ಟೀಮ್ ಇಂಡಿಯಾದ 10 ಖ್ಯಾತ ಕ್ರಿಕೆಟಿಗರ ಪ್ರೀತಿಯ ಸಹೋದರಿಯರಿವರು

ಬೆಂಗಳೂರು: ಅಣ್ಣ-ತಂಗೀರ ಸಂಬಂಧ ಯಾವತ್ತಿಗೂ ಸ್ಪೆಶಲ್. ಅಣ್ಣನಿಗೆ ತಂಗಿ ಖುಷಿಯ ಕ್ಷಣದಲ್ಲಿ ಒಳ್ಳೆಯ ಸ್ನೇಹಿತೆಯಾಗಿ ಜೊತೆಯಾಗುತ್ತಾಳೆ. ನೋವಿನಲ್ಲಿದ್ದಾಗ ಅಮ್ಮನಂತೆ ಸಾಂತ್ವನಿಸುತ್ತಾಳೆ. ತಂಗಿಗೆ ಅಣ್ಣ ಮೊದಲ ಸ್ನೇಹಿತನಾಗಿ, ಸದಾ ರಕ್ಷಕನಾಗಿರುತ್ತಾನೆ. ಪರಸ್ಪರ ಕಿತ್ತಾಡಿಕೊಳ್ಳುತ್ತಾ, ಕಾಲೆಳೆದುಕೊಳ್ಳುತ್ತ ಮರುಕ್ಷಣ ರಾಜಿಯಾಗುತ್ತ ಸದಾ ಜೊತೆಯಾಗಿರುವ ಅಣ್ಣ-ತಂಗೀರ ಭಾವ ಬಂಧನ ಬೆಲೆ ಕಟ್ಟಲಾರದ್ದು.
ಆಗಸ್ಟ್ 3ರಂದು ರಕ್ಷಾ ಬಂಧನ. ಈ ದಿನ ಅಣ್ಣ-ತಂಗಿಯರು ಪರಸ್ಪರ ರಕ್ಷಣೆಯ ಭರವಸೆ ನೀಡಿಕೊಳ್ಳುತ್ತಾರೆ. ಕ್ರಿಕೆಟ್ ಲೋಕದ ಖ್ಯಾತರಿಗೂ ಅವರವರ ಸಹೋದರಿಯರು ರಕ್ಷಾಬಂಧನ ಶುಭ ಹಾರೈಸಿದ್ದಾರೆ.
ಟೀಮ್ ಇಂಡಿಯಾದ ಖ್ಯಾತ ಕ್ರಿಕೆಟಿಗ ಪ್ರೀತಿಯ ಸಹೋದರಿಯರ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆ? ಇಲ್ಲಿ ಖ್ಯಾತ ಕ್ರಿಕೆಟಿಗರು ಮತ್ತವರ ಸಹೋದರಿಯರ ಮಾಹಿತಿಯಿದೆ.

# ವಿರಾಟ್ ಕೊಹ್ಲಿ-ಭಾವನಾ
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಸೋದರಿ ಭಾವನಾ ಧಿಂಗ್ರ ಬಾಲ್ಯದಿಂದಲೂ ಆತ್ಮೀಯತೆ ಹಂಚಿಕೊಂಡು ಬೆಳೆದವರು. ರಕ್ಷಾ ಬಂಧನ ದಿನ ಭಾವನಾ ಜೊತೆಗಿರುವ ಫೋಟೋ ಶೇರ್ ಮಾಡಿರುವ ಕೊಹ್ಲಿ, 'ಹ್ಯಾಪೀ ಸಿಬ್ಲಿಂಗ್ಸ್ ಡೇ' ಎಂದು ಬರೆದುಕೊಂಡಿದ್ದಾರೆ.

# ಶಿಖರ್ ಧವನ್-ಶ್ರೇಷ್ಠ
ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್‌ಗೆ ಶ್ರೇಷ್ಠ ಹೆಸರಿನ ಸಹೋದರಿಯಿದ್ದಾರೆ. ಪರಸ್ಪರ ಪ್ರೀತಿಯಿಂದಿರುವ ಶಿಖರ್-ಶ್ರೇಷ್ಠ ಪ್ರತೀ ವರ್ಷವೂ ತಪ್ಪದೆ ರಕ್ಷಾಬಂಧನ ಆಚರಿಸಿಕೊಳ್ಳುತ್ತಾರೆ, ಅದರ ಸಂಭ್ರಮ ಹಂಚಿಕೊಳ್ಳುತ್ತಾರೆ.

# ಎಂಎಸ್ ಧೋನಿ-ಜಯಂತಿ
ಕೂಲ್ ಕ್ಯಾಪ್ಟನ್ ಖ್ಯಾತಿಯ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಜಯಂತಿ ಎನ್ನುವ ಸಹೋದರಿಯಿದ್ದಾರೆ. ಧೋನಿಗೆ ಅಕ್ಕನಾಗಿರುವ ಜಯಂತಿ ಧೋನಿ ಬಗ್ಗೆ ಅಷ್ಟೇ ಕಾಳಜಿ ವಹಿಸುತ್ತಾರೆ. ಅಂದ್ಹಾಗೆ ಜಯಂತಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

# ಜಸ್‌ಪ್ರೀತ್ ಬೂಮ್ರಾ-ಜೂಹಿಕಾ
ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ತನ್ನ ಸಹೋದರಿ ಜೂಹಿಕಾ ಅವರನ್ನು ತುಂಬಾ ಪ್ರೀತಿಸುತ್ತಾರೆ. ಅಣ್ಣ-ತಂಗಿಯ ಕ್ಷಣಗಳ ಚಿತ್ರಗಳನ್ನು ಬೂಮ್ರಾ ಆಗೀಗ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಜೂಹಿಕಾರ ಬರ್ತ್‌ಡೇಗೆ ಬೂಮ್ರಾ ಭಾವನಾತ್ಮಕವಾಗಿ ಸಂದೇಶ ಬರೆದು ಶುಭ ಕೋರಿದ್ದರು.

# ದೀಪಕ್-ರಾಹುಲ್-ಮಾಲತಿ
ಭಾರತದ ವೇಗಿಗಳಾದ ದೀಪಕ್ ಚಾಹರ್ ಮತ್ತು ರಾಹುಲ್ ಚಾಹರ್‌ಗೆ ಮಾಲತಿ ಹೆಸರಿನ ಸಹೋದರಿಯಿದ್ದಾರೆ. ತನ್ನ ಸಹೋದರರ ಬಗ್ಗೆ ಸದಾ ಕಾಳಜಿ ವಹಿಸುವ ಮಾಲತಿ, ಸಹೋದರರ ಸಾಧನೆಯತ್ತ ಗಮನ ಹರಿಸುತ್ತಿರುತ್ತಾರೆ.
# ಸುರೇಶ್ ರೈನಾ-ರೇಣು
ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಸುರೇಶ್ ರೈನಾ ಪ್ರತೀ ವರ್ಷವೂ ರಕ್ಷಾ ಬಂಧನದ ದಿನ ತನ್ನ ಸಹೋದರಿ ರೇಣು ಜೊತೆಗೆ ಫೋಟೋ ಹಂಚಿಕೊಳ್ಳುತ್ತಾರೆ. ಈ ಚಿತ್ರವನ್ನು 2018ರ ರಕ್ಷಾ ಬಂಧನ ದಿನ ರೈನಾ ಶೇರ್ ಮಾಡಿದ್ದರು.
# ಸಚಿನ್ ತೆಂಡೂಲ್ಕರ್-ಸವಿತಾ
'ಕ್ರಿಕೆಟ್ ದೇವರು', ಭಾರತದ ದಂತಕತೆ ಸಚಿನ್ ತೆಂಡೂಲ್ಕರ್‌ಗೆ ಸವಿತಾ ಹೆಸರಿನ ಸಹೋದರಿಯಿದ್ದಾರೆ. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಸವಿತಾ ಮಹತ್ವದ ಪಾತ್ರ ವಹಿಸಿದ್ದಾರೆ. ಸಚಿನ್ ಕೂಡ ಸವಿತಾ ಅವರನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ.

# ಅಜಿಂಕ್ಯ ರಹಾನೆ-ಅಪೂರ್ವಾ
ಭಾರತದ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಮತ್ತು ಸಹೋದರಿ ಅಪೂರ್ವಾ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕಳೆದ ವರ್ಷ ರಹಾನೆ ರಾಖಿ ದಿನ ಇಂಗ್ಲೆಂಡ್‌ನಲ್ಲಿದ್ದರು. ಈ ಬಾರಿ ಅವರಿಗೆ ರಕ್ಷಾ ಬಂಧನ ಆಚರಿಸುವ ಅವಕಾಶ ಸಿಕ್ಕಿದೆ.
# ಸೆಹ್ವಾಗ್-ಮಂಜು-ಅಂಜು
ಭಾರತದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್‌ಗೆ ಇಬ್ಬರು ಪ್ರೀತಿಯ ಸಹೋದರಿಯರಿದ್ದಾರೆ. ಅವರು ಹೆಸರು ಮಂಜು ಮತ್ತು ಅಂಜು. ರಕ್ಷಾ ಬಂಧನ ದಿನ ಸೆಹ್ವಾಗ್ ತನ್ನ ಸಹೋದರಿಯರೊಂದಿಗಿನ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.
# ಶ್ರೇಯಸ್ ಐಯ್ಯರ್-ನತಾಶಾ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ, ಟೀಮ್ ಇಂಡಿಯಾದಲ್ಲಿ 4ನೇ ಸ್ಥಾನಕ್ಕೆ ಗಟ್ಟಿಯಾಗುತ್ತಿರುವ ಶ್ರೇಯಸ್ ಐಯ್ಯರ್ ಅವರ ಸಹೋದರಿಯ ಹೆಸರು ನತಾಶಾ. ಸಾಮಾಜಿಕ ತಾಲತಾಣದಲ್ಲಿ ಶ್ರೇಯಸ್ ಮ್ಯಾಜಿಕ್ ಮಾಡಿ ಗಮನ ಸೆಳೆಯುವಾಗ ಆಗೀಗ ನತಾಶಾ ಕೂಡ ಕಾಣಿಸಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications