ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ಕೋಚ್ ಸ್ಥಾನಕ್ಕೆ ಅಟಪಟ್ಟು ರಾಜೀನಾಮೆ

By Mahesh

ಕೊಲಂಬೋ, ಸೆ. 04: ಪ್ರವಾಸಿ ಭಾರತದ ವಿರುದ್ಧ ಅತಿಥೇಯ ಶ್ರೀಲಂಕಾ ತಂಡ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಶ್ರೀಲಂಕಾ ತಂಡದ ಮುಖ್ಯ ಕೋಚ್ ಹುದ್ದೆಗೆ ಮಾರ್ವನ್ ಅಟಪಟ್ಟು ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಮಧ್ಯಂತರ ಮುಖ್ಯಸ್ಥ ಸಿದಾತ್ ವೆಟ್ಟಿಮುಟಿ ಅವರು ಅಟಪಟ್ಟು ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ತಂಡ 2-1 ಅಂತರದಿಂದ ಸೋಲು ಕಂಡಿತ್ತು. ಪಾಕಿಸ್ತಾನ ವಿರುದ್ಧ ಕೂಡಾ ಶ್ರೀಲಂಕಾ ಕಳಪೆ ಪ್ರದರ್ಶನ ನೀಡಿತ್ತು. ಹೀಗಾಗಿ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ಶ್ರೀಲಂಕಾದ ಮಾಜಿ ನಾಯಕ ಮರ್ವನ್ ಅಟಪಟ್ಟು ತಂಡದ ಮುಖ್ಯ ಕೋಚ್ ಹುದ್ದೆಗೆ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ.[ವಿರಾಟ್ ಕೊಹ್ಲಿಗೆ ಈ ವಾರ ಸಕತ್ ಶುಭದಾಯಕ]

Marvan Atapattu resigns as Sri Lanka head coach following India defeat

ಶ್ರೀಲಂಕಾದ ಮಾಜಿ ಬ್ಯಾಟಿಂಗ್ ಸ್ಟಾರ್ ಅಟಪಟ್ಟು 2014ರ ಸೆಪ್ಟಂಬರ್‌ನಲ್ಲಿ ಪಾಲ್ ಫಾಬ್ರೆಸ್‌ರಿಂದ ತೆರವಾದ ಮುಖ್ಯ ಕೋಚ್ ಸ್ಥಾನಕ್ಕೆ ಆಯ್ಕೆಯಾಗಿದ್ದರು. 2011 ರಿಂದ ತಂಡದ ಬ್ಯಾಟಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಬಾಂಗ್ಲಾದೇಶದ ಕೋಚ್ ಆಗಿರುವ ಲಂಕಾದ ಮಾಜಿ ದಾಂಡಿಗ ಚಂಡಿಕ ಹಥುರು ಸಿಂಘೆ ಕೋಚ್ ಹುದ್ದೆವಹಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಗ್ರಹಾಂ ಫೊರ್ಡ್ ಅವರ ಹೆಸರು ಕೂಡಾ ಕೇಳಿ ಬಂದಿದೆ.

44 ವರ್ಷ ವಯಸ್ಸಿನ ಅಟಪಟ್ಟು ಅವರ ಕೋಚ್ ಆಗಿದ್ದ ಕಾಲದಲ್ಲಿ ಶ್ರೀಲಂಕಾ ತಂಡ ಐಸಿಸಿ ಕ್ರಿಕೆಟ್ ವಿಶ್ವಕಪ್ ಕ್ವಾರ್ಟರ್ ಫೈನಲ್, ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್ ನಲ್ಲಿ ಸರಣಿ ವಿಜಯ ಮುಂತಾದವು ಸಾಧನೆಗಳಾಗಿವೆ. ಶ್ರೀಲಂಕಾ ಪರ ಅಟಪಟ್ಟು ಅವರು 90 ಟೆಸ್ಟ್ ಪಂದ್ಯ ಹಾಗೂ 268 ಏಕದಿನ ಪಂದ್ಯಗಳನ್ನಾಡಿ ಕ್ರಮವಾಗಿ 5,502ರನ್ ಹಾಗೂ 8,529 ರನ್ ಗಳಿಸಿದ್ದಾರೆ. (ಪಿಟಿಐ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X