
ಬುಧವಾರ ಎಂಸಿಸಿ ಕ್ರಿಕೆಟ್‌ನ ಮೂರು ನಿಯಮಗಳನ್ನು ಬದಲಾವಣೆ ಮಾಡಿತ್ತು. ಈ ಬದಲಾವಣೆ ಬಗ್ಗೆ ಸಾಕಷ್ಟು ಚರ್ಚೆಗಳು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಪ್ರತಿಯೊಬ್ಬರು ಕೂಡ ತಮ್ಮದೇ ದೃಷ್ಟಿಕೋನದಿಂದ ಈ ನಿಯಮಗಳನ್ನು ವಿಶ್ಲೇಷಣೆ ಮಾಡುತ್ತಿದ್ದಾರೆ. ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಸಚೊನ್ ತೆಂಡೂಲ್ಕರ್ ಕೂಡ ಈ ನಿಯಮಗಳ ಬದಲಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೋವಿಡ್‌ಗಿಂತ ಹಿಂದೆ ಕ್ರಿಕೆಟ್ ಚೆಂಡಿನ ಹೊಳಪು ಹೆಚ್ಚಿಸಲು ಎಂಜಲನ್ನು ಬಳಸಲಾಗುತ್ತಿತ್ತು. ಆದರೆ ಕೋವಿಡ್‌ನ ನಂತರ ಎಂಚಲನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಇದೀಗ ಕ್ರಿಕೆಟ್ ಚೆಂಡಿಗೆ ಎಂಜಲು ಬಳಸುವುದನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ. ಎಂಸಿಸಿ ಬದಲಾವಣೆ ಮಾಡಿರುವ ಎರಡನೇ ನಿಯಮ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಮಂಕಡಿಂಗ್. ಬೌಲರ್ ಬೌಲಿಂಗ್ ಮಾಡುವ ಮುನ್ನ ಬ್ಯಾಟರ್ ಕ್ರೀಸ್ ಬಿಟ್ಟು ಮುಂದೆ ಸಾಗಿದರೆ ಅದನ್ನು ಔಟ್ ಮಾಡುವುದನ್ನು ಎಂಸಿಸಿ ರನೌಟ್ ಎಂದು ಬದಲಾವಣೆ ಮಾಡಿಕೊಂಡಿದೆ. ಮೂರನೆಯದಾಗಿ ಕ್ಯಾಚ್ ನೀಡಿ ಔಟ್ ಆದ ಸಂದರ್ಭದಲ್ಲಿ ಬ್ಯಾಟರ್ ಕ್ರೀಸ್ ದಾಟಿದ್ದರೂ ಹೊಸ ಬ್ಯಾಟರ್ ಸ್ಟ್ರೈಕ್‌ನಲ್ಲಿಯೇ ಬ್ಯಾಟಿಂಗ್ ಮುಂದುವರಿಸಬೇಕು ಎಂಬ ಬದಲಾವಣೆಯನ್ನು ಎಂಸಿಸಿ ಮಾಡಿಕೊಂಡಿದೆ.
ಎಂಸಿಸಿ ಮಾಡಿರುವ ಈ ಬದಲಾವಣೆಯಲ್ಲಿ ಎರಡು ಬದಲಾವನೆಗೆ ಸಚಿನ್ ತೆಂಡೂಲ್ಕರ್ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ. ಮಾತ್ರವಲ್ಲ ಈ ಬದಲಾವನೆಗಳು ಕ್ರಿಕೆಟ್‌ಗೆ ಅಗತ್ಯವಾಗಿತ್ತು ಎಂಬರ್ಥದಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ಎಂಸಿಸಿ ಕಮಿಟಿ ಬದಲಾವನೆ ಮಾಡಿರುವ ನೂತನ ಕ್ರಿಕೆಟ್ ನಿಯಮಗಳ ಪೈಕಿ ಎರಡು ನಿಯಮಗಳಿಗೆ ನಾನು ಬೆಂಬಲಿಸುತ್ತೇನೆ. ಮೊದಲನೆಯದಾಗಿ ಮಂಕಡಿಂಗ್. ಮಂಕಡಿಂಗ್ ಎಂದು ಕರೆಯುವುದನ್ನು ನಾನು ಯಾವಾಗಲೂ ಅದನ್ನು ವಿರೋಧಿಸುತ್ತೇನೆ. ಅದನ್ನು ರನೌಟ್ ಎಂದು ಬದಲಾವಣೆ ಮಾಡಿರುವುದಕ್ಕೆ ನಾನು ನಿಜಕ್ಕೂ ಸಂತಸ ವ್ಯಕ್ತಪಡಿಸುತ್ತೇನೆ" ಎಂದು ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಸಿದ್ದಾರೆ.
ಇನ್ನು ಕ್ಯಾಚ್ ನೀಡಿ ಔಟಾಗುವ ಸಂದರ್ಭದಲ್ಲಿ ಬ್ಯಾಟರ್‌ಗಳು ಸ್ಟ್ರೈಕ್ ಬದಲಾವಣೆ ಮಾಡಿಕೊಳ್ಳುವ ನಿಯಮದ ಬದಲಾವಣೆಗೂ ಸಚಿನ್ ಬೆಂಬಲ ವ್ಯಕ್ತಪಡಿಸಿದ್ದಾರೆ. "ಈ ಹೊಸ ಬದಲಾವಣೆ ನಿಜಕ್ಕೂ ನ್ಯಾಯಯುತವಾಗಿದೆ, ಯಾಕೆಂದರೆ ಬೌಲರ್ ಓರ್ವ ಬ್ಯಾಟರ್‌ನನ್ನು ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದನೆಂದರೆ ಆತ ಹೊಸ ಬ್ಯಾಟರ್‌ಗೆ ಬೌಲಿಂಗ್ ಮಾಡಲು ದೊರೆತರೆ ನ್ಯಾಯ ಸಿಗುತ್ತದೆ. ಈ ಹೊಸ ನಿಯಮ ಉತ್ತಮವಾಗಿದ್ದು ಈ ಬದಕಲಾವಣೆಗಾಗಿ ನಾನು ಬೆಂಬಲ ನೀಡುತ್ತೇನೆ" ಎಂದು ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಕ್ರಿಕೆಟ್ ಚೆಂಡಿಗೆ ಎಂಜಲು ಬಳಸುವುದನ್ನು ನ್ಯಾಯಯುತವಲ್ಲದ ಅಭ್ಯಾಸ ಎಂದು ಪರಿಗಣಿಸಲಾಗುತ್ತದೆ ಎಂದು ನಿಯಮದಲ್ಲಿ ತಿಳಿಸಿದೆ. ಈ ಮೂರು ಬದಲಾವಣೆಗಳು ಕುಡ ಮುಂದಿನ ಅಕ್ಟೋಬರ್ ತಿಂಗಳ ಬಳಿಕ ಕಾರ್ಯರೂಪಕ್ಕೆ ಬರಲಿದೆ. ಅಲ್ಲಿಯವರೆಗೂ ಈಗಿನ ನಿಯಮದಂತೆಯೇ ಮುಂದುವರಿಯಲಿದೆ.