2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದ್ದು, ಭಾನುವಾರ, ಜೂನ್ 2ರಂದು ಯುಎಸ್ಎ ಮತ್ತು ಕೆನಡಾ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಪ್ರಾರಂಭವಾಗಿದೆ.
ಭಾರತ ತಂಡವು ಜೂನ್ 5ರಂದು ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ. ನಂತರ ಜೂನ್ 9ರಂದು ಪಾಕಿಸ್ತಾನ ತಂಡದ ವಿರುದ್ಧ ಹೆಚ್ಚು ನಿರೀಕ್ಷಿತ ರೋಚಕ ಹಣಾಹಣಿ ನಡೆಸಲಿದೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು ಐಸಿಸಿ ಟೂರ್ನಿಯಲ್ಲಿ ಮುಖಾಮುಖಿಯಾದಾಗಲೆಲ್ಲಾ ಅಭಿಮಾನಿಗಳ ಅಪಾರ ಗಮನ ಸೆಳೆಯುತ್ತದೆ. ಉಭಯ ತಂಡಗಳು ಟಿ20 ವಿಶ್ವಕಪ್‌ನ ಮಾಜಿ ಚಾಂಪಿಯನ್‌ಗಳು.
ಪಂದ್ಯಾವಳಿ ಆರಂಭಕ್ಕೂ ಮೊದಲು, ಮಾಜಿ ಆಟಗಾರರಾದ ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್ ಮತ್ತು ಮಿಸ್ಬಾ-ಉಲ್-ಹಕ್ ಟಿ20 ವಿಶ್ವಕಪ್ ಬಗ್ಗೆ ಚರ್ಚಿಸಿದರು.

ಪಾಕಿಸ್ತಾನ ತಂಡದ ಮಾಜಿ ನಾಯಕ ಮಿಸ್ಬಾ-ಉಲ್-ಹಕ್ ಅವರು 2024ರ ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡವನ್ನು ಅಗ್ರ ಸ್ಪರ್ಧಿಯಾಗಿ ಆಯ್ಕೆ ಮಾಡಿದರು ಮತ್ತು ಪಾಕಿಸ್ತಾನ ತಂಡವನ್ನು ಎರಡನೇ ಸ್ಥಾನಕ್ಕೆ ಆಯ್ಕೆ ಮಾಡಿದರು.
ಮಿಸ್ಬಾ-ಉಲ್-ಹಕ್ ಅವರು ಆಸ್ಟ್ರೇಲಿಯದ ಬಲವನ್ನು ಎತ್ತಿ ತೋರಿಸುತ್ತಾ, "ಆಸ್ಟ್ರೇಲಿಯಾವೇ ಸುರಕ್ಷಿತ ತಂಡ ಎಂದು ನಾನು ಭಾವಿಸುತ್ತೇನೆ. ಕೇವಲ ಒಬ್ಬ ಸ್ಪಿನ್ನರ್‌ನೊಂದಿಗೆ ಏಷ್ಯಾದಲ್ಲಿಯೂ ಸಹ ಯಾವುದೇ ಸ್ಥಿತಿಯಲ್ಲಿ ಹೇಗೆ ಗೆಲ್ಲಬೇಕೆಂದು ಅವರಿಗೆ ತಿಳಿದಿದೆ," ಎಂದರು.
"ನೀವು ಯಾವುದೇ ವಿಶ್ವಕಪ್‌ನಿಂದ ಆಸ್ಟ್ರೇಲಿಯಾ ತಂಡವನ್ನು ಹೊರಗಿಡಲು ಸಾಧ್ಯವಿಲ್ಲ. ಎರಡನೇ ತಂಡವು ತುಂಬಾ ಕಷ್ಟಕರವಾಗಿದೆ. ನಾನು ಪಾಕಿಸ್ತಾನ ತಂಡವನ್ನು ಅಂಚಿನಲ್ಲಿ ಆಯ್ಕೆ ಮಾಡುತ್ತೇನೆ. ಒಂದು ವೇಳೆ ಪಾಕಿಸ್ತಾನ ಹಿನ್ನಡೆ ಅನುಭವಿಸಿದರೆ, ಭಾರತ ತಂಡ ಬಲಿಷ್ಠವಾಗಿರುವ ಕಾರಣ, ಎರಡನೇ ತಂಡವಾಗಬಹುದು," ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಮಿಸ್ಬಾ-ಉಲ್-ಹಕ್ ಹೇಳಿದರು.
ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ ಅವರು 2024ರ ಟಿ20 ವಿಶ್ವಕಪ್ ಪ್ರಶಸ್ತಿಗಾಗಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವನ್ನು ಅಗ್ರ 2ರ ಸ್ಪರ್ಧಿಗಳಾಗಿ ಹೆಸರಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ 0-2 ಅಂತರದಿಂದ ಸರಣಿ ಸೋತಿದ್ದರೂ ಮತ್ತು ತಂಡದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಪಾಕಿಸ್ತಾನ ಜೂನ್ 6ರಂದು ಯುಎಸ್ಎ ವಿರುದ್ಧದ ಪಂದ್ಯದ ಮೂಲಕ ಅಭಿಯಾನ ಆರಂಭಿಸಲಿದೆ.
ಕಳೆದ ಎರಡು ಟಿ20 ವಿಶ್ವಕಪ್ ಆವೃತ್ತಿಗಳಲ್ಲಿ ಪಾಕಿಸ್ತಾನ ತಂಡವು ಸೆಮಿಫೈನಲ್ ತಲುಪಿದೆ. ಆದರೆ ವಿಶೇಷವಾಗಿ ಬ್ಯಾಟಿಂಗ್ ಕ್ರಮಾಂಕ ಮತ್ತು ಮಧ್ಯಮ ಕ್ರಮಾಂಕದ ಪ್ರದರ್ಶನದಲ್ಲಿ ಸವಾಲುಗಳು ಹಾಗೆ ಉಳಿದಿವೆ.
ಮಿಸ್ಬಾ-ಉಲ್-ಹಕ್ ಅವರು ಆಸ್ಟ್ರೇಲಿಯಾ ತಂಡವನ್ನು 2024ರ ಟಿ20 ವಿಶ್ವಕಪ್ ಪ್ರಮುಖ ಸ್ಪರ್ಧಿಯಾಗಿ ಸೇರಿಸಿಕೊಂಡರೆ, ಎರಡನೇ ಸ್ಥಾನಕ್ಕೆ ಅವರ ರಾಷ್ಟ್ರೀಯ ನಿಷ್ಠೆಯನ್ನು ನೀಡಿ ಪಾಕಿಸ್ತಾನ ತಂಡವನ್ನು ಸೇರಿಸಿದರು.