For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಈ ಬಾರಿ ಐಪಿಎಲ್‌ ಕಪ್ ಗೆಲ್ಲೋದಿಲ್ಲ: ಮೈಕಲ್ ವಾನ್

ಐಪಿಎಲ್ 13ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಐಪಿಎಲ್ ಚಾಂಪಿಯನ್ ಆಗುವ ಸಾಧ್ಯತೆಗಳನ್ನು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ತಳ್ಳಿಹಾಕಿದ್ದಾರೆ.

ಸೋಮವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತರ ನಂತರವೂ ಆರ್‌ಸಿಬಿ ಪ್ಲೇ ಆಪ್‌ ಹಂತವನ್ನು ಪ್ರವೇಶಿಸಿತು. ನೆಟ್ ರನ್‌ರೇಟ್ ಆಧಾರದ ಮೇಲೆ ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಗಿಟ್ಟಿಸಿದೆ. ಐಪಿಎಲ್ ಉದ್ಘಾಟನಾ ಸೀಸನ್‌ನಿಂದ ಆಡುತ್ತಿರುವ ಆರ್‌ಸಿಬಿ ಇದುವರೆಗೂ ಕಪ್‌ಗೆಲ್ಲದ ಮೂರು ತಂಡಗಳಲ್ಲಿ ಒಂದಾಗಿದ್ದು 016 ರ ನಂತರ ಮೊದಲ ಬಾರಿಗೆ ಪ್ಲೇಆಫ್‌ನಲ್ಲಿ ಸ್ಥಾನ ಪಡೆದಿದೆ.

ತಂಡದಲ್ಲಿ ಸಾಮೂಹಿಕ ಪ್ರಯತ್ನ ಕಾಣುತ್ತಿಲ್ಲ!

ತಂಡದಲ್ಲಿ ಸಾಮೂಹಿಕ ಪ್ರಯತ್ನ ಕಾಣುತ್ತಿಲ್ಲ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಐಪಿಎಲ್ ಕಪ್‌ ಗೆಲ್ಲುವ ಸಾಧ್ಯತೆ ಕಡಿಮೆ ಎಂದಿರುವ ಮೈಕಲ್ ವಾನ್ ಆರ್‌ಸಿಬಿಗೆ ಎಲ್ಲ ರೀತಿಯಲ್ಲೂ ಪ್ರಯತ್ನಿಸಿ ಪ್ರಶಸ್ತಿಯನ್ನು ಗೆಲ್ಲಲು ಸಾಕಷ್ಟು ಸಾಮೂಹಿಕವಾಗಿಲ್ಲ ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.

ಆರ್‌ಸಿಬಿ ಆಟಗಾರರಿಂದ ರಾಜ್ಯೋತ್ಸವದ ಶುಭಾಶಯ ಕೇಳೋದೇ ಖುಷಿ: ವಿಡಿಯೋ

ಮತ್ತೊಮ್ಮೆ ಬರಿಗೈನಲ್ಲಿ ವಾಪಸ್ಸಾಗಲಿದೆ ಆರ್‌ಸಿಬಿ?

ಮತ್ತೊಮ್ಮೆ ಬರಿಗೈನಲ್ಲಿ ವಾಪಸ್ಸಾಗಲಿದೆ ಆರ್‌ಸಿಬಿ?

ಮೊದಲ ಪ್ರಶಸ್ತಿಯನ್ನು ಗೆಲ್ಲಲು 12 ವರ್ಷಗಳಿಂದ ಪ್ರಯತ್ನಿಸಿರುವ ಆರ್‌ಸಿಬಿಯು ಈ ಬಾರಿಯು ಬರಿಗೈನಲ್ಲಿ ವಾಪಸ್ಸಾಗಲಿದೆ ಎಂದು ವಾನ್ ಹೇಳಿದ್ದಾರೆ. ಆರ್‌ಸಿಬಿ ಐಪಿಎಲ್ ಅನ್ನು ಮತ್ತೊಮ್ಮೆ ಬರಿಗೈಯಲ್ಲಿ ಮುಗಿಸುತ್ತದೆ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟ್ ನಾಯಕ ನಂಬಿದ್ದಾರೆ. ಪ್ರಸ್ತುತ 2020ರ ಸೀಸನ್‌ನಲ್ಲಿ ಏನಾದರೂ ಅಚ್ಚರಿ ನಡೆದರೆ ಮಾತ್ರ ಆರ್‌ಸಿಬಿ ಗೆಲ್ಲಲು ಸಾಧ್ಯ, ವಿರಾಟ್ ಕೊಹ್ಲಿ ಚಾಂಪಿಯನ್ ಆಗುವ ಕನಸು ಬಹಳ ದೂರದಲ್ಲಿದೆ ಎಂದಿದ್ದಾರೆ.

ಆರ್‌ಸಿಬಿ ಗೆಲ್ಲಲ್ಲ ಎಂದು ನಾನು ಆರಂಭದಿಂದಲೇ ಹೇಳಿದ್ದೆ ಎಂದ ವಾನ್!

ಆರ್‌ಸಿಬಿ ಗೆಲ್ಲಲ್ಲ ಎಂದು ನಾನು ಆರಂಭದಿಂದಲೇ ಹೇಳಿದ್ದೆ ಎಂದ ವಾನ್!

'' ಈ ವರ್ಷ ಆರ್‌ಸಿಬಿ ತಂಡವು ಕಪ್‌ ಗೆಲ್ಲಲು ಸಾಧ್ಯವೇ?, ಇಲ್ಲವೇ ಇಲ್ಲ ಮೊದಲಿನಿಂದಲೂ ನಾನು ಅದನ್ನು ಹೇಳುತ್ತಲೇ ಬಂದಿದ್ದೇನೆ, ಏಕೆಂದರೆ ಅದನ್ನು ಗೆಲ್ಲಲು ಅವರಲ್ಲಿ ಸಾಮೂಹಿಕ ಸಾಮರ್ಥ್ಯವಿದೆ ಎಂದು ನಾನು ಭಾವಿಸುವುದಿಲ್ಲ'' ಎಂದು ಮೈಕಲ್ ವಾಣ್ ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ

ಆರ್‌ಸಿಬಿ ಅಭಿಮಾನಿಗಳಿಗೆ ಖುಷಿಯೋ ಖುಷಿ : ಕೊಹ್ಲಿ ಪಡೆ ಪ್ಲೇ ಆಫ್‌ಗೆ ಎಂಟ್ರಿ

ಕೊಹ್ಲಿ ಎಡಗೈನಲ್ಲಿ ಬ್ಯಾಟ್ ಮಾಡಿ ಗೆಲ್ಲಬೇಕು

ಕೊಹ್ಲಿ ಎಡಗೈನಲ್ಲಿ ಬ್ಯಾಟ್ ಮಾಡಿ ಗೆಲ್ಲಬೇಕು

"2020 ರಲ್ಲಿ ವಿಶೇಷವಾಗಿ ಏನು ಸಾಧ್ಯ ಎಂದು ನೋಡಿ, ಪ್ರಪಂಚವೇ ಈ ವರ್ಷ ತಲೆಕೆಳಗಾಗಿದೆ. ಆದ್ದರಿಂದ ಏನಾಗಲಿದೆ ಎಂದು ಯಾರಿಗೆ ತಿಳಿದಿದೆ. ವಿರಾಟ್ ಕೊಹ್ಲಿ ಎಡಗೈಯಿಂದ ಬ್ಯಾಟ್ ಮಾಡಿ ಪಂದ್ಯವನ್ನು ಗೆಲ್ಲಬಹುದು (ಗೆಸ್ಟ್‌ನಲ್ಲಿ) ಆದರೆ ಇದು ಕಷ್ಟದ ಮಾತು ಎಂದು'' ವಾನ್ ಹಾಸ್ಯ ಚಟಾಕಿ ಹಾರಿಸುತ್ತಾ ಪರೋಕ್ಷವಾಗಿ ಆರ್‌ಸಿಬಿ ವಿರುದ್ಧ ಹರಿಯಾಯ್ದಿದ್ದಾರೆ.

ಆರ್‌ಸಿಬಿ ಈ ಬಾರಿ ಕಪ್ ಗೆಲ್ಲಲ್ಲ ಎಂದು ಹೇಳಲು ಕಾರಣ ಏನು?

ಆರ್‌ಸಿಬಿ ಈ ಬಾರಿ ಕಪ್ ಗೆಲ್ಲಲ್ಲ ಎಂದು ಹೇಳಲು ಕಾರಣ ಏನು?

ಆರ್‌ಸಿಬಿಯನ್ನು ಈ ಬಾರಿ ಕಪ್‌ ಗೆಲ್ಲುವ ರೇಸ್‌ನಿಂದ ಮೈಕಲ್ ವಾನ್ ಆಚೆಗಿಡಲು ಕಾರಣ ತಂಡದಲ್ಲಿ ಒತ್ತಡದಲ್ಲಿ ಆಡಬಲ್ಲ ಆತ್ಮವಿಶ್ವಾಸದ ಆಟಗಾರರ ಸಂಖ್ಯೆ ಕಡಿಮೆ ಎಂದು ಹೇಳಿದ್ದಾರೆ.

ಆಯ್ಕೆಯ ಕೊರತೆಯು ಆರ್‌ಸಿಬಿಯ ಪರವಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಹೇಳಿದ ಅವರು, ಕಠಿಣ ಕ್ರಿಕೆಟ್ ಆಡುವುದನ್ನು ಬಿಟ್ಟು ತಂಡಕ್ಕೆ ಬೇರೆ ದಾರಿಯಿಲ್ಲ ಎಂದು ಹೇಳಿದರು.

"ನಾನು ತಂಡಗಳು ಮತ್ತು ಅದರಲ್ಲೂ ಪ್ರತಿ ಆಟಗಾರರನ್ನು ನೋಡುತ್ತೇನೆ . ಆರ್‌ಸಿಬಿ ತಂಡದಲ್ಲಿ ಆತ್ಮವಿಶ್ವಾಸದಿದ ಕೂಡಿರುವ ಆಟಗಾರರ ಸಂಖ್ಯೆಯು ಕಡಿಮೆ ಇದೆ. ಆದರೆ ಆರ್‌ಸಿಬಿ ಪರವಾಗಿ ಮಾತನಾಡುವುದಾದರೆ ಅವರಿಗೆ ಕಠಿಣ ಮತ್ತು ಆಕ್ರಮಣಕಾರಿ ಕ್ರಿಕೆಟ್ ಆಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ'' ಎಂದು ವಾನ್ ಹೇಳಿದ್ದಾರೆ.

ಆರ್‌ಸಿಬಿ ಪ್ಲೇ ಆಪ್‌ ಜೊತೆಗೆ ಮೊದಲೇ ಮುಂಬೈ ಇಂಡಿಯನ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಸಹ ಪ್ಲೇಆಫ್‌ನಲ್ಲಿ ಸ್ಥಾನ ಪಡೆದಿದ್ದು. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳನ್ನು ಪಡೆದಿವೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ನಡುವಿನ ಪಂದ್ಯದ ನಂತರ ಪ್ಲೇಆಫ್‌ನಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನ ಅಂತಿಮಗೊಳ್ಳಲಿದೆ.

Story first published: Tuesday, November 3, 2020, 16:04 [IST]
Other articles published on Nov 3, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+