ಮಂಗಳವಾರ, ಜುಲೈ 25ರಂದು ನಡೆದ 2023ರ ಮೇಜರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ (ಟಿಎಸ್‌ಕೆ) ತಂಡವು ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ (ಎಸ್‌ಎಫ್‌ಯು) ತಂಡದ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿ, ಪ್ಲೇಆಫ್‌ಗೆ ಪ್ರವೇಶ ಪಡೆಯಿತು.
ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಫ್ರಾಂಚೈಸಿಯ ಸಹೋದರಿ ತಂಡ ಆಗಿರುವ ಟೆಕ್ಸಾಸ್ ಸೂಪರ್ ಕಿಂಗ್ಸ್, ತಮ್ಮ ಗೆಲುವಿನ ನಂತರ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದರು. ಇದೇ ವೇಳೆ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
ಮೊದಲು ಬ್ಯಾಟಿಂಗ್ ಮಾಡಿದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ 8 ವಿಕೆಟ್‌ಗೆ 171 ರನ್‌ಗಳಿಗೆ ನಿಯಂತ್ರಣಗೊಂಡಿತು. 172 ರನ್‌ಗಳ ಗುರಿ ಬೆನ್ನಟ್ಟಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡ 19.1 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ತಲುಪಿತು.

ಟೆಕ್ಸಾಸ್ ಸೂಪರ್ ಕಿಂಗ್ಸ್ ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭವನ್ನು ಪಡೆಯಲಿಲ್ಲ. ಮೊದಲ ಓವರ್‌ನಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಕಾರ್ಮಿ ಲೆ ರೌಕ್ಸ್ ಡಕ್‌ಗೆ ಔಟ್ ಮಾಡಿದರು. ಎರಡನೇ ಓವರ್‌ನಲ್ಲಿ 5 ಎಸೆತಗಳಲ್ಲಿ 4 ರನ್ ಗಳಿಸಿದ್ದ ಕೋಡಿ ಚೆಟ್ಟಿ ಅವರು ಹ್ಯಾರಿಸ್ ರೌಫ್ ಅವರಿಗೆ ವಿಕೆಟ್ ಒಪ್ಪಿಸಿದರು.
ಡೆವೊನ್ ಕಾನ್ವೆ ಅವರು ಟೆಕ್ಸಾಸ್ ಸೂಪರ್ ಕಿಂಗ್ಸ್‌ಗೆ ರನ್ ವೇಗವನ್ನು ನೀಡಲು ಪ್ರಯತ್ನಿಸಿದರು. 27 ಎಸೆತಗಳಲ್ಲಿ 30 ರನ್ ಗಳಿಸಿದ್ದಾಗ, ಒಂಬತ್ತನೇ ಓವರ್‌ನಲ್ಲಿ ಶಾದಾಬ್ ಖಾನ್ ಅವರ ಬೌಲಿಂಗ್‌ನಲ್ಲಿ ಸ್ಟಂಪ್ಡ್ ಆದರು.
ಇನ್ನು ಮಿಲಿಂದ್ ಕುಮಾರ್ ಅವರು ಮಾರ್ಕಸ್ ಸ್ಟೊಯಿನಿಸ್ ಅವರ ಬೌಲಿಂಗ್‌ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದರು. ಆದರೆ, ಟೆಕ್ಸಾಸ್ ಸೂಪರ್ ಕಿಂಗ್ಸ್ 13.1 ಓವರ್‌ಗಳಲ್ಲಿ 5 ವಿಕೆಟ್‌ಗೆ 92 ರನ್‌ಗಳಿಗೆ ಕುಸಿದಾಗ, ಮಿಲಿಂದ್ ಅವರು ಇನ್ನೊಂದು ತುದಿಯಲ್ಲಿ ತನ್ನ ಜೊತೆಗಾರರನ್ನು ಕಳೆದುಕೊಳ್ಳುತ್ತಲೇ ಇದ್ದರು.
ಬಳಿಕ, ಡೇನಿಯಲ್ ಸ್ಯಾಮ್ಸ್ ಕ್ರೀಸ್‌ಗೆ ಬಂದರು ಮತ್ತು ಮಿಲಿಂದ್ ಕುಮಾರ್ ಜೊತೆಗೂಡಿ ಉತ್ತಮ ಜೊತೆಯಾಟ ಒದಗಿಸಿದರು. ಇವರಿಬ್ಬರು ಕೇವಲ 26 ಎಸೆತಗಳಲ್ಲಿ 70 ರನ್‌ಗಳ ಜೊತೆಯಾಟದಿಂದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವನ್ನು 17.3 ಓವರ್‌ಗಳಲ್ಲಿ 6 ವಿಕೆಟ್‌ಗೆ 162 ರನ್‌ಗಳಿಗೆ ಕೊಂಡೊಯ್ದರು.
18 ಮತ್ತು 19ನೇ ಓವರ್‌ಗಳಲ್ಲಿ ಕ್ರಮವಾಗಿ ಮಿಲಿಂದ್ ಕುಮಾರ್ ಮತ್ತು ಡೇನಿಯಲ್ ಸ್ಯಾಮ್ಸ್ ಅವರನ್ನು ಔಟ್ ಮಾಡುವ ಮೂಲಕ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಮತ್ತೆ ಗೆಲ್ಲುವ ಆಸೆ ಹೊಂದಿತ್ತು.
ಆದರೆ, ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ಮಾರ್ಕಸ್ ಸ್ಟೊಯಿನಿಸ್ ಅವರ ಬೌಲಿಂಗ್‌ನಲ್ಲಿ ಕ್ಯಾಲ್ವಿನ್ ಸಾವೇಜ್ ಅವರು ಸಿಕ್ಸರ್ ಬಾರಿಸಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವನ್ನು ಗೆಲ್ಲಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ಇನ್ನಿಂಗ್ಸ್ ಅನ್ನು ಫಿನ್ ಅಲೆನ್ ಅವರು ಯುನಿಕಾರ್ನ್ಸ್ ಇನ್ನಿಂಗ್ಸ್ ಅನ್ನು ಬೌಂಡರಿಯೊಂದಿಗೆ ಪ್ರಾರಂಭಿಸಿದರು. ಆದರೆ ಅವರನ್ನು ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಡೇನಿಯಲ್ ಸ್ಯಾಮ್ಸ್ ಪೆವಿಲಿಯನ್‌ಗೆ ಕಳುಹಿಸಿದರು.
ನಾಲ್ಕನೇ ಓವರ್‌ನಲ್ಲಿ 12 ಎಸೆತಗಳಲ್ಲಿ 13 ರನ್ ಗಳಿಸಿ ಆಡುತ್ತಿದ್ದ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಗೆರಾಲ್ಡ್ ಕೊಯೆಟ್ಜಿ ಔಟ್ ಮಾಡುವ ಮೂಲಕ ತಳವೂರಲು ಅವಕಾಶ ನೀಡಲಿಲ್ಲ. ಆಗ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ 31 ರನ್‌ಗೆ 2 ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಆಗ ಮ್ಯಾಥ್ಯೂ ವೇಡ್ 30 ಎಸೆತಗಳಲ್ಲಿ 49 ರನ್ ಗಳಿಸಿ ತಮ್ಮ ತಂಡಕ್ಕೆ ಅಮೂಲ್ಯ ಕಾಣಿಕೆ ನೀಡಿದರು. ನಂತರ, ಯುನಿಕಾರ್ನ್ಸ್ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇತ್ತು.
ಚೈತನ್ಯ ಬಿಷ್ಣೋಯ್ ಅವರ 21 ಎಸೆತಗಳಲ್ಲಿ 3 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳೊಂದಿಗೆ 35 ರನ್ ಗಳಿಸಿದರು. ಕೊನೆಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ನಿಗದಿತ 20 ಓವರ್‌ಗಳಲ್ಲಿ 170 ರನ್ ಗಡಿ ದಾಟಿತು.