ಐರ್ಲೆಂಡ್ ಪ್ರವಾಸ ಆರಂಭಿಸಿರುವ ವೆಸ್ಟ್ ಇಂಡೀಸ್ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಐರ್ಲೆಂಡ್ ಜಯ ಸಾಧಿಸಿದ್ದರೆ, ಎರಡನೇ ಏಕದಿನ ಪಂದ್ಯವನ್ನು ಗೆಲ್ಲುವ ಕನಸನ್ನು ವಿಂಡೀಸ್ ಹೊಂದಿತ್ತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 352 ರನ್ ಸೇರಿಸಿತು. ಆದರೆ ಮಳೆ ಪಂದ್ಯ ನಡೆಸಲು ಅವಕಾಶ ನೀಡದಾಗ ರದ್ದುಗೊಳಿಸಲಾಯಿತು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಬೌಲರ್ ವೇಗದ ಬ್ಯಾಟಿಂಗ್ ಮಾಡಿ ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದರು.
ವೆಸ್ಟ್ ಇಂಡೀಸ್ ತಂಡದ ಆರಂಭಿಕರು ಉತ್ತಮ ಜೊತೆಯಾಟದ ಕಾಣಿಕೆ ನೀಡಲಿಲ್ಲ. ಆರಂಭಿಕ ಬ್ರಾಂಡನ್ ಕಿಂಗ್, ಎವಿನ್ ಲೆವಿಸ್ (20) ರನ್ ಕಲೆ ಹಾಕುವಲ್ಲಿ ವಿಫಲರಾದರು. ಮೂರನೇ ವಿಕೆಟ್‌ಗೆ ಕೀಸಿ ಕಾರ್ಟಿ ಹಾಗೂ ನಾಯಕ ಶಾಯ್ ಹೋಪ್ ಜೋಡಿ 90 ಎಸೆತಗಳಲ್ಲಿ 81 ರನ್ ಸಿಡಿಸಿತು. ಶಾಯ್ ಹೋಪ್ 49 ರನ್ ಬಾರಿಸಿ ಔಟ್ ಆದರು.

ಕೀಸಿ ಕಾರ್ಟಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 109 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್ ಸಹಾಯದಿಂದ 102 ರನ್ ಸಿಡಿಸಿದರು. ಜಸ್ಟಿನ್ ಗ್ರೀವ್ಸ್ (44), ರೋಸ್ಟನ್ ಚೇಸ್ (24) ರನ್ ಬಾರಿಸಿ ತಂಡಕ್ಕೆ ಆಧಾರವಾದರು.
ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಮ್ಯಾಥ್ಯೂ ಫೋರ್ಡ್ ಸ್ಫೋಟಕ ಬ್ಯಾಟ್ ಮಾಡಿದರು. ಇವರು ಬಿರುಸಿನ ಬ್ಯಾಟಿಂಗ್ ನಡೆಸಿ ಆಧಾರವಾದರು. ಫೋರ್ಡ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇವರು ಅಬ್ಬರದ ಅರ್ಧಶತಕದ ಮೂಲಕ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದರು. ಇವರು 2015 ರಲ್ಲಿ ಡಿವಿಲಿಯರ್ಸ್ ಸಿಡಿಸಿದ ಅರ್ಧಶತಕದ ದಾಖಲೆಯನ್ನು ಸರಿಗಟ್ಟಿದರು. ಎಬಿಡಿ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.
23 ವರ್ಷದ ಫೋರ್ಡ್ 8 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದರು. ಫೋರ್ಡ್ ಬ್ಯಾಟಿಂಗ್ ಮಾಡಲು ಬರುತ್ತಿದ್ದಂತೆ ಆಕ್ರಮಣಕಾರಿ ಆಟವನ್ನು ಆಡಿದರು. ಫೋರ್ಡ್ ಒಂದು ಹಂತದಲ್ಲಿ 13 ಎಸೆತಗಳಲ್ಲಿ 42 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಫೋರ್ಡ್ ಬಳಿ ಎಬಿಡಿ ದಾಖಲೆಯ ಅಳಿಸುವ ಅವಕಾಶ ಇತ್ತು. ಆದರೆ ಇವರು ತಾವು ಎದುರಿಸದ 14ನೇ ಎಸೆತವನ್ನು ಡಾಟ್ ಆಡಿದರು. ಇದಾದ ನಂತರ ಅವರು ಮುಂದಿನ ಎರಡು ಎಸೆತಗಳಲ್ಲಿ 2 ಸಿಕ್ಸರ್ ಬಾರಿಸಿ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.
ವೇಗದ ಅರ್ಧಶತಕ ಬಾರಿಸಿದ ಬ್ಯಾಟರ್ಸ್
ಎಬಿ ಡಿವಿಲಿಯರ್ಸ್, 16 ಎಸೆತ, ವೆಸ್ಟ್ ವಿಂಡೀಸ್ ವಿರುದ್ಧ,
ಮ್ಯಾಥ್ಯೂ ಫೋರ್ಡ್, 16 ಎಸೆತ, ಐರ್ಲೆಂಡ್ ವಿರುದ್ಧ,
ಸನತ್ ಜಯಸೂರ್ಯ, 17 ಎಸೆತ, ಪಾಕಿಸ್ತಾನ
ಕುಸಾಲ್ ಪೆರೆರಾ, 17 ಎಸೆತ, ಪಾಕಿಸ್ತಾನ
ಮಾರ್ಟಿನ್ ಗಪ್ಟಿಲ್, 17 ಎಸೆತ, ಶ್ರೀಲಂಕಾ