Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಿಚೆಲ್ ಮಾರ್ಷ್ ಅಬ್ಬರ; ಸಿಎಸ್‌ಕೆಗೆ ಲಕ್ನೋ ಶಾಕ್

ಲಕ್ನೋ: ಭರವಸೆಯ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್‌ 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ 59ನೇ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ತಂಡವನ್ನು ಮಣಿಸಿದೆ. ಈ ಸೋಲಿನ ಮೂಲಕ ಚೆನ್ನೈ ಪ್ಲೇ ಆಫ್‌ ಆಸೆ ಕೊಂಚ ಕಷ್ಟವಾಗಿದೆ.ಈ ಸೋಲಿನ ಬಳಿಕ ಚೆನ್ನೈ ತಂಡ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. ರಾಜಸ್ಥಾನ್‌ ರಾಯಲ್ಸ್‌ ಐದನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

188 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಎಲ್‌ಎಸ್‌ಜಿ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಮಿಚೆಲ್ ಮಾರ್ಷ್ ಹಾಗೂ ಜೋಶ್‌ ಇಂಗ್ಲಿಸ್ ಜೋಡಿ ಭರ್ಜರಿ ಅಡಿಪಾಯವನ್ನು ತಂಡಕ್ಕೆ ಹಾಕಿಕೊಟ್ಟಿತು. ಈ ಜೋಡಿ ಪವರ್‌ ಪ್ಲೇನಲ್ಲಿ ಪವರ್‌ ಫುಲ್ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾಯಿತು. ಮೊದಲ ವಿಕೆಟ್‌ಗೆ ಈ ಜೋಡಿ 11.4 ಓವರ್‌ಗಳಲ್ಲಿ 135 ರನ್‌ ಸೇರಿಸಿತು. ಈ ಹಂತದಲ್ಲಿ ಜೋಶ್‌ ಇಂಗ್ಲಿಸ್‌ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 36 ರನ್‌ ಬಾರಿಸಿ ಮುಕೇಶ್‌ ಚೌಧರಿ ಎಸೆತದಲ್ಲಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

Mitchell Marsh

ಜೋಶ್‌ ಇಂಗ್ಲಿಸ್ ಔಟ್ ಆಗುತ್ತಿದ್ದಂತೆ ಮಿಚೆಲ್ ಮಾರ್ಷ್ ಸಹ ಔಟ್ ಆದರು. ಇವರು ಔಟ್ ಆಗುವ ಮುನ್ನ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಮಿಚೆಲ್‌ 38 ಎಸೆತಗಳಲ್ಲಿ 9 ಬೌಂಡರಿ, 7 ಸಿಕ್ಸರ್ ಸಹಾಯದಿಂದ 90 ರನ್ ಬಾರಿಸಿದರು. ಮಧ್ಯಮ ಕ್ರಮಾಂಕದ ಆಟಗಾರ ಅಬ್ದುಲ್ ಸಮದ್‌ ಸಹ (7) ಬಂದು ಹೋಗುವ ಸಂಪ್ರದಾಯ ಮುಗಿಸಿದರು. ಭರವಸೆಯ ಆಟಗಾರ ನಿಕೋಲಸ್ ಪೂರನ್ (ಅಜೇಯ 32, 17 ಎಸೆತ) ಹಾಗೂ ಮುಕುಲ್ ಚೌಧರಿ (ಅಜೇಯ 13) ತಂಡವನ್ನು ಗೆಲುವಿನ ದಡ ದಾಟಿಸಿದರು. ಅಂತಿಮವಾಗಿ ಎಲ್‌ಎಸ್‌ಜಿ 16.4 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 188 ರನ್‌ ಕಲೆ ಹಾಕಿ ಭರ್ಜರಿ ಜಯ ದಾಖಲಿಸಿತು.

ಕಳಪೆ ಆರಂಭ

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡದ ಆರಂಭ ಕಳಪೆಯಾಗಿತ್ತು. ಭರವಸೆಯ ಆರಂಭಿಕ ಆಟಗಾರ (20) ಹಾಗೂ ನಾಯಕ ರುತುರಾಜ್ ಗಾಯಕ್ವಾಡ್ (13) ರನ್ ಕಲೆ ಹಾಕುವಲ್ಲಿ ವಿಫಲರಾದರು. ಕಳೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಉರ್ವಿಲ್ ಪಟೇಲ್ (8) ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ಪರಿಣಾಮ ಚೆನ್ನೈ 52 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

Mitchell Marsh

4ನೇ ವಿಕೆಟ್‌ಗೆ ಕಾರ್ತಿಕ್ ಶರ್ಮಾ ಹಾಗೂ ಡೆವಾಲ್ಡ್ ಬ್ರೆವಿಸ್‌ (25) ಜೋಡಿ ಸ್ಥಿರ ಪ್ರದರ್ಶನ ನೀಡಿತು. ಈ ಜೋಡಿ 44 ಎಸೆತಗಳಲ್ಲಿ 70 ರನ್‌ ಸೇರಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಂತೆ ಮಾಡಿತು. ಯುವ ಆಟಗಾರ ಕಾರ್ತಿಕ್ ಶರ್ಮಾ ತಮ್ಮ ಐಪಿಎಲ್ ವೃತ್ತಿ ಜೀವನದ 2ನೇ ಅರ್ಧಶತಕ ಬಾರಿಸಿದರು. ಇವರು 42 ಎಸೆತಗಳಲ್ಲಿ 71 ರನ್‌ ಬಾರಿಸಿದರು. ಇವರ ಅಮೋಘ ಇನಿಂಗ್ಸ್‌ನಲ್ಲಿ 6 ಬೌಂಡರಿ, 5 ಸಿಕ್ಸರ್‌ಗಳು ಸೇರಿವೆ. ಭರವಸೆಯ ಆಟಗಾರ ಶಿವಂ ದುಬೆ (ಅಜೇಯ 32) ಹಾಗು ಪ್ರಶಾಂತ್ ವೀರ್ (ಅಜೇಯ 13) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು.

ಲಕ್ನೋ ಸೂಪರ್ ಜೈಂಟ್ಸ್ ಪರ 24 ವರ್ಷದ ಆಕಾಶ್ ಸಿಂಗ್ ಮಾರಕ ದಾಳಿ ನಡೆಸಿ 26 ರನ್‌ ನೀಡಿ 3 ವಿಕೆಟ್ ಕಬಳಿಸಿದರು.

Story first published: Friday, May 15, 2026, 23:58 [IST]
Other articles published on May 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+