For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಆಡಲು ಭಾರತಕ್ಕೆ ಪಾಕಿಸ್ತಾನ ಖಂಡಿತಾ ಪ್ರಯಾಣಿಸಬೇಕು: ಮಿಸ್ಬಾ ಉಲ್ ಹಕ್

ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಐಸಿಸಿ ಈಗಾಗಲೇ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ತಾಣಗಳು ಕೂಡ ಅಂತಿಮವಾಗಿದೆ. ಆದರೆ ಇತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ವಿಶ್ವಕಪ್‌ನಲ್ಲಿ ಭಾಗಿಯಾಗುವ ವಿಚಾರವಾಗಿ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಾ ಗೊಂದಲಗಳನ್ನು ಮುಂದುವರಿಸುತ್ತಲೇ ಇದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಕೋಚ್ ಮಿಸ್ಬಾ ಉಲ್ ಹಕ್ ಪಾಕಿಸ್ತಾನ ಕ್ರಿಕೆಟ್ ತಂಡ ವಿಶ್ವಕಪ್ ಆಡಲು ಭಾರತಕ್ಕೆ ಪ್ರಯಾಣಿಸಬೇಕು ಎಂದಿದ್ದಾರೆ.

ಈ ಬಾರಿಯ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ಆರಂಭವಾಗಿ ನವೆಂಬರ್ 18ರವರೆಗೆ ಆಯೋಜನೆಯಾಗಲಿದೆ. ಟೂರ್ನಿಯಲ್ಲಿ ಭಾಗವಹಿಸಲು ಅನುಮತಿ ನೀಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗ ಅಲ್ಲಿನ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಸರ್ಕಾರದ ನಿರ್ಧಾರಕ್ಕೆ ಮಂಡಳಿ ಕಾಯುತ್ತಿದೆ. ಈ ಸಂದರ್ಭದಲ್ಲಿ ಮಿಸ್ಬಾ ಉಲ್ ಹಕ್ ಪಾಕಿಸ್ತಾನ ತಂಡ ಭಾರತಕ್ಕೆ ವಿಶ್ವಕಪ್ ಟೂರ್ನಿ ಆಡಲು ತೆರಳಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Misbah-ul-Haq reaction on Pakistan travel to India to play the ODI World Cup

ಕಳೆದ ಒಂದು ದಶಕಗಳಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಯಾವುದೇ ದ್ವಿಪಕ್ಷೀಯ ಸರಣಿಯಗಳಲ್ಲಿ ಮುಖಾಮುಖಿಯಾಗಿಲ್ಲ. ಕೇವಲ ಐಸಿಸಿ ಹಾಗೂ ಏಷ್ಆ ಕಪ್ ಟೂರ್ನಿಗಳಲ್ಲಿ ಮಾತ್ರವೇ ಈ ಎರಡು ತಂಡಗಳು ಸೆಣೆಸಾಟ ನಡೆಸುತ್ತಿವೆ. ಹೀಗಾಗಿ ಈ ಟೂರ್ನಿಗಳ ಸಂದರ್ಭದಲ್ಲಿ ಭಾರತ ಹಾಗೂ ಪಾಕಿಸ್ಥಾನ ತಂಡಗಳ ನಡುವಿನ ಪಂದ್ಯಕ್ಕೆ ಅಪಾರವಾದ ಕುತೂಹಲಗಳು ಸೃಷ್ಟಿಯಾಗುತ್ತವೆ.

ಭಾರತದ 10 ನಗರಗಳಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಎಲ್ಲಾ 10 ತಂಡಗಳು ಭಾಗವಹಿಸಲು ಸಜ್ಜಾಗುತ್ತಿವೆ ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಶುಕ್ರವಾರ ಪುನರುಚ್ಚರಿಸಿದ್ದಾರೆ. ಹಾಗಿದ್ದರೂ ಈ ಹತ್ತು ತಂಡಗಳ ಪೈಕಿ ಒಂದಾಗಿರುವ ಪಾಕಿಸ್ತಾನ ಈ ವಿಚಾರವಾಗಿ ಈವರೆಗೂ ದೃಢ ನಿರ್ಧಾರ ತೆಗೆದುಕೊಳ್ಳದಿರುವುದು ಈ ಗೊಂದಲಕ್ಕೆ ಕಾರಣವಾಗಿದೆ.

ಪಿಟಿಐ ಜೊತೆಗೆ ಮಾತನಾಡಿರುವ ಮಿಸ್ಬಾ ಉಲ್ ಹಕ್ "ಬೇರೆ ಕ್ರೀಡೆಗಳಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಬಹುದಾದರೆ ಕ್ರಿಕೆಟ್‌ನಲ್ಲಿ ಯಾಕಾಗಬಾರದು?" ಎಂದು ಪ್ರಶ್ನಿಸಿದ್ದಾರೆ. "ಕ್ರಿಕೆಟನ್ನು ರಾಜಕೀಯ ಸಂಬಂಧದ ಜೊತೆಗೆ ಯಾಕೆ ಬೆಸೆಯಲಾಗುತ್ತಿದೆ? ತಮ್ಮ ತಂಡಗಳು ಪರಸ್ಪರರ ಮುಖಾಮುಖಿಯಾಗಿ ಆಡುವುದನ್ನು ನೋಡುವ ಅವಕಾಶವನ್ನು ಕಸಿದುಕೊಳ್ಳುವುದು ಜನರಿಗೆ ಮಾಡುವ ಅನ್ಯಾಯವಾಗಿದೆ. ಪಾಕಿಸ್ತಾನ ಮತ್ತು ಭಾರತೀಯ ಕ್ರಿಕೆಟನ್ನು ಬೆಂಬಲಿಸುವ ಅಭಿಮಾನಿಗಳಿಗೆ ಇದು ಅನ್ಯಾಯ ಮಾಡಿದಂತೆ" ಎಂದಿದ್ದಾರೆ ಮಿಸ್ಬಾ ಉಲ್ ಹಕ್.

"ಖಂಡಿತವಾಗಿಯೂ ಪಾಕಿಸ್ತಾನ ತಂಡ ಭಾರತದಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಆಡಬೇಕು. ನಾನು ಭಾರತದಲ್ಲಿ ಅನೇಕ ಬಾರಿ ಆಡಿದ್ದೇನೆ. ನಾವು ಅಲ್ಲಿ ಆಡುವ ಆಟದ ಒತ್ತಡ ಮತ್ತು ಪ್ರೇಕ್ಷಕರ ಬೆಂಬಲದ ಒತ್ತಡವನ್ನು ಆನಂದಿಸಿದ್ದೇವೆ. ಯಾಕೆಂದರೆ ಅದು ನಿಮಗೆ ಪ್ರೇರಣೆ ನೀಡುತ್ತದೆ. ಭಾರತದ ವಾತಾವರಣ ನಮಗೆ ಸರಿಹೊಂದುತ್ತದೆ. ಭಾರತದ ವಾತಾವರಣದಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ನಮ್ಮ ತಂಡಕ್ಕಿದೆ" ಎಂದಿದ್ದಾರೆ ಮಿಸ್ಬಾ ಉಲ್ ಹಕ್.

ಪಾಕಿಸ್ತಾನ ಅಕ್ಟೋಬರ್ 6ರಂದು ಹೈದರಾಬಾದ್‌ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸುವ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಲಿದೆ. ಅಕ್ಟೋಬರ್ 12 ರಂದು ಏಷ್ಯನ್ ಎದುರಾಳಿ ಶ್ರೀಲಂಕಾವನ್ನು ಎದುರಿಲಿದ್ದು ಅದಾದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಕದನ ಅಕ್ಟೋಬರ್ 15 ರಂದು ಅಹ್ಮದಾಬಾದ್‌ನಲ್ಲಿ ನಿಗದಿಪಡಿಸಲಾಗಿದೆ.

Story first published: Saturday, July 15, 2023, 17:18 [IST]
Other articles published on Jul 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+