For Quick Alerts
ALLOW NOTIFICATIONS  
For Daily Alerts
 

MI vs DC IPL 2023: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಗೆಲುವಿಗೆ ಇದೇ ಕಾರಣ ಎಂದ ರೋಹಿತ್ ಶರ್ಮಾ

ಮಂಗಳವಾರ, ಏಪ್ರಿಲ್ 11ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಂಡದ ರೋಚಕ ಜಯದ ನಂತರ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿ, ನಿರ್ಣಾಯಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ತಮ್ಮ ಇಡೀ ತಂಡವನ್ನು ಶ್ಲಾಘಿಸಿದರು.

MI vs DC IPL 2023: Mumbai Indians Captain Rohit Sharma Reveals Reason Behind Win Against Delhi Capitals

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.2 ಓವರ್‌ಗಳಲ್ಲಿ 172 ರನ್‌ಗಳಿಗೆ ಸರ್ವಪತನ ಕಂಡಿತು. 173 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ ಗೆಲುವಿನ ಗುರಿ ತಲುಪಿತು. ಕೊನೆಯ ಓವರ್‌ನ ಅಂತಿಮ ಎಸೆತದಲ್ಲಿ 2 ರನ್ ಬೇಕಾಗಿದ್ದಾಗ ಟಿಮ್ ಡೇವಿಡ್ ತಂಡಕ್ಕೆ ಗೆಲುವು ತಂದುಕೊಟ್ಟರು.

ODI World Cup 2023: ಭಾರತ vs ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯದ ಆತಿಥ್ಯಕ್ಕೆ 2 ಮೈದಾನಗಳು ಶಾರ್ಟ್‌ಲಿಸ್ಟ್

45 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಮೇತ 65 ರನ್ ಬಾರಿಸಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು. ಪಂದ್ಯದ ನಂತರ ಮಾತನಾಡಿದ ರೋಹಿತ್ ಶರ್ಮಾ, ಪವರ್‌ಪ್ಲೇ ಓವರ್‌ಗಳಲ್ಲಿಯೇ ಪಂದ್ಯದ ಗತಿ ಬದಲಾಯಿಸಲು ಬಯಸುವುದಾಗಿ ಹೇಳಿದರು. ಮೊದಲ 6 ಓವರ್‌ಗಳಲ್ಲಿ ರೋಹಿತ್ ಶರ್ಮಾ ಪಡೆ 68 ರನ್‌ಗಳನ್ನು ಕಲೆಹಾಕಿತು.

MI vs DC IPL 2023: Mumbai Indians Captain Rohit Sharma Reveals Reason Behind Win Against Delhi Capitals

"ನಾನು ಬ್ಯಾಟಿಂಗ್‌ಗೆ ಹೋದಾಗ ನಾನು ಪವರ್‌ಪ್ಲೇ ಓವರ್‌ಗಳನ್ನು ಸಂಪೂರ್ಣವಾಗಿ ಬಳಸಬೇಕೆಂದು ನಾನು ಭಾವಿಸಿದೆ. ಏಕೆಂದರೆ ಆಟವು ಮುಂದುವರೆದಂತೆ, ಡೆಲ್ಲಿ ಕ್ಯಾಪಿಟಲ್ಸ್ ಹೊಂದಿರುವ 2 ಜೋಡಿ ಉತ್ತಮ ಸ್ಪಿನ್ನರ್‌ಗಳೊಂದಿಗೆ ಆಟ ಕಠಿಣವಾಗಿರುತ್ತದೆ ಎಂದು ನನ್ನ ಮನಸ್ಸಿನಲ್ಲಿ ಅಂದುಕೊಂಡಿದ್ದೆ," ಎಂದು ರೋಹಿತ್ ಶರ್ಮಾ ತಿಳಿಸಿದರು.

"ನನ್ನ ಮನಸ್ಸಿನಲ್ಲಿ ಆಕ್ರಮಣಕಾರಿ ಆಟವನ್ನು ಮುಂದುವರಿಸುವುದಾಗಿತ್ತು. ಮೊದಲ 6 ಓವರ್‌ಗಳಲ್ಲಿ ನಮ್ಮ ಅವಕಾಶಗಳನ್ನು ಪಡೆದುಕೊಳ್ಳಬೇಕು. ನಂತರ ಪಂದ್ಯ ಎಲ್ಲಿಗೆ ಹೋಗುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ," ಎಂದು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಪಂದ್ಯದ ನಂತರ ಹೇಳಿದರು.

ಮುಂಬೈ ಇಂಡಿಯನ್ಸ್ ತಂಡದ ಗೆಲುವಿನೊಂದಿಗೆ 2 ಪಂದ್ಯಗಳ ಸತತ ಸೋಲಿನ ಸರಪಳಿಯನ್ನು ಮುರಿದಿರುವುದು ವಿಶೇಷವೆನಿಸಿದೆ. ಈ ಪಂದ್ಯದಲ್ಲಿ ಪ್ರತಿಯೊಬ್ಬರೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ ಮತ್ತು ಫಲಿತಾಂಶದಲ್ಲಿ ಅದು ತೋರಿಸಿದೆ ಎಂದು ರೋಹಿತ್ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದರು.

MI vs DC IPL 2023: Mumbai Indians Captain Rohit Sharma Reveals Reason Behind Win Against Delhi Capitals

"ನಮ್ಮ ತಂಡದ ಆಟಗಾರರು ನಿಜವಾಗಿಯೂ ಶ್ರಮಿಸಿದ್ದಾರೆ ಮತ್ತು ಅಂತಿಮವಾಗಿ ಗೆಲುವಿನ ಫಲಿತಾಂಶ ಪಡೆಯಲು ಸಾಧ್ಯವಾಯಿತು. ಆದರೆ ಇದೇ ಅಂತಿಮವಲ್ಲ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಮೊದಲ ಗೆಲುವು ಯಾವಾಗಲೂ ವಿಶೇಷವಾಗಿರುತ್ತದೆ ಆದ್ದರಿಂದ ನಾವು ಇದನ್ನೇ ಮುಂದಿನ ಪಂದ್ಯಗಳಲ್ಲಿ ಪಾಲಿಸುತ್ತೇವೆ," ಎಂದು ರೋಹಿತ್ ಶರ್ಮಾ ಹೇಳಿದರು.

"ಗೆಲುವಿಗಾಗಿ ಎಲ್ಲರೂ ಕೈ ಜೋಡಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ ಮತ್ತು ನಾವು ಪಂದ್ಯದ ಮೊದಲು ಮಾತನಾಡಿದಂತೆ ಆಡಿದ್ದೇವೆ. ತಂಡದ ಒಗ್ಗಟ್ಟಿನ ಮಂತ್ರ ಇಲ್ಲಿ ಕಾರ್ಯನಿರ್ವಹಿಸಿದೆ," ಎಂದು ಗೆಲುವಿನ ಹಿಂದಿನ ತಂತ್ರದ ಬಗ್ಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿದರು.

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ತಮ್ಮ ಮುಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭಾನುವಾರ, ಏಪ್ರಿಲ್ 16ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಸೆಣಸಾಡಲಿದೆ.

Story first published: Wednesday, April 12, 2023, 6:22 [IST]
Other articles published on Apr 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+