ಐಪಿಎಲ್ ಆರಂಭಕ್ಕೂ ಮುನ್ನವೇ ಸಿಎಸ್‌ಕೆಗೆ ಮತ್ತೊಂದು ಪೆಟ್ಟು
ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಎಲ್ಲ ತಂಡಗಳು ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಂಡಿವೆ. ಈ ನಡುವೆ ಗಾಯದ ಸಮಸ್ಯೆ ತಂಡವನ್ನು ಬಹುವಾಗಿ ಕಾಡುತ್ತಿದೆ. ಈ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಹ ಸೇರಿದೆ. ಈಗಾಗಲೇ ಚೆನ್ನೈ ತಂಡದ ವೇಗದ ಬೌಲರ್ ನಾಥನ್ ಎಲಿಸ್ ಗಾಯದ ಕಾರಣದಿಂದಾಗಿ ಟೂರ್ನಿಯಿಂದ ಹೊರ ನಡೆದಿದ್ದಾರೆ. ಈ ನೋವು ಸಿಎಸ್‌ಕೆ ಅಭಿಮಾನಿಗಳ ಮನದಲ್ಲಿ ಹಸಿರಾಗಿರುವಾಗಲೇ, ಇನ್ನೋಬ್ಬ ಪ್ಲೇಯರ್ ಗಾಯಕ್ಕೆ ತುತ್ತಾಗಿರುವ ಸುದ್ದಿ ಹೊರ ಬಂದಿದೆ. ಈ ಸುದ್ದಿ ನಿಹಕ್ಕೂ ಮ್ಯಾನೇಜ್ಮೆಂಟ್ ಚಿಂತೆಯನ್ನು ದುಪಟ್ಟು ಮಾಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಹರಾಜಿಮಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಮ್ಯಾಥ್ಯೂ ಶಾರ್ಟ್ ಅವರನ್ನು ಖರೀದಿಸಿತ್ತು. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುವ ಲೆಕ್ಕಾಚಾರ ಇತ್ತು. ಆದರೆ ಈಗ ಈ ಲೆಕ್ಕಾಚಾರ ತೆಲೆ ಕೆಳಗಾಗಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ ಶಾರ್ಟ್ ಹೆಬ್ಬೆರಳಿನ ಗಾಯದಿಂದ ಬಳಲುತ್ತಿದ್ದು, ಇನ್ನು ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಆರಂಭಿಕ ಪಂದ್ಯಗಳಿಗೆ ಕಣಕ್ಕೆ ಇಳಿಯುವುದು ಅನುಮಾನವಾಗಿದೆ.

ಮ್ಯಾಥ್ಯೂ ಶಾರ್ಟ್ ದೇಶೀಯ ಟೂರ್ನಿಯಲ್ಲಿ ಆಡುವಾಗ ಕೆಲವು ದಿನಗಳ ಹಿಂದೆ ಅವರು ಗಾಯಕ್ಕೆ ತುತ್ತಾಗಿದ್ದರು. ಈ ಕಾರಣದಿಂದಾಗಿ ಅವರು ಚೆನ್ನೈ ಪರ 19ನೇ ಆವೃತ್ತಿಯ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಆಡುವುದು ಡೌಟ್ ಎಂದು ವರದಿಗಳು ಬಂದಿವೆ. ಇವರು ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದಲೇ ಹೆಸರುವಾಸಿಯಾದ ಆಟಗಾರ. ಅಗತ್ಯ ಬಿದ್ದಾಗ ಚೆಂಡಿನೊಂದಿಗೂ ತಂಡಕ್ಕೆ ಕೊಡುಗೆ ನೀಡುವ ಪ್ಲೇಯರ್.
ಮ್ಯಾಥ್ಯೂ ಶಾರ್ಟ್‌ಗೆ ಸಿಎಸ್‌ಕೆ ನೀಡಿದ್ದ ಹಣವೆಷ್ಟು?
ಸಿಎಸ್‌ಕೆ ಈ ಬಾರಿಯ ಹರಾಜಿನಲ್ಲಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿತ್ತು. ಅದರಲ್ಲಿ 9 ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಆಸ್ಟ್ರೇಲಿಯಾದ ಆಲ್‌ರೌಂಡರ್‌ಗೆ ಸಿಎಸ್‌ಕೆ 1.5 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಇವರು 2023ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ ಅನುಭವ ಹೊಂದಿದ್ದಾರೆ.
ಸಿಎಸ್‌ಕೆ ತಂಡದ ಗಾಯಾಳುಗಳ ಪಟ್ಟಿ ದಿನೇ ದಿನೇ ಹೆಚ್ಚಾಗುತ್ತದೆ. ನಾಥನ್ ಎಲ್ಲಿಸ್ ಈಗಾಗಲೇ ಟೂರ್ನಿಯಿಂದ ಹೊರ ನಡೆದಿದ್ದಾರೆ. ಈ ವೇಳೆ ಶಾರ್ಟ್ ಗಾಯಕ್ಕೆ ತುತ್ತಾಗಿದ್ದು ನಿಜಕ್ಕೂ ತಂಡಕ್ಕೆ ತಲೆ ನೋವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೊದಲ ಪಂದ್ಯವನ್ನು ಮಾರ್ಚ್ 30 ರಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications