ಮ್ಯಾಚ್ ಫಿಕ್ಸಿಂಗ್ ಕೊಲೆಗಿಂತ ದೊಡ್ಡ ಅಪರಾಧ: ಎಂಎಸ್ ಧೋನಿ


ಬೆಂಗಳೂರು, ಮಾರ್ಚ್ 11: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಕುರಿತಂತೆ ಹಾಟ್ ಸ್ಟಾರ್ ನಲ್ಲಿ ಹೊಚ್ಚ ಹೊಸ ಡಾಕ್ಯುಮೆಂಟರಿಯನ್ನು ಹಾಟ್ ಸ್ಟಾರ್ ಹೊರ ತರುತ್ತಿದೆ. 'ರೋರ್ ಆಫ್ ದಿ ಲಯನ್' ಎಂಬ ಸರಣಿಯಲ್ಲಿ ಧೋನಿ ಅವರ ವಿಶೇಷ ಸಂದರ್ಶನಗಳು, ಕ್ರಿಕೆಟ್ ಮೈದಾನದ ಒಳ-ಹೊರಗಿನ ಘಟನೆಗಳತ್ತ ಬೆಳಕು ಚೆಲ್ಲಲಾಗುತ್ತದೆ.
ಈ ಸರಣಿಯ ಟ್ರೈಲರ್ ಬಿಡುಗಡೆಯಾಗಿದ್ದು, ಇದರಲ್ಲಿ ಮೊದಲ ದೃಶ್ಯದಲ್ಲೇ ಧೋನಿ ಅವರು ಮ್ಯಾಚ್ ಫಿಕ್ಸಿಂಗ್ ಬಗ್ಗೆ ಮಾತನಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಎರಡು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದಾಗ ಪರಿಸ್ಥಿತಿ ಹೇಗಿತ್ತು. ಧೋನಿ ಹಾಗೂ ಸಹ ಆಟಗಾರರ ಮನಸ್ಥಿತಿ ಹೇಗಿತ್ತು ಎಂಬುದನ್ನು ತಿಳಿಯಬಹುದಾಗಿದೆ.
ಎರಡು ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ತಂಡವು ನಿಷೇಧದ ಅವಧಿ ಮುಗಿಸಿಕೊಂಡು ಕಣಕ್ಕಿಳಿದು ಮತ್ತೊಮ್ಮೆ ಕಪ್ ಎತ್ತಿ ಹಿಡಿದಿದ್ದು ಈಗ ಇತಿಹಾಸ.
2010, 2011ಹಾಗೂ 2018ರಲ್ಲಿ ಐಪಿಎಲ್ ಕಪ್ ಗೆಲ್ಲಿಸಿಕೊಟ್ಟ ಧೋನಿ ಅವರು ಮ್ಯಾಚ್ಫಿಕ್ಸಿಂಗ್ ಬಗ್ಗೆ ಮಾತನಾಡಿ, ಮ್ಯಾಚ್ ಫಿಕ್ಸಿಂಗ್ ಎಂಬುದು ಕೊಲೆಗಿಂತಲೂ ಘೋರವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾನು ಮಾಡಬಹುದಾದ ದೊಡ್ಡ ಅಪರಾಧವೆಂದರೆ ಅದು ಕೊಲೆಯಲ್ಲ. ಅದು ಮ್ಯಾಚ್ ಫಿಕ್ಸಿಂಗ್ ಎಂದಿದ್ದಾರೆ. ತಂಡವೂ ಅದರಲ್ಲಿ ಒಳಗಾಗಿತ್ತು. ನನ್ನ ಹೆಸರೂ ಕೂಡ ಅದರಲ್ಲಿ ಕೇಳಿಬಂತು. ಚೆನ್ನೈ ಅಭಿಮಾನಿಗಳಿಗೂ ಇದು ಸಂಕಷ್ಟ ಪರಿಸ್ಥಿತಿಯಾಗಿತ್ತು.
ನಿಷೇಧದ ಬಳಿಕ ಮರಳಿದ್ದು ಅತ್ಯಂತ ಭಾವನಾತ್ಮಕ ಕ್ಷಣವಾಗಿತ್ತು. ನಾನು ಯಾವಾಗಲೂ ಹೇಳುವುದೆಂದರೆ ಯಾವುದು ನಿನ್ನನ್ನು ಕೊಲ್ಲಲಾಗುವುದಿಲ್ಲವೋ ಅದು ನಿನ್ನನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತದೆ ಎಂದು ಧೋನಿ ಹೇಳಿದ್ದಾರೆ.
ವಿಡಿಯೋದಲ್ಲಿ ಧೋನಿ ತಂಡದ ಸಹ ಆಟಗಾರರಾದ ಸುರೇಶ್ ರೈನಾ, ರವೀಂದ್ರ ಜಡೇಜಾ ಮತ್ತು ಶೇನ್ ವ್ಯಾಟ್ಸನ್ಕೂಡ ಕಾಣಿಸಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ನಾಯಕ 37 ವರ್ಷ ವಯಸ್ಸಿನ ಧೋನಿ ಅವರು 75.83 ರನ್ ಸರಾಸರಿಯಲ್ಲಿ 455 ರನ್ಗಳಿಸಿ ಮಿಂಚಿದ್ದರು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications