Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೇಕ್ಷಕರಿಲ್ಲದೆಯೂ ಪರವಾಗಿಲ್ಲ ಕ್ರಿಕೆಟ್ ಆರಂಭವಾಗಲಿ: ಮಿಸ್ಬಾ ಉಲ್ ಹಕ್

Misbah Wants Resumption Of Cricket Soon, Even If Behind Closed Doors

ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮತ್ತು ಆಯ್ಕೆ ಸಮಿತಿಯ ಮುಖ್ಯಸ್ಥ ಮಿಸ್ಬಾ ಉಲ್ ಹಕ್ ಕೊರೊನಾ ವೈರಸ್ ಕಾರಣದಿಂದ ನಿಂತಿರುವ ಕ್ರಿಕೆಟ್ ಚಟುವಟಿಕೆಗಳು ಮರು ಆರಂಭವಾಗಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ಮನೆಗಳಲ್ಲೇ ಸೀಮಿತವಾಗುವುದು ಖಿನ್ನತೆಗೆ ಕಾರಣವಾಗಬಹುದು. ಹೀಗಾಗಿ ಕ್ರಿಕೆಟ್ ಆರಂಭಕ್ಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದ್ದಾರೆ.

ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮುಚ್ಚಿದ ಬಾಗಿಲುಗಳ ಹಿಂದೆಯಾದರೂ ಸರಿ ಕ್ರಿಕೆಟ್ ಆರಂಭವಾಗಲಿ ಎಂದು ಮಿಸ್ಬಾ ಉಲ್ ಹಕ್ ಬಯಸಿದ್ದಾರೆ. ಈ ಮಧ್ಯೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಪಾಕಿಸ್ತಾನ ಕ್ರಿಕೆಟ್ ತಂಡದ ಜೊತೆಗೆ ಮುಚ್ಚಿದ ಬಾಗಿನಲ್ಲೇ ಆಗಸ್ಟ್ ತಿಂಗಳಲ್ಲಿ ಟೆಸ್ಟ್ ಸರಣಿ ಆಯೋಜನೆ ಮಾಡಲು ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳು ಬಂದಿವೆ.

ಮಿಸ್ಬಾ ಉಲ್ ಹಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಮತ್ತೆ ಆರಂಭವಾಗುವುದನ್ನು ನೋಡಲು ಇಷ್ಟಪಡುತ್ತೇನೆ ಎಂದಿದ್ದು ಅದು ಪ್ರೇಕ್ಷಕರಿಲ್ಲದೆ ನಡೆಸರೂ ಪರವಾಗಿಲ್ಲ ಎಂದು ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಇದು ತುಂಬಾ ಕಠಿಣ ಸಂದರ್ಭ. ಕೊರೊನಾ ವೈರಸ್ ಕಾರಣದಿಂದಾಗಿ ಎಲ್ಲರ ಆರೋಗ್ಯ ನಮ್ಮ ಬಹುದೊಡ್ಡ ಆದ್ಯತೆಯಾಗಿರಬೇಕು. ಆದರೆ ಪಂದ್ಯಗಳನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸುವಂತಾಗಬೇಕು ಎಂದಿದ್ದಾರೆ ಮಿಸ್ಬಾ ಉಲ್ ಹಕ್.

ಕಳೆದ ಎರಡು ತಿಂಗಳಿನಿಂದ ಕ್ರಿಕೆಟಿಗರು ಮನೆಯಲ್ಲಿರುವುದು ಬಿಟ್ಟು ಬೇರೆನೂ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಖಾಲಿ ಮೈದಾನದಲ್ಲಿ ಆಡುವಂತಾದರೆ ಕ್ರಿಕೆಟ್ ಪ್ರೇಮಿಗಳಿಗೂ ಮನೆಯಲ್ಲಿ ಕ್ರಿಕೆಟ್ ನೋಡಲು ಸಿಕ್ಕಂತಾಗುತ್ತದೆ. ಅವರಿಗೂ ಮನರಂಜನೆ ಸಿಗುತ್ತದೆ ಎಂದು ಹೇಳಿದ್ದಾರೆ.

ಇನ್ನೂ ಇದೇ ಸಂದರ್ಭದಲ್ಲಿ ಮಿಸ್ಬಾ ಪಾಕ್ ಕ್ರಿಕೆಟಿಗರಿಗೆ ಫಿಟ್‌ನೆಸ್ ಕಾಪಾಡಿಕೊಳ್ಳುವಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಪ್ರತಿಯೊಬ್ಬರೂ ಈ ಪರಿಸ್ಥಿತಿಯಲ್ಲಿ ತಮ್ಮ ಮನೆಗಳಲ್ಲೇ ಫಿಟ್‌ನೆಸ್ ಕಾಪಾಡಿಕೊಳ್ಳಬೇಕು. ಅದು ಅವರ ವೈಯಕ್ತಿಕ ಜವಾಬ್ಧಾರಿಯಾಗಿದೆ. ಅವರ ಜವಾಬ್ಧಾರಿಯನ್ನು ಅವರೇ ವಹಿಸಿಕೊಳ್ಳಬೇಕು, ಮತ್ತೆ ಯಾವಾಗ ಕರೆ ಬರಲಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಆಟಗಾರರು ಎಲ್ಲ ಸಂದರ್ಭದಲ್ಲೂ ಸಿದ್ಧರಾಗಿರಬೇಕು ಎಂದಿದ್ದಾರೆ.

Story first published: Friday, May 8, 2020, 17:13 [IST]
Other articles published on May 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+