ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಯಂಕ್ ಅಗರ್ವಾಲ್ ಶತಕಕ್ಕೆ ತಲೆಬಾಗಿದ ವೆಸ್ಟ್ ಇಂಡೀಸ್ 'ಎ'

mayank agarwals century help india a to beat west indies a

ಲೀಸೆಸ್ಟರ್, ಜೂನ್ 26: ವೇಗದ ಬೌಲರ್ ದೀಪಕ್ ಚಾಹರ್ ಅವರ ಚುರುಕಿನ ದಾಳಿ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಮಯಂಕ್ ಅಗರ್ವಾಲ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ 'ಎ' ತಂಡವು ವೆಸ್ಟ್ ಇಂಡೀಸ್ 'ಎ' ತಂಡವನ್ನು ಸುಲಭವಾಗಿ ಮಣಿಸಿತು.

ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ಸ್ ಎದುರು ಸೋತಿದ್ದ ಭಾರತದ ಯುವ ಕ್ರಿಕೆಟಿಗರು, ವೆಸ್ಟ್ ಇಂಡೀಸ್ ವಿರುದ್ಧ ಪ್ರಾಬಲ್ಯ ಮೆರೆದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ತಂಡಕ್ಕೆ ದೀಪಕ್ ಚಾಹರ್ ಆರಂಭದಲ್ಲೇ ಆಘಾತ ನೀಡಿದರು. ಎರಡನೆಯ ಎಸೆತದಲ್ಲಿಯೇ ಜರ್ಮೈನ್ ಬ್ಲಾಕ್‌ವುಡ್ ಅವರ ವಿಕೆಟ್ ಕಿತ್ತ ಚಾಹರ್, ಬಳಿಕ ಆಂಡ್ರೆ ಮೆಕ್‌ಕರ್ತಿ ಅವರನ್ನು ಸಹ ಪೆವಿಲಿಯನ್‌ಗೆ ಅಟ್ಟಿದರು.

ಕ್ಲಾರ್ಕ್ ಈ ಸಲಹೆಗಳಿಂದ ಆಸ್ಟ್ರೇಲಿಯಾ 2019ರ ವಿಶ್ವಕಪ್ ಗೆಲ್ಲುತ್ತಂತೆ! ಕ್ಲಾರ್ಕ್ ಈ ಸಲಹೆಗಳಿಂದ ಆಸ್ಟ್ರೇಲಿಯಾ 2019ರ ವಿಶ್ವಕಪ್ ಗೆಲ್ಲುತ್ತಂತೆ!

ಚಂದ್ರಪಾಲ್ ಹೇಮರಾಜ್, ಡೆವೋನ್ ಥಾಮಸ್ ಅವರ ಅಲ್ಪ ಹೋರಾಟದ ನೆರವಿನಿಂದ ವೆಸ್ಟ್ ಇಂಡೀಸ್ ಇನ್ನೂರರ ಗಡಿ ದಾಟಿತು. ಕೊನೆಯ ವಿಕೆಟ್‌ಗೆ ಥಾಮಸ್ ಮತ್ತು ಚೆಮರ್ ಹೋಲ್ಡರ್ 41 ರನ್ ಕಲೆಹಾಕುವ ಮೂಲಕ ಭಾರತದ ಬೌಲರ್‌ಗಳನ್ನು ಕಾಡಿದರು.

ಭಾರತದ ಪರ ದೀಪಕ್ ಚಾಹರ್ ಕೇವಲ 27 ರನ್ ನೀಡಿ 5 ವಿಕೆಟ್ ಪಡೆದರು. ಅವರಿಗೆ ಶಾರ್ದೂಲ್ ಠಾಕೂರ್, ಖಲೀಲ್ ಅಹ್ಮದ್ ಅವರಿಂದ ಉತ್ತರ ಬೆಂಬಲ ದೊರಕಿತು.

ಸಾಧಾರಣ ಗುರಿ ಬೆನ್ನತ್ತಿದ ಭಾರತ 'ಎ' ತಂಡಕ್ಕೆ ಪೃಥ್ವಿ ಶಾ ವೇಗದ ಆರಂಭ ಒದಗಿಸಿದರು. 16 ಎಸೆತಗಳಲ್ಲಿ 27 ರನ್ ಬಾರಿಸಿದ ಪೃಥ್ವಿ ಶಾ ತಂಡದ ಮೊತ್ತ 38 ಆಗಿದ್ದಾಗ ವಿಕೆಟ್ ಒಪ್ಪಿಸಿದರು.

ಬಳಿಕ ಮತ್ತೊಬ್ಬ ಆರಂಭಿಕ ಆಟಗಾರ ಮಯಂಕ್ ಅಗರ್ವಾಲ್ ಅವರನ್ನು ಸೇರಿಕೊಂಡ ಶುಬ್‌ಮನ್ ಗಿಲ್ ನಿಧಾನಗತಿಯ ಆಟಕ್ಕೆ ಮೊರೆ ಹೋದರು. ಇನ್ನೊಂದೆಡೆ ಅಗರ್ವಾಲ್ ರನ್ ವೇಗವನ್ನು ಸಮತೋಲನದಲ್ಲಿರುವಂತೆ ನೋಡಿಕೊಂಡರು.

11 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 102 ಎಸೆತಗಳಲ್ಲಿ 112 ರನ್ ಗಳಿಸಿದ್ದ ಮಯಂಕ್ ಅಗರ್ವಾಲ್, ತಂಡವನ್ನು ಗೆಲುವಿನ ಹಂತಕ್ಕೆ ತಂದು ಔಟಾದರು.

ವೇಗಿಗಳ ಪರಿಪೂರ್ಣ ಭಾರತ ಕ್ರಿಕೆಟ್ ತಂಡ ದಾಳಿಗೆ ಸಜ್ಜಾಗಿದೆ: ಸಚಿನ್ವೇಗಿಗಳ ಪರಿಪೂರ್ಣ ಭಾರತ ಕ್ರಿಕೆಟ್ ತಂಡ ದಾಳಿಗೆ ಸಜ್ಜಾಗಿದೆ: ಸಚಿನ್

ಕೊನೆಯಲ್ಲಿ ರಿಷಬ್ ಪಂತ್ ಎರಡು ಸಿಕ್ಸರ್ ಸಿಡಿಸಿ ಇನ್ನೂ 12 ಓವರ್‌ಗಳು ಬಾಕಿ ಇರುವಾಗಲೇ ಗೆಲುವಿನ ಶಾಸ್ತ್ರ ಪೂರ್ಣಗೊಳಿಸಿದರು.

ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ಎ ತಂಡವು ಇಂಗ್ಲೆಂಡ್ ಲಯನ್ಸ್ ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್: 221/10 (49.1 ಓವರ್‌) ಚಂದ್ರಪಾಲ್ ಹೇಮರಾಜ್ 45, ಡೆವೊನ್ ಥಾಮಸ್ 64, ಜೇಸನ್ ಮಹಮದ್ 31, ದೀಪಕ್ ಚಾಹರ್ 27/5, ವಿಜಯ್ ಶಂಕರ್ 21/1, ಶಾರ್ದೂಲ್ ಠಾಕೂರ್ 46/1

ಭಾರತ: 222/3 (38.1 ಓವರ್) ಮಯಂಕ್ ಅಗರ್ವಾಲ್ 102, ಪೃಥ್ವಿ ಶಾ 27, ಶುಭ್‌ಮನ್ ಗಿಲ್ 58* ಡೊಮಿನಿಕ್ ಡ್ರೇಕ್ಸ್ 37/2, ಚೆಮರ್ ಹೋಲ್ಡರ್ 48/1

Story first published: Tuesday, June 26, 2018, 13:35 [IST]
Other articles published on Jun 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X