ಪಾಕ್ ಮಣಿಸಿ ಸೆಮೀಸ್ ಗೆ ಲಗ್ಗೆ ಇಟ್ಟ ಆಸ್ಟ್ರೇಲಿಯಾ
ಅಡಿಲೇಡ್, ಮಾ. 20: ನಿರಾಯಾಸವಾಗಿ ಪಾಕಿಸ್ತಾನವನ್ನು ಬಗ್ಗುಬಡಿದ ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ ನಲ್ಲಿ ಆಸೀಸ್ ಭಾರತವನ್ನು ಎದುರಿಸಲಿದೆ. [ಸ್ಕೋರ್ ಕಾರ್ಡ್]
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ 213 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಚೆಸಿಂಗ್ ನಡೆಸಿದ ಆಸ್ಟ್ರೇಲಿಯಾ 33 ಓವರ್ ಗಳಲ್ಲಿ ಸುಲಭವಾಗಿ ಗುರಿ ಮುಟ್ಟಿತು. ಸ್ಮಿತ್ ಮತ್ತು ಶೇನ್ ವಾಟ್ಸನ್ ಅರ್ಧಶತಕ ಮತ್ತು ಮ್ಯಾಕ್ಸ್ ವೆಲ್ ಸ್ಫೋಟಕ ಆಟ ಆಸೀಸ್ ಗೆ ಜಯ ತಂದುಕೊಟ್ಟಿತು.

ಈ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಮಧ್ಯಮ ಕ್ರಮಾಂಕದ ಆಟಗಾರರಾದ ಹ್ಯಾರಿಸ್ ಸೊಹೈಲ್ (41 ರನ್), ನಾಯಕ ಮಿಸ್ ಬಾ ಉಲ್ ಹಕ್ (34 ರನ್) ಮತ್ತು ಸೊಹೇಬ್ ಮಕ್ಸೂದ್ (29 ರನ್) ನೆರವಿನಲ್ಲಿ 49.5 ಓವರ್ ಗಳಲ್ಲಿ ಕೇವಲ 213 ರನ್ ಗಳಿಸಿ ಆಲ್ ಔಟ್ ಆಗಿತ್ತು.
ಆಸ್ಟ್ರೇಲಿಯಾ ಪರ ಪ್ರಭಾವಿ ಬೌಲಿಂಗ್ ಮಾಡಿದ ಹೇಝಲ್ ವುಡ್ 4 ವಿಕೆಟ್ , ಸ್ಟಾರ್ಕ್ 2 ವಿಕೆಟ್, ಮ್ಯಾಕ್ಸ್ ವೆಲ್ 2 ವಿಕೆಟ್ ಮತ್ತು ಜಾನ್ಸನ್, ಫಾಲ್ಕನರ್ ತಲಾ 1 ವಿಕೆಟ್ ಕಬಳಿಸಿದರು. 10 ಓವರ್ ಗಳನ್ನು ಎಸೆದ ಹೇಝಲ್ ವುಡ್ ಕೇವಲ 35 ರನ್ ಗಳನ್ನು ನೀಡಿ ಪ್ರಮುಖ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.
ಭಾರತ ಮತ್ತು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ಪ್ರವೇಶ ಮಾಡಿವೆ. ನಾಲ್ಕನೇ ಕ್ಯಾರ್ಟರ್ ಫೈನಲ್ ಪಂದ್ಯ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications