For Quick Alerts
ALLOW NOTIFICATIONS  
For Daily Alerts
 

ರನ್‌ ಕಲೆ ಹಾಕುವಲ್ಲಿ ಪರದಾಡಿದ ಬಾಬರ್, ರಿಜ್ವಾನ್‌: ಪಾಕ್‌ 259ಕ್ಕೆ 5

ರಾವಲ್ಪಿಂಡಿ: ಭರವಸೆಯ ಆಟಗಾರ ಅಬ್ದುಲ್ಲಾ ಶಫೀಕ್ (57 ರನ್) ಹಾಗೂ ನಾಯಕ ಶಾನ್ ಮಸೂದ್ (87 ರನ್‌) ಇವರುಗಳ ಭರ್ಜರಿ ಆಟದ ನೆರವಿನಿಂದ ಪಾಕಿಸ್ತಾನ, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ಮೊದಲ ದಿನ ದಿನದ ಗೌರವವನ್ನು ತನ್ನದಾಗಿಸಿಕೊಂಡಿದೆ. ಆದರೆ ಪಾಕಿಸ್ತಾನ ತಂಡದ ಸ್ಟಾರ್ ಆಟಗಾರ ಬಾಬರ್ ಅಜಮ್ ರನ್ ಕಲೆ ಹಾಕುವಲ್ಲಿ ವಿಫಲವಾಗಿದ್ದು ತಂಡದ ಚಿಂತೆ ದುಪ್ಪಟ್ಟಾಗಿದೆ.

ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಪಾಕಿಸ್ತಾನ ತಂಡದ ಆರಂಭ ಸಾಧಾರಣವಾಗಿತ್ತು. ಇಮಾಮ್‌ ಉಲ್ ಹಕ್ (17) ಹಾಗೂ ಅಬ್ದುಲ್ಲಾ ಶಫೀಕ್ ಜೋಡಿ 35 ರನ್‌ಗಳ ಜೊತೆಯಾಟ ಮಾತ್ರ ನೀಡಿತು. ಎರಡನೇ ವಿಕೆಟ್‌ಗೆ ಆರಂಭಿಕ ಅಬ್ದುಲ್ಲಾ ಶಫೀಕ್ ಹಾಗೂ ಶಾನ್ ಮಸೂದ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಸರೆಯಾಯಿತು. ಈ ವೇಳೆ ಅಬ್ದುಲ್ಲಾ ಶಫೀಕ್ 146 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 57 ರನ್ ಬಾರಿಸಿ ಔಟ್ ಆದರು.

Masood Shafique fifties anchor Pakistan on Day 1 Babar Azam fails again in 2nd Test vs South Africa

ಪಾಕಿಸ್ತಾನ ತಂಡದ ಸ್ಟಾರ್ ಆಟಗಾರ ಬಾಬರ್‌ ಅಜಮ್‌ ತಮ್ಮ ಫ್ಲಾಪ್‌ ಶೋ ಮುಂದುವರೆಸಿದ್ದಾರೆ. ಇವರು ಎರಡನೇ ಟೆಸ್ಟ್‌ನಲ್ಲಿ 3 ಬೌಂಡರಿ ಬಾರಿಸಿ ಭರವಸೆ ಮೂಡಿಸಿದ್ದರು. ಆದರೆ ಸ್ಪಿನ್ ಬೌಲರ್ ಕೇಶವ್ ಮಹರಾಜ್ ತೋಡಿದ ಖೆಡ್ಡಗೆ ತೋಡಿದರು. ಪರಿಣಾಮ ಬಾಬರ್‌ ದೊಡ್ಡ ಕನಸಿನ ಇನಿಂಗ್ಸ್‌ 16 ರನ್‌ಗಳಿಗೆ ಪೂರ್ಣಗೊಂಡಿತು.

ಮಸೂದ್‌ ಅಬ್ಬರ

ನಾಯಕ ಶಾನ್ ಮಸೂದ್‌ 176 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್‌ ನೆರವಿನಿಂದ 87 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಆದರೆ ಇವರು 13 ರನ್‌ಗಳಿಂದ ಶತಕ ವಂಚಿತರಾದರು. ವಿಕೆಟ್‌ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್‌ 19 ರನ್‌ಗಳಿಗೆ ಆಟ ಮುಗಿಸಿದರು. ಎರಡನೇ ದಿನಕ್ಕೆ ಸಲ್ಮಾನ್‌ ಅಘಾ (ಅಜೇಯ 10) ಹಾಗೂ ಸೌದ್ ಶಕೀಲ್‌ (ಅಜೇಯ 42) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪಾಕಿಸ್ತಾನ ತಂಡ ಬೃಹತ್ ಮೊತ್ತ ಕಲೆ ಹಾಕಲು ಈ ಬ್ಯಾಟರ್‌ಗಳು ಮಹತ್ವದ ಕಾಣಿಕೆ ನೀಡಬೇಕು. ಮೊದಲ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ 5 ವಿಕೆಟ್‌ಗೆ 259 ರನ್‌ ಸೇರಿಸಿತು. ದಕ್ಷಿಣ ಆಫ್ರಿಕಾ ತಂಡದ ಪರ ಸೈಮನ್ ಹಾರ್ಮರ್ ಹಾಗೂ ಕೇಶವ್ ಮಹರಾಜ್ ತಲಾ 2 ವಿಕೆಟ್‌ ಪಡೆದರು.

Story first published: Monday, October 20, 2025, 22:52 [IST]
Other articles published on Oct 20, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+