Men's Emerging Asia Cup 2023: 15 ಸದಸ್ಯರ ಪಾಕಿಸ್ತಾನ ತಂಡ ಪ್ರಕಟ; ಭಾರತ vs ಪಾಕ್ ಪಂದ್ಯ ಯಾವಾಗ?
ಜುಲೈ 14ರಿಂದ 23ರವರೆಗೆ ಶ್ರೀಲಂಕಾದಲ್ಲಿ ನಡೆಯುವ 2023ರ ಎಸಿಸಿ ಪುರುಷರ ಉದಯೋನ್ಮುಖ ಏಷ್ಯಾ ಕಪ್ ಪಂದ್ಯಾವಳಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು ತನ್ನ 15 ಸದಸ್ಯರ ತಂಡವನ್ನು ಶುಕ್ರವಾರ, ಜೂನ್ 23ರಂದು ಪ್ರಕಟಿಸಿದೆ.
ಎಂಟು ರಾಷ್ಟ್ರಗಳ 'ಎ' ತಂಡಗಳು ಏಷ್ಯಾ ಕಪ್ ಪ್ರಶಸ್ತಿಗಾಗಿ ಸೆಣಸಾಡಲಿವೆ. ಪಾಕಿಸ್ತಾನ 'ಎ' ತಂಡವನ್ನು ವಿಕೆಟ್‌ಕೀಪರ್-ಬ್ಯಾಟರ್ ಮೊಹಮ್ಮದ್ ಹ್ಯಾರಿಸ್ ಮುನ್ನಡೆಸಲಿದ್ದಾರೆ.

22 ವರ್ಷದ ಮೊಹಮ್ಮದ್ ಹ್ಯಾರಿಸ್ ಐದು ಏಕದಿನ ಮತ್ತು 9 ಟಿ20 ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದಾರೆ. ಹ್ಯಾರಿಸ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಉತ್ತಮ ಆರಂಭವನ್ನು ಹೊಂದಿಲ್ಲವಾದರೂ, ಅವರ ಆಟವನ್ನು ನೋಡಿದ ಜನರು ಮುಂದಿನ ದಿನಗಳಲ್ಲಿ ಉತ್ತಮ ಭರವಸೆ ಹೊಂದಿದ್ದಾರೆ.
ಮೊಹಮ್ಮದ್ ಹ್ಯಾರಿಸ್ ಏಪ್ರಿಲ್-ಮೇ ತಿಂಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ತವರಿನಲ್ಲಿ ಎದುರಿಸಿದ ಏಕದಿನ ಮತ್ತು ಟಿ20 ತಂಡಗಳ ಭಾಗವಾಗಿದ್ದರು.
ಇನ್ನು 24 ವರ್ಷದ ಪ್ರತಿಭಾವಂತ ಬ್ಯಾಟ್ಸ್‌ಮನ್ ಆಗಿರುವ ಒಮೈರ್ ಯೂಸುಫ್ ಅವರು ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಒಮೈರ್ ಯೂಸುಫ್ ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ಆದಾಗ್ಯೂ, ಅವರು ಪ್ರಥಮ ದರ್ಜೆ ಕ್ರಿಕೆಟ್ ಮತ್ತು ದೇಶೀಯ ಟಿ20 ಪಂದ್ಯಗಳಲ್ಲಿ ಉತ್ತಮ ರನ್‌ಗಳನ್ನು ಗಳಿಸಿದ್ದಾರೆ.
ಒಮೈರ್ ಯೂಸುಫ್ ಆಡಿದ 40 ಪ್ರಥಮ ದರ್ಜೆ ಪಂದ್ಯಗಳಲ್ಲಿ 43.33 ಸರಾಸರಿಯಲ್ಲಿ 2687 ರನ್ ಗಳಿಸಿದ್ದಾರೆ. ಟಿ20 ಕ್ರಿಕೆಟ್‌ನ 10 ಇನ್ನಿಂಗ್ಸ್‌ಗಳಲ್ಲಿ 41.42 ಸರಾಸರಿ ಮತ್ತು 145 ಸ್ಟ್ರೈಕ್ ರೇಟ್‌ನಲ್ಲಿ 290 ರನ್ ಗಳಿಸಿದ್ದಾರೆ.
ಒಮೈರ್ ಯೂಸುಫ್ ಅವರು ಜಿಂಬಾಬ್ವೆ ಎ ವಿರುದ್ಧದ ಇತ್ತೀಚಿನ ಸರಣಿಯಲ್ಲಿ ನಾಲ್ಕು ಪಂದ್ಯಗಳಲ್ಲಿ 275 ರನ್ ಗಳಿಸುವ ಮೂಲಕ ಪಾಕಿಸ್ತಾನ ಎ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾದರು.
ಶಹನವಾಜ್ ದಹಾನಿ ಪಾಕಿಸ್ತಾನ ಎ ತಂಡದಲ್ಲಿ ಸ್ಥಾನ ಪಡೆದಿರುವ ಮತ್ತೊಂದು ಹೆಸರು. ಬಲಗೈ ಬೌಲರ್ ಪಾಕಿಸ್ತಾನದ ದೇಶೀಯ ವಲಯಗಳಲ್ಲಿ ಉತ್ತಮ ಪ್ರದರ್ಶನಕಾರರಾಗಿದ್ದಾರೆ. 24ರ ಹರೆಯದ ದಹಾನಿ ಪಾಕಿಸ್ತಾನ ಪರ ಎರಡು ಏಕದಿನ ಮತ್ತು 11 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಪಾಕಿಸ್ತಾನ ಎ ತಂಡವು ಮೇ ತಿಂಗಳಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದಾಗ ಶಹನವಾಜ್ ದಹಾನಿ ಅವರು ಜಿಂಬಾಬ್ವೆ ಎ ವಿರುದ್ಧ ಆರು ಏಕದಿನ ಪಂದ್ಯಗಳನ್ನು ಆಡಿದರು ಮತ್ತು 4-2ರಲ್ಲಿ ಸೋಲು ಕಂಡರು. ಆದಾಗ್ಯೂ, ಆತಿಥೇಯ ತಂಡವು ಕ್ರೇಗ್ ಎರ್ವಿನ್, ಸಿಕಂದರ್ ರಜಾ ಮತ್ತು ಸೀನ್ ವಿಲಿಯಮ್ಸ್ ಅವರಂತಹ ಹೆಚ್ಚಿನ ಹಿರಿಯ ಆಟಗಾರರನ್ನು ಆಡಿಸಿತ್ತು ಎಂಬುದನ್ನು ಗಮನಿಸಬೇಕು.
ಜುಲೈ 16ರಂದು ಭಾರತ ಎ vs ಪಾಕಿಸ್ತಾನ ಎ ತಂಡಗಳ ಮುಖಾಮುಖಿ
2023ರ ಎಸಿಸಿ ಪುರುಷರ ಉದಯೋನ್ಮುಖ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಜುಲೈ 16ರಂದು ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳ ನಡುವಿನ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಎರಡು ತಂಡಗಳು ನೇಪಾಳ ಎ ಮತ್ತು ಶ್ರೀಲಂಕಾ ಎ ತಂಡಗಳ ಜೊತೆಗೆ ಎ ಗುಂಪಿನಲ್ಲಿವೆ.
ಉದಯೋನ್ಮುಖ ಏಷ್ಯಾ ಕಪ್ 2023: ಪಾಕಿಸ್ತಾನ ಎ ತಂಡ
ಮೊಹಮ್ಮದ್ ಹ್ಯಾರಿಸ್ (ನಾಯಕ/ವಿಕೆಟ್ ಕೀಪರ್), ಒಮೈರ್ ಬಿನ್ ಯೂಸುಫ್ (ಉಪನಾಯಕ), ಅಮದ್ ಬಟ್, ಅರ್ಷದ್ ಇಕ್ಬಾಲ್, ಹಸೀಬುಲ್ಲಾ, ಕಮ್ರಾನ್ ಗುಲಾಮ್, ಮೆಹ್ರಾನ್ ಮುಮ್ತಾಜ್, ಮುಬಾಸಿರ್ ಖಾನ್, ಮೊಹಮ್ಮದ್ ವಾಸಿಂ ಜೂನಿಯರ್, ಖಾಸಿಮ್ ಅಕ್ರಮ್, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಶಾನವಾಜ್ ದಹಾನಿ, ಸುಫಿಯಾನ್ ಮುಖೀಮ್, ತಯ್ಯಬ್ ತಾಹಿರ್
ಮೀಸಲು ಆಟಗಾರರು: ಅಬ್ದುಲ್ ವಾಹಿದ್ ಬಂಗಲ್ಝೈ, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಜುನೈದ್ ಮತ್ತು ರೋಹೈಲ್ ನಜೀರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications