Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಮಯಾಂಕ್ ಅಗರ್ವಾಲ್

 Mayank Agarwal Thanks Karnataka Government For Ekalavya Award

ಅಂತಾರಾಷ್ಟ್ರೀಯ ಕ್ರಿಕೆಟಿಗರಾದ ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಫವಾದ್ ಮಿರ್ಜಾ, ಈಜುಪಟುಗಳಾದ ಖುಷಿ ದಿನೇಶ್, ಶ್ರೀಹರಿ ನಟರಾಜ್, ಅಥ್ಲೀಟ್ ಜಿ. ವಿಜಯಕುಮಾರಿ ಸೇರಿದಂತೆ 31 ಮಂದಿ ಕ್ರೀಡಾ ಸಾಧಕರು ಪ್ರತಿಷ್ಠಿತ ಏಕಲವ್ಯ ಕ್ರೀಡಾ ಗೌರವಕ್ಕೆ ಭಾಜನರಾಗಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಏಕಲವ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುವ ಕರ್ನಾಟಕ ಸರ್ಕಾರಕ್ಕೆ ಟೀಮ್‌ ಇಂಡಿಯಾ ಆಟಗಾರ ಹಾಗೂ ಕಿಂಗ್ಸ್ ಇಲೆವೆನ್‌ ಪಂಜಾಬ್ ಆಟಗಾರ ಮಯಾಂಕ್ ಅಗರ್ವಾಲ್ ಧನ್ಯವಾದಗಳನ್ನು ತಿಳಿಸಿದ್ದಾರೆ.

''ನನ್ನ ಸಾಧನೆಯನ್ನ ಗುರುತಿಸಿ ನನಗೆ ಏಕಲವ್ಯ ಪ್ರಶಸ್ತಿ ನೀಡಿದ ಕರ್ನಾಟಕ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಈ ಅದ್ಭುತ ರಾಜ್ಯವನ್ನು ಪ್ರತಿನಿಧಿಸುವುದು ನನಗೆ ಹೆಮ್ಮೆಯ ಸಂಗತಿ.

ಈ ಪ್ರಶಸ್ತಿಗೆ ಕಾರಣರಾದ ಎಲ್ಲಾ ತರಬೇತುದಾರರು, ನನ್ನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ'' ಎಂದು ಮಯಾಂಕ್ ಅಗರ್ವಾಲ್ ಟ್ವೀಟ್ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

Story first published: Monday, November 2, 2020, 22:29 [IST]
Other articles published on Nov 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+