MCC Membership: ಐವರು ಭಾರತೀಯರು ಸೇರಿ 17 ಕ್ರಿಕೆಟಿಗರಿಗೆ ಆಜೀವ ಸದಸ್ಯತ್ವ ನೀಡಿ ಗೌರವಿಸಿದ ಎಂಸಿಸಿ
ಕ್ರಿಕೆಟ್ ನಿಯಮಗಳ ಪೋಷಕವಾದ ಮ್ಯಾರಿಲೆಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ವಿಶ್ವ ಕ್ರಿಕೆಟ್‌ನ ಕೆಲವು ಶ್ರೇಷ್ಠ ಪುರುಷ ಮತ್ತು ಮಹಿಳಾ ಆಟಗಾರರಿಗೆ ಆಜೀವ ಸದಸ್ಯತ್ವವನ್ನು ನೀಡಿ ಗೌರವಿಸಿದೆ. ಬುಧವಾರ, ಏಪ್ರಿಲ್ 5ರಂದು 19 ಹೊಸ ಗೌರವಾನ್ವಿತ ಆಜೀವ ಸದಸ್ಯರನ್ನು ಘೋಷಿಸಿತು.
ಇದೇ ವೇಳೆ ಐವರು ಭಾರತೀಯ ಮಾಜಿ ಕ್ರಿಕೆಟಿಗರಿಗೆ ಎಂಸಿಸಿ ಆಜೀವ ಗೌರವ ಸದಸ್ಯತ್ವವನ್ನು ನೀಡಿ ಗೌರವಿಸಲಾಗಿದ್ದು, ಇದರಲ್ಲಿ ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಜೂಲನ್ ಗೋಸ್ವಾಮಿ ಮತ್ತು ಮಿಥಾಲಿ ರಾಜ್ ಇದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಅವರು 2007ರ ಐಸಿಸಿ ವಿಶ್ವ ಟಿ20 ವಿಶ್ವಕಪ್ ಮತ್ತು 2011ರ ಐಸಿಸಿ ವಿಶ್ವಕಪ್ ಗೆದ್ದ ತಂಡದ ಪ್ರಮುಖ ಸದಸ್ಯರಾಗಿದ್ದರು. ಮತ್ತೊಂದೆಡೆ, ಸುರೇಶ್ ರೈನಾ ಅವರು ಗಮನಾರ್ಹವಾದ 13 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ 5,500 ಏಕದಿನ ರನ್‌ಗಳನ್ನು ಬಾರಿಸಿದ್ದಾರೆ.
ಇದೇ ವೇಳೆ, ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ 211 ಏಕದಿನ ಇನ್ನಿಂಗ್ಸ್‌ಗಳಲ್ಲಿ 7,805 ರನ್‌ಗಳೊಂದಿಗೆ ಸಾರ್ವಕಾಲಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಇನ್ನು 2022ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಮಹಿಳಾ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ಮಹಿಳಾ ಕ್ರಿಕೆಟರ್ ಜೂಲನ್ ಗೋಸ್ವಾಮಿ ಅವರು ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮಹಿಳಾ ಬೌಲರ್ ಆಗಿದ್ದಾರೆ.
ಎಂಸಿಸಿ ಆಜೀವ ಸದಸ್ಯತ್ವ ಪಡೆದ ಭಾರತೀಯರು
ಎಂ.ಎಸ್. ಧೋನಿ - ಭಾರತ (2004-2019)
ಜೂಲನ್ ಗೋಸ್ವಾಮಿ - ಭಾರತ (2002-2022)
ಸುರೇಶ್ ರೈನಾ - ಭಾರತ (2005-2018)
ಮಿಥಾಲಿ ರಾಜ್ - ಭಾರತ (1999-2022)
ಯುವರಾಜ್ ಸಿಂಗ್ - ಭಾರತ (2000-2017)

ಇಯಾನ್ ಮಾರ್ಗನ್, ಜೆನ್ನಿ ಗನ್, ಲಾರಾ ಮಾರ್ಷ್, ಅನ್ಯಾ ಶ್ರಬ್‌ಸೋಲ್ ಮತ್ತು ಕೆವಿನ್ ಪೀಟರ್ಸನ್ ಎಂಸಿಸಿ ಆಜೀವ ಸದಸ್ಯತ್ವ ಗೌರವವನ್ನು ಪಡೆದ ಐದು ಮಾಜಿ ಇಂಗ್ಲೆಂಡ್ ಆಟಗಾರರಾಗಿದ್ದಾರೆ. 2017ರಲ್ಲಿ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಇಂಗ್ಲೆಂಡ್‌ನ ಮಹಿಳಾ ಏಕದಿನ ವಿಶ್ವಕಪ್ ವಿಜಯದಲ್ಲಿ ಜೆನ್ನಿ ಗನ್, ಲಾರಾ ಮಾರ್ಷ್ ಮತ್ತು ಅನ್ಯಾ ಶ್ರಬ್‌ಸೋಲ್ ಎಲ್ಲರೂ ಆಡಿದ್ದರು.
ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್ 2019ರ ಐಸಿಸಿ ಪುರುಷರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ಗೆ ಜಯ ತಂದುಕೊಟ್ಟರು. ಇನ್ನು ನಾಲ್ಕು ಬಾರಿ ಆಶಸ್ ಕಪ್ ವಿಜೇತರಾದ ಕೆವಿನ್ ಪೀಟರ್ಸನ್ ಇಂಗ್ಲೆಂಡ್‌ನ 2010ರ ಐಸಿಸಿ ಟಿ20 ವಿಶ್ವಕಪ್ ಗೆಲುವಿನಲ್ಲಿ ಸರಣಿಶ್ರೇಷ್ಠ ಆಟಗಾರನಾಗಿದ್ದರು.
ವೆಸ್ಟ್ ಇಂಡೀಸ್‌ನ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಮೆರಿಸ್ಸಾ ಆಗಿಲ್ಲೈರಾ, ಬಾಂಗ್ಲಾದೇಶದ ಮಶ್ರಫೆ ಮೊರ್ತಜಾ, ಪಾಕಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ಮತ್ತು ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಕೂಡ ಎಂಸಿಸಿಯಿಂದ ಗೌರವ ಪಡೆದ ಇತರ ಆಟಗಾರರಾಗಿದ್ದಾರೆ.
ಟೆಸ್ಟ್ ವೃತ್ತಿಜೀವನದಲ್ಲಿ 439 ವಿಕೆಟ್‌ಗಳನ್ನು ಪಡೆದ ಡೇಲ್ ಸ್ಟೇಯ್ನ್ ದಕ್ಷಿಣ ಆಫ್ರಿಕಾ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಆರು ಐಸಿಸಿ ಟೂರ್ನಮೆಂಟ್‌ಗಳು ಮತ್ತು 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಆಸ್ಟ್ರೇಲಿಯಾದ ರಾಚೆಲ್ ಹೇನ್ಸ್ ಸೇರಿದ್ದರೆ, ನ್ಯೂಜಿಲೆಂಡ್‌ನ ಆಮಿ ಸ್ಯಾಟರ್ಥ್‌ವೈಟ್ ಮತ್ತು ರಾಸ್ ಟೇಲರ್ ಎಂಸಿಸಿಯ ಗೌರವ ಸದಸ್ಯತ್ವ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications