ಬ್ರಿಸ್ಬೇನ್, ಮಾ. 1: ಅಂತೂ ಇಂತು ಪಾಕಿಸ್ತಾನಕ್ಕೆ ವಿಶ್ವಕಪ್ ನಲ್ಲಿ ಪಾಕಿಸ್ತಾನಕ್ಕೆ ಮೊದಲ ಜಯ ದಕ್ಕಿದೆ. ಜಿಂಬಾಬ್ವೆ ವಿರುದ್ಧ ತಿಣುಕಾಡಿ ತಿಣುಕಾಡಿ ಪಾಕಿಸ್ತಾನ ವಿಶ್ವಕಪ್ ನಲ್ಲಿ ಜಯದ ಖಾತೆ ತೆರೆದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 50 ಓವರ್ ಗಳಲ್ಲಿ 235ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆ 49.4 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 215 ರನ್ ಗಳಿಸಿ ಸೋಲೋಪ್ಪಿಕೊಂಡಿತು.

ನಾಯಕ ಮಿಸ್ಬಾ ಉಲ್ ಹಕ್ ಸಮಯೋಚಿತ 73 ಮತ್ತು ವಾಹಬ್ ರಿಯಾಜ್ ಅರ್ಧಶತಕದ 54 ನೆರವಿನೊಂದಿಗೆ ಪಾಕಿಸ್ತಾನ 235ರನ್ ಗಳಿಸಿತ್ತು. ಜಿಂಬಾಬ್ವೆ ವಿಕೆಟ್ ಕೀಪರ್ ಟೇಲರ್ ಮತ್ತು ವಿಲಿಯಮ್ಸ್ ಹೋರಾಟ ನಡೆಸಿದರೂ ಸಾಕಾಗಲಿಲ್ಲ.
ಇದರೊಂದಿಗೆ ಪಾಕಿಸ್ತಾನ ತನ್ನ ಅಂಕದ ಖಾತೆ ತೆರೆದಿದ್ದು ಎರಡು ಅಂಕ ಗಳಿಸಿದೆ. ಜಿಂಬಾಬ್ವೆ ಸಹ ಎರಡು ಅಂಕ ಗಳಿಸಿದೆ. ಆದರೆ ರನ್ ರೇಟ್ ಆಧಾರದಲ್ಲಿ ಜಿಂಬಾಬ್ವೆಗಿಂತ ಹಿಂದಿದೆ.