Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಯಾಂಕ್ ದ್ವಿಶತಕ , ಪೃಥ್ವಿ ಶತಕ, ಭಾರತ 'ಎ' ಬೃಹತ್ ಮೊತ್ತ!

 Mayank Agarwal, Prithvi Shaw tons power India A against South Africa A

ಬೆಂಗಳೂರು, ಆಗಸ್ಟ್ 05: ಪೃಥ್ವಿ ಶಾ ಅವರ ಶತಕ, ಮಯಾಂಕ್ ಅಗರವಾಲ್ ದ್ವಿಶತಕದ ನೆರವಿನಿಂದ ಭಾರತ 'ಎ' ತಂಡವು ದಕ್ಷಿಣ ಆಫ್ರಿಕಾ 'ಎ' ವಿರುದ್ಧ ಬೃಹತ್ ಮೊತ್ತ ಪೇರಿಸಿರುವ ಸುಳಿವು ನೀಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿರುವ ನಾಲ್ಕು ದಿನಗಳ ಪಂದ್ಯದಲ್ಲಿಂದು ಮಯಾಂಕ್ ಹಾಗೂ ಪೃಥ್ವಿ ರನ್ ಮಳೆ ಹರಿಸಿದರು.

ಪೃಥ್ವಿ ಶಾ 136ರನ್ ( 196 ಎಸೆತ, 20‍‍ X4, 1X6) ಹಾಗೂ ಮಯಾಂಕ್ ಅಗರವಾಲ್ 220 ಅಜೇಯ (250 ಎಸೆತ, 31x4, 4x6) ಗಳಿಸಿ, ದಿನದ ಅಂತ್ಯಕ್ಕೆ ಭಾರತ 'ಎ' ತಂಡವು 87 ಓವರ್ ಗಳಲ್ಲಿ 411/2 ಸ್ಕೋರ್ ಮಾಡಿದೆ. ಕರ್ನಾಟಕದ ಮತ್ತೊಬ್ಬ ಆಟಗಾರ ಆರ್ ಸಮರ್ಥ್ 37ರನ್ ಗಳಿಸಿ ಔಟಾದರೆ, ನಾಯಕ ಶ್ರೇಯಸ್ ಅಯ್ಯರ್ ಅವರು 9ರನ್ ಗಳಿಸಿ ಆಡುತ್ತಿದ್ದಾರೆ.

ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ 'ಎ' ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 88.3 ಓವರ್ ಗಳಲ್ಲಿ 246ರನ್ ಗಳಿಸಿ ಆಲೌಟ್ ಅಯಿತು. ಸರೇಲ್ ಎರ್ವೀ 47ರನ್ ಗಳಿಸಿದರೆ, ವಿಕೆಟ್ ಕೀಪರ್ ರುಡಿ ಸೆಕೆಂಡ್ 94ರನ್ ಗಳಿಸಿದರು. ಭಾರತ 'ಎ' ಪರ ಮೊಹಮ್ಮದ್ ಸಿರಾಜ್ ಅವರು 56ಕ್ಕೆ5, ನವದೀಪ್ ಸೈನಿ ಹಾಗು ಗುರ್ಬಾನಿ 2 ವಿಕೆಟ್ ಗಳಿಸಿದರೆ, ಯಜುವೇಂದ್ರ ಚಾಹಲ್ 1 ವಿಕೆಟ್ ಪಡೆದರು.

ಇಂಗ್ಲೆಂಡ್ ಪ್ರವಾಸದ ವೇಳೆ ಲಿಸ್ಟ್ ಎ ಪಂದ್ಯದಲ್ಲಿ ಮೂರು ಶತಕ ಗಳಿಸಿರುವ ಮಯಾಂಕ್ ಅವರು ಭರ್ಜರಿ ಪ್ರದರ್ಶನ ನೀಡಿ ಆಯ್ಕೆ ಸಮಿತಿಯ ಗಮನ ಸೆಳೆದರು.

Story first published: Sunday, August 5, 2018, 19:07 [IST]
Other articles published on Aug 5, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+