ಫುಟ್ಬಾಲ್ ಆಟಗಾರರು, ಕ್ರಿಕೆಟ್ ಆಟಗಾರರನ್ನು ಒಂದೇ ಮೈದಾನದಲ್ಲಿ ನೋಡುವ ಆಸೆ ಈಡೇರಲಿದೆ. ಭಾರತದ ಕ್ರೀಡಾಭಿಮಾನಿಗಳಿಗೆ ಈ ವರ್ಷದ ಅಂತ್ಯದಲ್ಲಿ ಹಬ್ಬದೂಟ ಸಿಗಲಿದೆ. ವಿಶ್ವದ ದಿಗ್ಗಜ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಭಾರತಕ್ಕೆ ಮತ್ತೊಮ್ಮೆ ಬರಲಿದ್ದಾರೆ. ಈ ವೇಳೆ ಇವರು ಭಾರತದ ಸ್ಟಾರ್ ಆಟಗಾರರೊಂದಿಗೆ ಮೈದಾನ ಪ್ರವೇಶಿಸುತ್ತಾರೆ ಎಂಬ ಬಗ್ಗೆ ಉತ್ತರ ಇಲ್ಲಿದೆ.
ದಿ ಇಂಡಿಯನ್ ಎಕ್ಸ್‌ಪ್ರೇಸ್ ವರದಿಯ ಅನುಸಾರ ಮೆಸ್ಸಿ ಅವರ ಬಹು ನಿರೀಕ್ಷಿತ ಭಾರತದ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದೆ. ಅಲ್ಲದೆ ಡಿಸೆಂಬರ್ 14 ರಂದು ಸೆವೆನ್ ಎ ಸೈಡ್ ಕ್ರಿಕೆಟ್ ಪಂದ್ಯ ನಡೆಯುವ ಸಾಧ್ಯತೆ ಇದೆ. ಡಿಸೆಂಬರ್ ಅಂತ್ಯದಲ್ಲಿ ಮೆಸ್ಸಿ ಭಾರತ ಪ್ರವಾಸವನ್ನು ಬೆಳೆಸಲಿದ್ದು, ಈ ಕಾರ್ಯಕ್ರಮಕ್ಕೆ ವಾಂಖೆಡೆ ಕ್ರೀಡಾಂಗಣ, ಈಡನ್ ಗಾರ್ಡನ್ ಹಾಗೂ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಮೈದಾನದಲ್ಲಿ ಕ್ರಿಕೆಟ್ ಟೂರ್ನಿ ನಡೆಯಲಿದೆ. ಮೆಸ್ಸಿ ಅವರಿಗೆ ಈ ಕಾರ್ಯಕ್ರಮದಲ್ಲಿ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್ ಅವರೊಂದಿಗೆ ಕ್ರಿಕೆಟ್ ಆಡುವುದನ್ನು ಸಹ ಅಭಿಮಾನಿಗಳು ಕಾಣಬಹುದಾಗಿದೆ.

ಏಳು ಆಟಗಾರರ ನಡುವಣ ಕ್ರಿಕೆಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಭಾಗವಹಿಸಲಿದ್ದಾರೆ. ಈ ಟೂರ್ನಿಗೆ ಭಾರತ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ವಾಂಖೇಡೆ ಕ್ರೀಡಾಗಂಣ ಆತಿಥ್ಯ ವಹಿಸಲಿದೆ. ಈ ಟೂರ್ನಿಗೆ ಗೋಟ್ ಕಪ್ ಎಂದು ಹೆಸರಿಡಲಾಗಿದೆ. ಮೆಸ್ಸಿ 2011ರಲ್ಲಿ ಕೊನೆಯ ಬಾರಿಗೆ ಭಾರತಕ್ಕೆ ಬಂದಿದ್ದರು. ಕಳೆದ ಬಾರಿ ಮೆಸ್ಸಿ ಭಾರತಕ್ಕೆ ಬಂದಾಗ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ವೆನೆಜುವೆಲಾ ವಿರುದ್ಧ ಸೌಹಾರ್ದ ಫುಟ್ಬಾಲ್ ಪಂದ್ಯವನ್ನು ಆಡಿದ್ದರು.
ಲೆಜೆಂಡರಿ ಆಟಗಾರ ಫುಟ್ಬಾಲ್ ಬ್ಯಾಲನ್ ಡಿ'ಓರ್ಸ್, ಆರು ಯುರೋಪಿಯನ್ ಗೋಲ್ಡನ್ ಶೂಗಳು ಮತ್ತು 45 ತಂಡ ಟ್ರೋಫಿಗಳನ್ನು ಗೆದ್ದಿದ್ದಾರೆ. ಅಲ್ಲದೆ ಕ್ಲಬ್ ಪರ 672 ಗೋಲ್‌ಗಳನ್ನು ದಾಖಲಿಸಿದ ಹಿರಿಮೆ ಹೊಂದಿದ್ದಾರೆ. ಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ 2022 ರಲ್ಲಿ ತಮ್ಮ ಮೂರನೇ ವಿಶ್ವಕಪ್ ಅನ್ನು ಗೆದ್ದಿತ್ತು.

ಲಿಯೋನೆಲ್ ಮೆಸ್ಸಿ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಈ ಮೊದಲೇ ಕೇರಳ ಸರ್ಕಾರದ ಸಚಿವರು ತಿಳಿಸಿದ್ದರು. ಮುನ್ನ ಎಲ್ಲವೂ ಅಂದುಕೊಂಡಂತೆ ಆದ್ರೆ, ಅರ್ಜಿಂಟೀನಾ ಫುಟ್ಬಾಲ್ ತಂಡವು ಅಭ್ಯಾಸ ಪಂದ್ಯವನ್ನು ಆಡಲಿದೆ. ಈ ಪಂದ್ಯ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಕೇರಳದ ಕ್ರೀಡಾ ಸಚಿವರೇ ಬಹಿರಂಗ ಪಡಿಸಿದ್ದರು. ಈ ಪಂದ್ಯಕ್ಕೆ ಕೇರಳದ ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣ ಸಾಕ್ಷಿಯಾಗಲಿದೆ ಎಂದು ತಿಳಿದು ಬಂದಿದೆ.