ಯಕ್ಕೆ ರಾಬಿನ್‌ಸನ್‌ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ರು. ಆದ್ರೆ ಟ್ರಾವಿಸ್ ಹೆಡ್ ಜೊತೆಗೂಡಿ ಮಾರ್ನಸ್ ಲ್ಯಾಬುಸ್ಚಾಗ್ನೆ ನಾಲ್ಕನೇ ವಿಕೆಟ್‌ಗೆ ಉತ್ತಮ ಜೊತೆಯಾಟವಾಡಿದ್ರು.
ನಾಲ್ಕನೇ ವಿಕೆಟ್‌ಗೆ ಟ್ರಾವಿಸ್ ಜೊತೆಗೆ ಇಂಗ್ಲೆಂಡ್ ಬೌಲರ್‌ಗಳನ್ನ ಉತ್ತಮವಾಗೇ ಎದುರಿಸಿದ್ದ ಮಾರ್ನಸ್ ಲ್ಯಾಬುಸ್ಚಾಗ್ನೆ 44 ರನ್‌ಗಳಿಸಿದ್ದಾಗ ಅತ್ಯಂತ ಕೆಟ್ಟದಾಗಿ ವಿಕೆಟ್ ಒಪ್ಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾದ್ರು.
52 ಎಸೆತಗಳಲ್ಲಿ 44 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಲ್ಯಾಬುಸ್ಚಾಗ್ನೆ ಚೀಕಿ ಶಾಟ್ ಆಡಲು ಪ್ರಯತ್ನಿಸಿದರು ಆದರೆ ಬದಲಿಗೆ ಅವರ ವಿಕೆಟ್ ಕಳೆದುಕೊಂಡರು. ಚೆಂಡನ್ನು ಬಿಡುಗಡೆ ಮಾಡುವ ಮೊದಲೇ ಅವರು ಆಫ್-ಸ್ಟಂಪ್‌ನಾದ್ಯಂತ ಮುಂದಾಗಿ ಕ್ಲೀನ್ ಬೌಲ್ಡ್ ಆದ್ರು. ಲ್ಯಾಬುಸ್ಚಾಗ್ನೆ ಈ ಹಿಂದೆ ಇಂತಹ ಹಲವು ಹೊಡೆತಗಳನ್ನು ಎಕ್ಸಿಕ್ಯೂಟ್ ಮಾಡಿದ್ದರೂ, ಸಹ ಈ ಬಾರಿ ಜಾರಿಕೊಂಡು ತಮ್ಮ ಸಮತೋಲನವನ್ನು ಕಳೆದುಕೊಂಡರು. ಇದರ ಪರಿಣಾಮವಾಗಿ, ಬ್ರಾಡ್‌ನ ಬೌಲಿಂಗ್‌ಗೆ ಬಲಿಯಾದ್ರು.
ಮಾರ್ನಸ್ ಲ್ಯಾಬುಸ್ಚಾಗ್ನೆ ಔಟಾದಾ ರೀತಿಗೆ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದಾರೆ. ಮೊದಲ ದಿನದಾಟ ಮಳೆಯಿಂದಾಗಿ ಸ್ಥಗಿತಗೊಂಡಿದ್ದು, ಆಸ್ಟ್ರೇಲಿಯಾ ಆರು ವಿಕೆಟ್ ನಷ್ಟಕ್ಕೆ 241ರನ್ ಕಲೆಹಾಕಿದೆ. ಟ್ರಾವಿಡ್ ಹೆಡ್ ಶತಕ ಸಿಡಿಸಿ ಔಟಾದ್ರೆ, ಕ್ಯಾಮರೂನ್ ಗ್ರೀನ್ 74 ರನ್‌ಗೆ ವಿಕೆಟ್ ಒಪ್ಪಿಸಿದ್ರು. ಪಂದ್ಯದ ಹೈಲೈಟ್‌ನಲ್ಲಿ ಮಾರ್ನಸ್ ಔಟ್ ಕೂಡ ಒಂದಾಗಿದ್ದು, ನೆಟ್ಟಿಗರು ಏನೆಲ್ಲಾ ಟ್ರೋಲ್ ಮಾಡಿದ್ದಾರೆ ಎಂಬುದನ್ನ ಈ ಕೆಳಗೆ ತಿಳಿಯಿರಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications