ಇಂಗ್ಲೆಂಡ್‌ನ ಲಿಮಿಟೆಡ್ ಓವರ್ ಕ್ರಿಕೆಟ್ ತಂಡದ ಕೋಚ್ ಆಗಿ ಮ್ಯಾಥ್ಯೂ ಮೋಟ್ ಆಯ್ಕೆ

ಇತ್ತೀಚೆಗಷ್ಟೇ ಟೆಸ್ಟ್ ತಂಡದ ಕೋಚ್ ಅನ್ನು ಅಂತಿಮಗೊಳಿಸಿದ್ದ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೊರ್ಡ್ (ಇಸಿಬಿ) ಬುಧವಾರ ಮ್ಯಾಥ್ಯೂ ಮೋಟ್‌ರನ್ನು ಇಂಗ್ಲೆಂಡ್ ಲಿಮಿಟೆಡ್ ಓವರ್ ಕ್ರಿಕೆಟ್ ತಂಡದ ಕೋಚ್ ಆಯ್ಕೆ ಮಾಡಿರುವುದಾಗಿ ತಿಳಿಸಿದೆ.
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ಯಶಸ್ಸು ಸಾಧಿಸಿರುವ ಮ್ಯಾಥ್ಯೂ ಮೋಟ್‌ರನ್ನ ಪುರುಷರ ತಂಡದ ಹೊಸ ವೈಟ್ ಬಾಲ್ ಹೆಡ್ ಕೋಚ್ ಆಗಿ ಇಸಿಬಿ ನೇಮಿಸಿದೆ.
48 ವರ್ಷದ ಮೋಟ್, ನಾಲ್ಕು ವರ್ಷದ ಒಪ್ಪಂದಕ್ಕೆ ಸಹಿ ಮಾಡಿದ್ದು ಇಂಗ್ಲೆಂಡ್ ತಂಡದ ಏಕದಿನ ಹಾಗೂ ಟಿ20 ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇವರು ಮುಂಬರುವ ನೆದರ್ಲೆಂಡ್ಸ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಿಂದಲೇ ಕಾರ್ಯಕ್ಕೆ ಹಾಜರಾಗುವ ಸಾಧ್ಯತೆ ಹೆಚ್ಚಿದೆ. ಜೂನ್‌ನಲ್ಲಿ ಆಮ್‌ಸ್ಟ್ರಡಮ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಇಂಗ್ಲೆಂಡ್ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿದೆ.
"ಇಂಗ್ಲೆಂಡ್‌ನೊಂದಿಗೆ ಈ ವೈಟ್-ಬಾಲ್ ತಂಡದ ಕೋಚ್ ಸ್ಥಾನವನ್ನ ಸ್ವೀಕರಿಸಲು ನಾನು ಸಂತೋಷಪಡುತ್ತೇನೆ. ನಾನು ಆಸ್ಟ್ರೇಲಿಯಾ ತಂಡದ ಕೋಚ್ ಆಗಿರುವಾಗ, ಇಂಗ್ಲೆಂಡ್‌ನೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದೇನೆ ಮತ್ತು ಸ್ಕಾಟ್‌ಲ್ಯಾಂಡ್, ವೇಲ್ಸ್ ಮತ್ತು ಇಂಗ್ಲೆಂಡ್‌ನಲ್ಲಿ ಸಾಕಷ್ಟು ಸಮಯವನ್ನು ಕಳೆದಿರುವ ನನ್ನ ಹಲವಾರು ಹತ್ತಿರದ ಸ್ನೇಹಿತರು ಯುಕೆಯಲ್ಲಿದ್ದಾರೆ. ತರಬೇತುದಾರನಾಗಿ, ಈ ಪಾತ್ರವು ಲಭ್ಯವಾದಾಗ, ಇಯಾನ್ ಮಾರ್ಗನ್ ಅವರ ಚಾಣಾಕ್ಷ ನಾಯಕತ್ವದಲ್ಲಿ ಯಶಸ್ವಿ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ಒದಗಿಬಂದಿದೆ'' ಎಂದು ಮೋಟ್ ತಾನು ಕೋಚ್ ಆಗಿ ಆಯ್ಕೆಯಾಗಿರುವ ಕುರಿತಾಗಿ ತಿಳಿಸಿದ್ದಾರೆ.
2015ರಿಂದ ಆಸ್ಟ್ರೇಲಿಯಾ ಮಹಿಳಾ ತಂಡದ ಕೋಚ್ ಆಗಿರುವ ಮೋಟ್ ಅವಧಿಯಲ್ಲಿ ಆಸೀಸ್ ಮಹಿಳಾ ಕ್ರಿಕೆಟ್ ತಂಡವು ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮೆರೆದಿದೆ. 2018ರಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್, 2020ರ ವಿಶ್ವಕಪ್ ಜೊತೆಗೆ ಈ ವರ್ಷ ನ್ಯೂಜಿಲೆಂಡ್‌ನಲ್ಲಿ ನಡೆದ 50 ಓವರ್‌ಗಳ ಐಸಿಸಿ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಗೆಲುವು ಸಾಧಿಸಿದೆ.
ಮ್ಯಾಥ್ಯೂ ಮೋಟ್ ಅವಧಿಯಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ನಾಲ್ಕು ಬಾರಿ ಮಹಿಳಾ ಆ್ಯಶಸ್ ಸರಣಿಯನ್ನ ಗೆದ್ದಿದ್ದು, 2018ರಿಂದ 2021ರವರೆಗೆ ಸತತ 26 ಏಕದಿನ ಪಂದ್ಯಗಳನ್ನ ಗೆದ್ದ ಸಾಧನೆ ಮಾಡಿದೆ. ಹೀಗಾಗಿ ಇಂಗ್ಲೆಂಡ್ ಪುರುಷರ ತಂಡಕ್ಕೆ ಯಶಸ್ವಿ ಕೋಚ್ ಆಗಿರುವ ಮೋಟ್‌ರನ್ನು ಇಸಿಬಿ ಆಯ್ಕೆ ಮಾಡಿದೆ.
ಇತ್ತೀಚೆಗಷ್ಟೇ ಇಂಗ್ಲೆಂಡ್ ಪುರುಷರ ಟೆಸ್ಟ್ ತಂಡದ ಕೋಚ್ ಆಗಿ ನ್ಯೂಜಿಲೆಂಡ್‌ನ ಮಾಜಿ ನಾಯಕ ಬ್ರೆಂಡನ್ ಮೆಕಲಮ್‌ರನ್ನು ಆಯ್ಕೆ ಮಾಡಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications