For Quick Alerts
ALLOW NOTIFICATIONS  
For Daily Alerts
 

ವಿರಾಟ್‌ಗೆ ಬೌಲ್ಡ್ ಆಗಿದ್ದಕ್ಕೆ ಹೀಗೆ ಆಡ್ತಿದ್ದಾನೆ: ಮತ್ತೆ ಕೊಹ್ಲಿ ಬಗ್ಗೆ ಟೀಕಿಸಿದ ಪಾಕ್ ಕ್ರಿಕೆಟಿಗನ ಬಾಯ್ಮುಚ್ಚಿಸಿದ ವಾನ್

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಮತ್ತೊಮ್ಮೆ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಆಟದ ಬಗ್ಗೆ ಟೀಕಿಸಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕವನ್ನು ಪೂರ್ಣಗೊಳಿಸುವ ಸಲುವಾಗಿ ಸ್ವಾರ್ಥದ ಆಟಕ್ಕೆ ಮುಂದಾದರು ಎಂದು ಹಫೀಜ್ ಮತ್ತೊಮ್ಮೆ ಟೀಕಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ನಿಧಾನಗತಿಯ ಕಠಿಣ ಪಿಚ್‌ನಲ್ಲಿ ಕೊಹ್ಲಿ 121 ಎಸೆತಗಳಲ್ಲಿ 101 ರನ್‌ಗಳನ್ನು ಗಳಿಸಿ ಅಜೇಯವಾಗುಳಿದಿದ್ದರು.

ಆದರೆ ವಿರಾಟ್ ಕೊಹ್ಲಿ ಈ ಇನ್ನಿಂಗ್ಸ್ ಬಗ್ಗೆ ಮೊಹಮ್ಮದ್ ಹಫೀಜ್ ಕಿಡಿಕಾರಿದ್ದಾರೆ. ಈ ಪಂದ್ಯದ ಡೆತ್ ಓವರ್‌ನ್ಲಲಿಯೂ ವಿರಾಟ್ ಕೊಹ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಲಿಲ್ಲ ಎನ್ನುವ ಕಾರಣಕ್ಕೆ ಸ್ವಾರ್ಥಿ ಎಂದಿದ್ದಾರೆ. ಈ ಬಗ್ಗೆ ಮುಂದಿವರಿದು ಪ್ರತಿಕ್ರಿಯಿಸಿರುವ ಹಫೀಜ್ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಸಿಡಿಸಿದ ಶತಕವನ್ನು ಉಲ್ಲೇಖಿಸಿದ್ದಾರೆ.

Virat Kohli against South Africa

ನೆದರ್ಲೆಂಡ್ದ್ ವಿರುದ್ಧದ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಆಡಿದ ಆಟ ನಿಸ್ವಾರ್ಥ ಆಟಕ್ಕೆ ಅದ್ಭುತವಾದ ಉದಾಹರಣೆ ಎಂದಿದ್ದಾರೆ. ಕಠಿಣ ಪಿಚ್ ಕಾರಣಕ್ಕೆ ಆರಂಭದಲ್ಲಿ ಬೆನ್ ಸ್ಟೋಕ್ಸ್ ನಿಧಾನಗತಿಯ ಆಟಕ್ಕೆ ಮುಂದಾಗಿದ್ದರೂ ಕೂಡ ಇನ್ನಿಂಗ್ಸ್‌ನ ಕೊನೆಯಲ್ಲಿ ವೇಗವನ್ನು ಹೆಚ್ಚಿಸಿಕೊಂಡು ತಂಡಕ್ಕೆ ಅತಿ ಹೆಚ್ಚಿನ ರನ್‌ಗಳಿಸಲು ಕಾರಣವಾಗಿದ್ದರು ಎನ್ನುವುದನ್ನು ಉಲ್ಲೇಖಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಈ ಪೋಸ್ಟನ್ನು ಈ ಹಿಂದೆ ಇದೇ ರೀತಿ ಟೀಕಿಸಿದ್ದಾಗ ಹಫೀಜ್ ಅಭಿಪ್ರಾಯವನ್ನು 'ಅಟ್ಟರ್ ನಾನ್‌ಸೆನ್ಸ್' ಎಂದು ಜರಿದಿದ್ದ ಮೈಕಲ್ ವಾನ್‌ಗೆ ಕೂಡ ಟ್ಯಾಗ್ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮೈಕಲ್ ವಾನ್ ಮತ್ತೊಮ್ಮೆ ಕೊಹ್ಲಿಯನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಬೆನ್ ಸ್ಟೋಕ್ಸ್ ಅವರ ಆಟ ವಿರಾಟ್ ಕೊಹ್ಲಿಯ ಇನ್ನಿಂಗ್ಸ್‌ನಷ್ಟೇ ಅದ್ಭುತವಾಗಿತ್ತು ಎಂದಿದ್ದಾರೆ ಮೈಕಲ್ ವಾನ್. ಕೊಲ್ಕತ್ತಾದ ಕಠಿಣ ಪಿಚ್‌ನಲ್ಲಿ ವಿರಾಟ್ ಕೊಹ್ಲಿ ಆಡಿದಷ್ಟೇ ಅದ್ಭುತವಾಗಿ ಬೆನ್ ಸ್ಟೋಕ್ಸ್ ಕೂಡ ಆಡಿದ್ದಾರೆ. ಆದರೆ ಕೊಹ್ಲಿ ನೆದರ್ಲೆಂಡ್ಸ್ ತಂಡಕ್ಕಿಂತ ಬಲಿಷ್ಠವಾದ ಬ್ಯಾಟಿಂಗ್ ವಿಭಾಗದೊಂದಿಗೆ ಆಡಿದ್ದರು ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಇನ್ನು ಮುಂದಿನ ಪೋಸ್ಟ್‌ನಲ್ಲಿ ಮೈಕಲ್ ವಾನ್ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಭಾರತದ ಆಟಗಾರ ವಿರಾಟ್ ಕೊಹ್ಲಿ ವಿರುದ್ಧ ಕಿಡಿಕಾರಲು ಕಾರಣವೇನಿರಬಹುದು ಎನ್ನುವುದನ್ನು ತಮಾಷೆಯಾಗಿ ಕಾಲೆಳೆದಿದ್ದಾರೆ. 2012ರ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಬೌಲಿಂಗ್ ನಡೆಸಿದ್ದಾಗ ಅವರ ಎಸೆತಕ್ಕೆ ಹಫೀಜ್ ಕ್ಲೀನ್ ಬೌಲ್ಡ್ ಆಗಿದ್ದರು. ಭಾರತೀಯ ಸ್ಟಾರ್ ಆಟಗಾರನ ವಿರುದ್ಧ ಸತತವಾಗಿ ಕಟು ಟೀಕೆಯನ್ನು ಮಾಡಲು ಇದುವೇ ಕಾರಣವಾಗಿರಬಹುದು ಎಂದು ತಿರುಗೇಟು ಕೊಟ್ಟಿದ್ದಾರೆ ಮೈಕಲ್ ವಾನ್.

ಗಮನಾರ್ಹ ಅಂಶವೆಂದರೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ್ದ ವಿರಾಟ್ ಕೊಹ್ಲಿ ಮಾತನಾಡುತ್ತಾ ಪಿಚ್ ನಿಧಾನವಾಗಿರುವ ಕಾರಣ ಎಚ್ಚರಿಕೆಯಿಂದ ಕೊನೆಯವರೆಗೂ ಆಡುವಂತೆ ಮ್ಯಾನೇಜ್‌ಮೆಂಟ್‌ನಿಂದ ಸೂಚನೆ ಬಂದಿತ್ತು ಎಂದು ಕೊಹ್ಲಿ ವಿವರಿಸಿದ್ದರು. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 101 ರನ್‌ಗಳಿಸಿ ಅಜೇಯವಾಗುಳಿದಿದ್ದರು ಈ ಕಾರಣದಿಂದಾಗಿ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 326/5 ರನ್‌ಗಳನ್ನು ಕಲೆ ಹಾಕಿತ್ತು. ಈ ಪಂದ್ಯವನ್ನು ಭಾರತ 243 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಮತ್ತೊಂದೆಡೆ ಸ್ಟೋಕ್ಸ್ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಮೊದಲ ಶತಕವನ್ನು ಗಳಿಸಿದ್ದು ಈ ಮೂಲಕ ಇಂಗ್ಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 339/9 ಅನ್ನು ಗಳಿಸಲು ಕಾರಣವಾದರು. ಈ ಪಂದ್ಯದಲ್ಲಿ ಇಂಗ್ಲೆಂಡ್ ಡಚ್ ಪಡೆಯನ್ನು 160 ರನ್‌ಗಳಿಂದ ಸೋಲಿಸಿದ್ದು ಟೂರ್ನಿಯ ಎರಡನೇ ಗೆಲುವು ಪಡೆದುಕೊಂಡಿದೆ.

Story first published: Thursday, November 9, 2023, 10:39 [IST]
Other articles published on Nov 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+