Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Men's Emerging Asia Cup 2023: ಉದಯೋನ್ಮುಖ ಏಷ್ಯಾಕಪ್‌ಗಾಗಿ ಭಾರತ ತಂಡ ಪ್ರಕಟ; ಯಶ್ ಧುಲ್ ನಾಯಕ

ಜುಲೈನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ 2023ರ ಎಸಿಸಿ ಪುರುಷರ ಉದಯೋನ್ಮುಖ ಏಷ್ಯಾ ಕಪ್ ಪಂದ್ಯಾವಳಿಗಾಗಿ ಭಾರತ ಎ ತಂಡವನ್ನು ಮಂಗಳವಾರ, ಜುಲೈ 4ರಂದು ಪ್ರಕಟಿಸಿದೆ. ಯಶ್ ಧುಲ್ ನಾಯಕತ್ವದ ಭಾರತ ತಂಡದಲ್ಲಿ 15 ಸದಸ್ಯರಿದ್ದು, ನಾಲ್ವರು ಸ್ಟ್ಯಾಂಡ್‌ಬೈ ಆಟಗಾರರು ಸ್ಥಾನ ಪಡೆದಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಜೂನಿಯರ್ ಕ್ರಿಕೆಟ್ ಸಮಿತಿಯು ಜುಲೈ 13ರಿಂದ 23ರವರೆಗೆ ಎಸಿಸಿ ಪುರುಷರ ಉದಯೋನ್ಮುಖ 2023ರ ಏಷ್ಯಾ ಕಪ್ ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದೆ. ಏಷ್ಯಾದ ಎಂಟು ರಾಷ್ಟ್ರಗಳ ನಡುವೆ ಈ ಟೂರ್ನಿ 50 ಓವರ್‌ಗಳ ಮಾದರಿಯಲ್ಲಿ ನಡೆಯಲಿದೆ.

Mens Emerging Asia Cup 2023

ಭಾರತ ಎ ತಂಡವು ನೇಪಾಳ, ಯುಎಇ ಎ ಮತ್ತು ಪಾಕಿಸ್ತಾನ ಎ ತಂಡಗಳೊಂದಿಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇನ್ನು ಶ್ರೀಲಂಕಾ ಎ, ಬಾಂಗ್ಲಾದೇಶ ಎ, ಅಫ್ಘಾನಿಸ್ತಾನ ಎ ಮತ್ತು ಒಮನ್ ಎ ತಂಡಗಳು ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್ ಹಂತಕ್ಕೆ ಮುನ್ನಡೆಯುತ್ತವೆ.

ಮೊದಲ ಸೆಮಿಫೈನಲ್ ಎ ಗುಂಪಿನ ಅಗ್ರಸ್ಥಾನಿಗಳ ನಡುವೆ ಬಿ ಗುಂಪಿನಿಂದ 2ನೇ ಸ್ಥಾನ ಹೊಂದಿರುವವರ ನಡುವೆ ನಡೆಯಲಿದ್ದರೆ, ಎರಡನೇ ಸೆಮಿಫೈನಲ್ ಬಿ ಗುಂಪಿನ ಟಾಪರ್ ಮತ್ತು ಎ ಗುಂಪಿನಿಂದ 2ನೇ ಸ್ಥಾನ ಪಡೆದಿರುವ ತಂಡದ ನಡುವೆ ಜುಲೈ 21ರಂದು ಸ್ಪರ್ಧಿಸಲಿದೆ. ಫೈನಲ್ ಪಂದ್ಯವು ಜುಲೈ 23ರಂದು ನಡೆಯಲಿದೆ.

2023ರ ಎಸಿಸಿ ಪುರುಷರ ಉದಯೋನ್ಮುಖ ಏಷ್ಯಾ ಕಪ್ ಪಂದ್ಯಾವಳಿಗೆ ಭಾರತ ಎ ತಂಡ

ಯಶ್ ಧುಲ್ (ನಾಯಕ), ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ (ವಿಕೆಟ್ ಕೀಪರ್), ನಿಕಿನ್ ಜೋಸ್, ಪ್ರದೋಶ್ ರಂಜನ್ ಪಾಲ್, ರಿಯಾನ್ ಪರಾಗ್, ನಿಶಾಂತ್ ಸಿಂಧು, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಮಾನವ್ ಸುತಾರ್, ಯುವರಾಜ್‌ಸಿಂಗ್ ದೋಡಿಯಾ, ಹರ್ಷಿತ್ ರಾಣಾ, ಆಕಾಶ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ರಾಜವರ್ಧನ್ ಹಂಗರ್ಗೇಕರ್.

ಸ್ಟ್ಯಾಂಡ್‌ಬೈ ಆಟಗಾರರು: ಹರ್ಷ್ ದುಬೆ, ನೆಹಾಲ್ ವಧೇರಾ, ಸ್ನೆಲ್ ಪಟೇಲ್, ಮೋಹಿತ್ ರೆಡ್ಕರ್.

ಕೋಚಿಂಗ್ ಸಿಬ್ಬಂದಿ: ಸಿತಾಂಶು ಕೊಟಕ್ (ಮುಖ್ಯ ಕೋಚ್), ಸಾಯಿರಾಜ್ ಬಹುತುಲೆ (ಬೌಲಿಂಗ್ ಕೋಚ್), ಮುನಿಶ್ ಬಾಲಿ (ಫೀಲ್ಡಿಂಗ್ ಕೋಚ್).

Story first published: Tuesday, July 4, 2023, 20:17 [IST]
Other articles published on Jul 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+