IPL Auction 2023: ಮಿನಿ ಹರಾಜಿನಲ್ಲಿ ಕ್ಯಾಮರೂನ್ ಗ್ರೀನ್ ಸೇರ್ಪಡೆ; ಹೇಗಿದೆ ಮುಂಬೈ ಇಂಡಿಯನ್ಸ್ ತಂಡ?

ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ (ಎಂಐ) ತಂಡ ಐಪಿಎಲ್ 2022ರ ಕಳಪೆ ಋತುವನ್ನು ಹೊಂದಿತ್ತು. ಗುಂಪು ಹಂತದಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಗೆದ್ದು ತಮ್ಮ ಇತಿಹಾಸದಲ್ಲಿ ಮೊದಲ ಬಾರಿಗೆ ಕೊನೆಯ ಸ್ಥಾನವನ್ನು ಮುಗಿಸಿದರು.
ನಿರಾಶಾದಾಯಕ ಋತುವಿನ ಹೊರತಾಗಿಯೂ, ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ ಮತ್ತು ಟಿಮ್ ಡೇವಿಡ್ ಅವರಂತಹ ಆಟಗಾರರಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೆಲವು ಸಂಭಾವ್ಯ ಸೂಪರ್‌ಸ್ಟಾರ್ ಆಟಗಾರರನ್ನು ಕಂಡುಕೊಂಡಿದೆ. ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಮತ್ತು ನಾಯಕ ರೋಹಿತ್ ಶರ್ಮಾ ಅವರಂತಹ ದೊಡ್ಡ ಆಟಗಾರರನ್ನು ಐಪಿಎಲ್ 2023ರ ಸೀಸನ್‌ಗೆ ಮುಂಚಿತವಾಗಿ ಉಳಿಸಿಕೊಳ್ಳಲಾಗಿದೆ.
ಐಪಿಎಲ್ 2023ರ ಮಿನಿ ಹರಾಜಿನಲ್ಲಿ ಲೆಜೆಂಡರಿ ಆಲ್‌ರೌಂಡರ್ ಕೀರಾನ್ ಪೊಲಾರ್ಡ್ ಅವರ ಸ್ಥಾನವನ್ನು ಮುಂಬೈ ಹೇಗೆ ತುಂಬಲಿದೆ ಎಂಬುದರ ಮೇಲೆ ಎಲ್ಲರ ಕಣ್ಣುಗಳು ಇದ್ದವು. ಇದೀಗ ಆಸ್ಟ್ರೇಲಿಯಾದ ಯುವ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿಸಿ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಕ್ಯಾಮರೂನ್ ಗ್ರೀನ್ ಅವರು ಐಪಿಎಲ್ ಇತಿಹಾಸದಲ್ಲಿ 17.5 ಕೋಟಿ ರೂ.ಗೆ ಮಾರಾಟವಾಗಿ ಎರಡನೇ ಅತ್ಯಂತ ದುಬಾರಿ ಆಟಗಾರರೆನಿಸಿದರು.

ತಮ್ಮ ಆರನೇ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಲು ಪ್ರಯತ್ನ
ಜೇಸನ್ ಬೆಹ್ರೆನ್‌ಡಾರ್ಫ್ ಕೂಡ ತೆಕ್ಕೆಗೆ ಬಿದ್ದಿದ್ದು, ಬಿಗ್ ಬ್ಯಾಷ್ ಲೀಗ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಝೈ ರಿಚರ್ಡ್‌ಸನ್ ಅವರನ್ನು ಸಹ ಮುಂಬೈ ಇಂಡಿಯನ್ಸ್ ಖರೀದಿಸಿತು. ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್ ಅವರ ಸಹೋದರ ಡುವಾನ್ ಜಾನ್ಸೆನ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಒಟ್ಟಾರೆಯಾಗಿ, ಮುಂಬೈ ಇಂಡಿಯನ್ಸ್ ಕಳೆದ ವರ್ಷಕ್ಕಿಂತ ಹೆಚ್ಚು ಸಮತೋಲಿತ ತಂಡವಾಗಿ ಕಾಣುತ್ತದೆ. ಪ್ರಸ್ತುತ ಇರುವ ತಂಡದೊಂದಿಗೆ ಮುಂಬೈ ಮೈದಾನಕ್ಕೆ ಇಳಿಯಲು ಮತ್ತು ತಮ್ಮ ಆರನೇ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಲು ಎದುರು ನೋಡುತ್ತಿದೆ.

ಬೆಲೆಯೊಂದಿಗೆ ಮುಂಬೈ ಇಂಡಿಯನ್ಸ್ ಹೊಸ ಆಟಗಾರರ ಪಟ್ಟಿ
ಕ್ಯಾಮರೂನ್ ಗ್ರೀನ್ - 17.5 ಕೋಟಿ ರೂ.
ಜ್ಯೆ ರಿಚರ್ಡ್ಸನ್ - 1.5 ಕೋಟಿ ರೂ.
ಪಿಯೂಷ್ ಚಾವ್ಲಾ - 50 ಲಕ್ಷ ರೂ.
ಡುವಾನ್ ಜಾನ್ಸೆನ್ - 20 ಲಕ್ಷ ರೂ.
ವಿಷ್ಣು ವಿನೋದ್ - 20 ಲಕ್ಷ ರೂ.
ಶಮ್ಸ್ ಮುಲಾನಿ - 20 ಲಕ್ಷ ರೂ.
ನೇಹಾಲ್ ವಧೇರಾ - 20 ಲಕ್ಷ ರೂ.
ರಾಘವ್ ಗೋಯಲ್ - 20 ಲಕ್ಷ ರೂ.

ಐಪಿಎಲ್ 2023ರ ಮುಂಬೈ ಇಂಡಿಯನ್ಸ್ ಪೂರ್ಣ ತಂಡ
ರೋಹಿತ್ ಶರ್ಮಾ (ನಾಯಕ), ಟಿಮ್ ಡೇವಿಡ್, ರಮಣದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಅರ್ಜುನ್ ತೆಂಡೂಲ್ಕರ್, ಅರ್ಷದ್ ಖಾನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಜೇಸನ್ ಬೆಹ್ರೆಂಡಾರ್ಫ್, ಆಕಾಶ್ ಮಧ್ವಾಲ್, ಕ್ಯಾಮರೂನ್ ಗ್ರೀನ್, ಜ್ಯೆ ರಿಚರ್ಡ್ಸನ್, ಪಿಯೂಷ್ ಚಾವ್ಲಾ, ಡುವಾನ್ ಜಾನ್ಸೆನ್, ವಿಷ್ಣು ವಿನೋದ್, ಶಾಮ್ಸ್ ಮುಲಾನಿ, ನೆಹಾಲ್ ವಧೇರಾ, ರಾಘವ್ ಗೋಯಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications