Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಐಪಿಎಲ್ ಮಿಸ್ ಮಾಡಿಕೊಂಡಿದ್ದು ಒಳ್ಳೆದೇ ಆಯ್ತು' ಎಂದ ಆಸೀಸ್ ಆಟಗಾರ

Missing out on IPL 2021 a blessing in disguise, says star Australia batsman Marnus Labuschagne

ಸಿಡ್ನಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿಯಲ್ಲಿ ಪಾಲ್ಗೊಳ್ಳದಂತೆ ಆಗಿದ್ದು ಒಳ್ಳೆಯದೇ ಆಯ್ತು. ಈ ಬಾರಿಯ ಐಪಿಎಲ್‌ನಲ್ಲಿ ಆಡದಂತೆ ಆಗಿದ್ದು ದೇವರ ಆಶೀರ್ವಾದದಂತಾಗಿದೆ ಎಂದು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಮಾರ್ನಸ್ ಲ್ಯಬುಶೇನ್ ಹೇಳಿದ್ದಾರೆ.

ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಮಿತಿ ಮೀರುತ್ತಿವೆ. ಆಸ್ಪತ್ರೆಗಳು ತುಂಬಿ ತುಳುಕತೊಡಗಿವೆ. ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ಸೋಂಕಿತರಿಗೆ ಆಮ್ಲಜನಕದ ಕೊರತೆ ಎದುರಾಗಿದೆ. ಈ ಆತಂಕಕಾರಿ ಸಂಗತಿಯ ಕಾರಣಕ್ಕೆ 2021ರ ಐಪಿಎಲ್‌ನಿಂದ ಆಟಗಾರರು, ಅಂಪೈರ್‌ಗಳು ಹೊರ ಬೀಳುತ್ತಿದ್ದಾರೆ.

ಈ ಬಾರಿಯ ಐಪಿಎಲ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್‌ನ ಸ್ಪಿನ್ನರ್ ಆರ್‌ ಅಶ್ವಿನ್, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಕೇನ್ ರಿಚರ್ಡ್ಸನ್, ಆ್ಯಡಂ ಜಂಪಾ, ರಾಜಸ್ಥಾನ್ ರಾಯಲ್ಸ್‌ನ ಆ್ಯಂಡ್ರ್ಯೂ ಟೈ ಐಪಿಎಲ್‌ನಿಂದ ಹೊರ ನಡೆದಿರುವುದಷ್ಟೇ ಅಲ್ಲ, ಭಾರತದ ಅಂಪೈರ್‌ ನಿತಿನ್ ಮೆನನ್ ಮತ್ತು ಆಸ್ಟ್ರೇಲಿಯಾದ ಅಂಪೈರ್ ಪೌಲ್ ರೈಫಲ್ ಕೂಡ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ.

'ಐಪಿಎಲ್ ಅನ್ನು ಮಿಸ್ ಮಾಡಿಕೊಂಡಿರುವುದು ದೇವರ ಆಶೀರ್ವಾದದಂತೆ ಕಾಣುತ್ತದೆ,' ಎಂದು ಮಾರ್ನಸ್ ಲ್ಯಬುಶೇನ್ ಹೇಳಿದ್ದಾರೆ. ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನ ವೇಳೆ ಲ್ಯಬುಶೇನ್ ಅವರನ್ನು ಯಾವ ಫ್ರಾಂಚೈಸಿ ಕೂಡ ಆರಿಸಿರಲಿಲ್ಲ. ಹೀಗಾಗಿ ಲ್ಯಬುಶೇನ್ ಈ ಐಪಿಎಲ್‌ನಿಂದ ದೂರ ಉಳಿದಿದ್ದರು.

Story first published: Thursday, April 29, 2021, 15:36 [IST]
Other articles published on Apr 29, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+