Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸಿಸ್ ವಿರುದ್ಧ ಯಶಸ್ಸಿಗೆ ಬೂಮ್ರಾಗೆ ಸಲಹೆ ನೀಡಿದ ಮೈಕಲ್ ಕ್ಲಾರ್ಕ್

Michael Clarke says Japrit Bumrah needs to be aggressive to Aussie batsmen

ನವೆಂಬರ್ 27ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಬಹು ನಿರೀಕ್ಷಿತ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರ ಬಹುಮುಖ್ಯ ಪಾತ್ರವನ್ನು ವಹಿಸಲಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ವಿಶ್ವಕಪ್ ವಿಜೇತ ತಂಡದ ನಾಯಕ ಕ್ಲಾರ್ಕ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬೂಮ್ರಾ ಅತ್ಯುತ್ತಮ ಬೌಲರ್‌ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳ ವಿರುದ್ಧ ಯಶಸ್ಸು ಸಾಧಿಸಬೇಕಾದರೆ ಬೂಮ್ರಾ ಮತ್ತಷ್ಟು ಅಗ್ರೆಸ್ಸಿವ್ ಆಗಿರಬೇಕು ಎಂದಿದ್ದಾರೆ.

ಆಕ್ರಮಣಕಾರಿ ಆಟದ ಮೂಲಕ ಒತ್ತಡ

ಆಕ್ರಮಣಕಾರಿ ಆಟದ ಮೂಲಕ ಒತ್ತಡ

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬೂಮ್ರಾ ಸದ್ಯ ಅತ್ಯುತ್ತಮ ಬೌಲರ್ ಆಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲೂ ಬೂಮ್ರಾ ದಾಖಲೆ ಅಷ್ಟೇ ಅದ್ಭುತವಾಗಿದೆ ಎಂದು ಕ್ಲಾರ್ಕ್ ಹೇಳಿದ್ದಾರೆ. ಅವರ ವೇಗ ಉತ್ತಮವಾಗಿದೆ. ಅವರ ಶೈಲಿಯೂ ಭಿನ್ನವಾಗಿದೆ. ಹೀಗಾಗಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳ ವಿರುದ್ಧ ಬೂಮ್ರಾ ಮತ್ತಷ್ಟು ಅಗ್ರೆಸ್ಸಿವ್ ಆಗಿ ಬೌಲಿಂಗ್ ಮಾಡುವ ಮೂಲಕ ಒತ್ತಡವನ್ನು ಹೇರಬಹುದಾಗಿದೆ ಎಂದಿದ್ದಾರೆ ಕ್ಲಾರ್ಕ್.

ವಾರ್ನರ್, ಸ್ಮಿತ್ ವಿರುದ್ಧ ಬೂಮ್ರಾ ಮೇಲುಗೈ

ವಾರ್ನರ್, ಸ್ಮಿತ್ ವಿರುದ್ಧ ಬೂಮ್ರಾ ಮೇಲುಗೈ

ಇದೇ ಸಂದರ್ಭದಲ್ಲಿ ಜಸ್ಪ್ರೀತ್ ಬೂಮ್ರಾ ಅವರು ಡೇವಿಡ್ ವಾರ್ನರ್ ವಿರುದ್ದ ಹಾಗೂ ಸ್ಟೀವ್ ಸ್ಮಿತ್ ವಿರುದ್ದದ ಮುಖಾಮುಖಿಯಲ್ಲಿ ಮೇಲುಗೈ ಸಾಧಿಸಿರುವುದನ್ನು ಬೊಟ್ಟು ಮಾಡಿದರು. "ಇದು ಕೇವಲ ವಿಕೆಟ್ ಪಡೆಯುವ ವಿಚಾರವಾಗಿ ಮಾತ್ರವಲ್ಲ. ಯಾವ ರೀತಿಯಲ್ಲಿ ಬೌಲಿಂಗ್ ಮಾಡುತ್ತಾರೆ ಎಂಬುದು ಮುಖ್ಯವಾಗುತ್ತದೆ. ಡೇವಿಡ್ ವಾರ್ನರ್ ಅವರನ್ನು ಅನೇಕ ಸಂದರ್ಭಗಳಲ್ಲಿ ಔಟ್ ಮಾಡಿದ್ದಾರೆ ಎಂದು ಕ್ಲಾರ್ಕ್ ಹೇಳಿದ್ದಾರೆ.

ವಿರಾಟ್ ಕೊಹ್ಲಿಗೂ ಇದೇ ಸಲಹೆ ನೀಡಿದ ಮಾಜಿ ನಾಯಕ

ವಿರಾಟ್ ಕೊಹ್ಲಿಗೂ ಇದೇ ಸಲಹೆ ನೀಡಿದ ಮಾಜಿ ನಾಯಕ

ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಕೂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಹೇಳಿದ್ದಾರೆ. ತವರಿನ ತಂಡದ ಲಾಭಕ್ಕಾಗಿ ಇಬ್ಬರು ಆಟಗಾರರು ಕುಡ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಬೇಕಿದೆ ಎಂದು ಕ್ಲಾರ್ಕ್ ಹೇಳಿದ್ದಾರೆ.

ಆಸಿಸ್ ವಿರುದ್ಧ ಸರಣಿಗೆ ದಿನಗಣನೆ

ಆಸಿಸ್ ವಿರುದ್ಧ ಸರಣಿಗೆ ದಿನಗಣನೆ

ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿ ನವೆಂಬರ್ 27ರಿಂದ ಆರಂಭವಾಗಲಿದೆ. ಮೊದಲಿಗೆ ಏಕದಿನ ಸರಣಿ ನಡೆಯಲಿದ್ದು ಬಳಿಕ ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಡಿಸೆಂಬರ್ 17ರಿಂದ ಬಹು ನಿರೀಕ್ಷಿತ ಟೆಸ್ಟ್ ಸರಣಿಗೆ ಚಾಲನೆ ದೊರೆಯಲಿದೆ.

Story first published: Tuesday, November 24, 2020, 14:12 [IST]
Other articles published on Nov 24, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+