ಬಿನ್ನಿ ಎಲ್ಲಿ ಎಂದವರಿಗೆ ಟ್ವೀಟ್ ಬಾಣ ಬಿಟ್ಟ ಮಯಾಂತಿ ಲ್ಯಾಂಗರ್

ಮೊಹಾಲಿ, ಏಪ್ರಿಲ್ 17: ಐಪಿಎಲ್ 2019ರ ಸೀಸನ್ ನಲ್ಲಿ ಸಮರ್ಥವಾಗಿ ನಿರೂಪಣೆ ಮಾಡುತ್ತಿರುವ ಮಯಾಂತಿ ಲ್ಯಾಂಗರ್ ಅವರನ್ನು ಟ್ವಿಟ್ಟರಲ್ಲಿ ಕೆಣಕಿದವರಿಗೆ ಸರಿಯಾದ ಉತ್ತರ ತಿರುಗೇಟು ಸಿಕ್ಕಿದೆ.
ಕರ್ನಾಟಕ ಹಾಗೂ ರಾಜಸ್ಥಾನ್ ರಾಯಲ್ಸ್ ಆಟಗಾರ ಸ್ಟುವರ್ಟ್ ಬಿನ್ನಿ ಅವರ ಪತ್ನಿ ಮಯಾಂತಿ ಅವರನ್ನು ಟ್ವಿಟ್ಟರಲ್ಲಿ ಆಗಾಗ ಕುಹಕಿಗಳು ಕೆಣಕಿ, ಟ್ರಾಲ್ ಮಾಡುತ್ತಿರುತ್ತಾರೆ. ಆದರೆ, ಪ್ರತಿ ಬಾರಿ ಮಯಾಂತಿ ಖಡಕ್ ಉತ್ತರ ನೀಡಿ ಬಾಯ್ಮುಚ್ಚಿಸುತ್ತಾ ಬಂದಿದ್ದಾರೆ.
ಮಂಗಳವಾರದಂದು ನಡೆದ ಪಂದ್ಯದಲ್ಲಿ ಕಿಂಗ್ಸ್ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ ರಾಯಲ್ಸ್12 ರನ್ ಗಳಿಂದ ಸೋಲು ಕಂಡಿತ್ತು. ಆದರೆ, ಅಂತಿಮ ಹಂತದಲ್ಲಿ ಕಣಕ್ಕಿಳಿದ ಸ್ಟುವರ್ಟ್ ಬಿನ್ನಿ ಅವರು ಸಿಕ್ಸ್, ಫೋರ್ ಸಿಡಿಸಿ ರಂಜಿಸಿದರು.
ಐಪಿಎಲ್ 2019ರ ಆವೃತ್ತಿಯಲ್ಲಿ ಇದು ಮೊದಲ ಪಂದ್ಯವಾಗಿತ್ತು. ಮೂರು ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ ಅಜೇಯ 33 ರನ್ ಗಳಿಸಿದರೂ ರಾಜಸ್ಥಾನ ಗೆಲ್ಲಲಾಗಲಿಲ್ಲ. 183ರನ್ ಚೇಸ್ ಮಾಡಿದ ರಾಜಸ್ಥಾನ 170ರನ್ ಮಾತ್ರ ಗಳಿಸಲು ಸಾಧ್ಯವಾಯಿತು.
ಇನ್ನು ಟ್ವಿಟ್ಟರ್ ನಲ್ಲಿ 'ನಿಮ್ಮ ಪತಿ ಎಲ್ಲಿ?' ಎಂದು ಪ್ರಶ್ನಿಸಿದ ಅಶ್ವಿನ್ ಗೌರ್ ಎಂಬಾತನಿಗೆ ಉತ್ತರಿಸಿ, ಪಂಜಾಬ್ವಿರುದ್ಧದ ಬಿನ್ನಿಯ ಅದ್ಭುತ ಪ್ರದರ್ಶನವನ್ನು ನೋಡುವ ಅವಕಾಶವನ್ನು ತಪ್ಪಿಸಿಕೊಂಡಿದ್ದರೆ ಸ್ಸಾರಿ, ಮಾರುತಿ ಸುಜುಕಿ ಕ್ರಿಕೆಟ್ ಲೈವ್ ಸ್ಟಾರ್ ಸ್ಪೋರ್ಟ್, ಹಾಟ್ ಸ್ಟಾರ್ ನಲ್ಲಿ ಬರುತ್ತದೆ ನೋಡಿ ಎಂದು ಗೇಲಿ ಮಾಡಿ ಟ್ವೀಟ್ ಮಾಡಿದ್ದಾರೆ. .
ಇದಲ್ಲದೆ ಮಯಾಂತಿ ಅವರ ಟ್ವಿಟ್ಟರ್ ಖಾತೆ ಚಿತ್ರದಲ್ಲಿ ಬಿನ್ನಿ ಫೋಟೊ ಯಾಕಿಲ್ಲ, ಈ ಇನ್ನಿಂಗ್ಸ್ ನಂತರ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ ನವನೀತ್ ಎಂಬಾತನಿಗೆ ಉತ್ತರವಾಗಿ, ಬಿನ್ನಿ ಜತೆಗಿರುವ ಫೋಟೋ ಅಪ್ ಲೋಡ್ ಮಾಡಿ, ನವನೀತ್ ನಿಜವಾಗಿಯೂ? ನೀವು ನನ್ನ ನಂಬರ್ ತಿಳಿದಿಲ್ಲ. ಆ ಫೋಟೋವಿನ ವಾಸ್ತವದ ಬಗ್ಗೆ ನಿಮಗೆ ಗೊತ್ತಿಲ್ಲ. ಆದರೂ ತುಂಬಾ ಹುಡುಕಾಡಿ ಸೂಪರ್ ಫೋಟೋವನ್ನು ಅಪ್ಲೋಡ್ ಮಾಡಿದ ನಿಮಗೆ ಧನ್ಯವಾದಗಳು ಎಂದು ತಿರುಗೇಟು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications