ಚೆನ್ನೈ ವಿರುದ್ಧ ಗೆದ್ದು ಐಪಿಎಲ್ ಇತಿಹಾಸ ನಿರ್ಮಿಸಲಿದೆಯೆ ಮುಂಬೈ ಇಂಡಿಯನ್ಸ್?

ಮುಂಬೈ, ಏಪ್ರಿಲ್ 3: ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ಬುಧವಾರ (ಏಪ್ರಿಲ್ 3) ನಡೆಯವ ಐಪಿಎಲ್ 15ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ಐಪಿಎಲ್ ಇತಿಹಾಸ ನಿರ್ಮಿಸುವತ್ತ ಮುಂಬೈ ಇಂಡಿಯನ್ಸ್ ಕಣ್ಣಿಟ್ಟಿದೆ. ಈ ಪಂದ್ಯವನ್ನೇನಾದರೂ ಮುಂಬೈ ಗೆದ್ದರೆ ಐಪಿಎಲ್‌ನಲ್ಲಿ 100 ಪಂದ್ಯಗಳ ಜಯದ ದಾಖಲೆ ಮುಂಬೈ ಮುಡಿಗೇರಲಿದೆ.
ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ Live ಸ್ಕೋರ್‌ಕಾರ್ಡ್
ಈ ಬಾರಿಯ ಐಪಿಎಲ್ ಟೂರ್ನಿಯನ್ನು ಗಮನಿಸಿದರೆ ಮುಂಬೈ ಇಂಡಿಯನ್ಸ್ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಆರಂಭಿಕ ಎರಡು ಪಂದ್ಯಗಳನ್ನು ಸೋತು ಮತ್ತೊಂದನ್ನು ಗೆದ್ದಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ ಮೂರರಲ್ಲೂ ಗೆದ್ದು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಮೈಖೇಲ್ ಕನ್ನಡ - ಐಪಿಎಲ್ 2019 'ವಿಶೇಷ ಮುಖಪುಟ' (ಫಲಿತಾಂಶಗಳು, ಪಾಯಿಂಟ್ ಟೇಬಲ್, ಕುತೂಹಲಕಾರಿ ಅಂಶಗಳು ಇಲ್ಲಿವೆ!)
ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿರುವ ಮುಂಬೈ ಇಂಡಿಯನ್ಸ್ ಈ ವರೆಗೆ (ಸೂಪರ್ ಓವರ್ ಕೂಡ ಸೇರಿ) ಒಟ್ಟು 99 ಪಂದ್ಯಗಳನ್ನು ಗೆದ್ದಿವೆ. ಚೆನ್ನೈ ವಿರುದ್ಧದ ಪಂದ್ಯವನ್ನು ಗೆದ್ದರೆ ಐಪಿಎಲ್‌ನಲ್ಲಿ 100 ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಿ ಇತಿಹಾಸ ನಿರ್ಮಿಸಲಿದೆ.
ಸೂಪರ್ ಓವರ್ ಒಂದು ಪಂದ್ಯವನ್ನು ಹೊರತುಪಡಿಸಿದರೆ ಮುಂಬೈ ಒಟ್ಟು 98 ಪಂದ್ಯಗಳಲ್ಲಿ ಜಯಗಳಿಸಿದೆ. 2017ರಲ್ಲಿ ಒಂದು ಸೂಪರ್ ಓವರ್ ಪಂದ್ಯದಲ್ಲಿ ಮುಂಬೈ ತಂಡ ಗುಜರಾತ್ ಲಯನ್ಸ್ ವಿರುದ್ಧ ವಿಜಯ ಸಾಧಿಸಿತ್ತು. ಅಂತೂ ಇಂದಿನ (ಏ.3) ಪಂದ್ಯ ಗೆದ್ದರೆ ಮುಂಬೈ ಐಪಿಎಲ್‌ನಲ್ಲಿ 100ನೇ ಗೆಲುವು ಮತ್ತು 12ನೇ ಆವೃತ್ತಿಯಲ್ಲಿ 2ನೇ ಜಯ ದಾಖಲಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications