Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Mitchell Starc: ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದ್ದಾರಾ ಮಿಚೆಲ್ ಸ್ಟಾರ್ಕ್?

ಮೇ 27 ಸೋಮವಾರ, ಅಂತಾರಾಷ್ಟ್ರೀಯ ಕ್ರಿಕೆಟ್, ಅದರಲ್ಲೂ ವಿಶೇಷವಾಗಿ ಟೆಸ್ಟ್ ಪಂದ್ಯ‌ಗಳತ್ತ ಗಮನಹರಿಸಲು ಸುಮಾರು ಒಂದು ದಶಕದ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದ ಆಸ್ಟ್ರೇಲಿಯಾ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ದೂರ ಉಳಿದಿದ್ದರು.

ಈ ಋತುವಿನ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ಪರ ‌ಆಡಿದ 34 ವರ್ಷದ ಮಿಚೆಲ್‌ ಸ್ಟಾಕ್ ನಾಕೌಟ್‌ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ಚೆನ್ನೈನಲ್ಲಿ ನಡೆದ ಐಪಿಎಲ್‌ ಫೈನಲ್‌ನಲ್ಲಿ ಸನ್‌ ರೈಸರ್ಸ್ ಹೈದರಾಬಾದ್‌ ಎದುರು ಕೆಕೆಆರ್‌ ಗೆಲ್ಲುವ ಮೂಲಕ ಮೂರನೇ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿದೆ.

Mitchell Starc retire from international cricket career

ಪಂದ್ಯದ ನಂತರ ಮಾತನಾಡಿರುವ ಸ್ಟಾರ್ಕ್, ತಮ್ಮ ಕ್ರಿಕೆಟ್ ವೃತ್ತಿ ಜೀವನವು ನಿವೃತ್ತಿಯ ಸಮೀಪದಲ್ಲಿದೆ ಎಂಬುದರ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಈ ಸುದ್ದಿ ತಿಳಿದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಸಾಕಷ್ಟು ವೈರಲ್‌ ಆಗಿದೆ.

ಕಳೆದ 9 ವರ್ಷಗಳಿಂದ ನಾನು ಖಂಡಿತವಾಗಿಯೂ ಆಸ್ಟ್ರೇಲಿಯನ್ ಕ್ರಿಕೆಟ್‌ಗೆ ಆದ್ಯತೆ ನೀಡಿದ್ದೇನೆ. ನನ್ನ ದೇಹಕ್ಕೆ ವಿಶ್ರಾಂತಿ ನೀಡಲು ಮತ್ತು ನನ್ನ ಹೆಂಡತಿಯೊಂದಿಗೆ ಸ್ವಲ್ಪ ಸಮಯ ಕಳೆಯಲು ನಾನು ಆಗಾಗ್ಗೆ ಕ್ರಿಕೆಟ್‌ನಿಂದ ಹಿಂದೆ ಸರಿದಿದ್ದೇನೆ. ಅ ವೇಳೆಯೂ ನನ್ನ ತಲೆಯು (ಕಿಕ್ರೆಟ್‌) ಅಲ್ಲಿಯೇ ಇತ್ತು ಎಂದು ಮಿಚೆಲ್‌ ಸ್ಟಾರ್ಕ್‌ ಹೇಳಿದ್ದಾರೆ.

ಕ್ರಿಕೆಟ್‌ನಲ್ಲಿ ಮುಂದುವರೆಯುವಂತೆ ನಾನು ಖಂಡಿತವಾಗಿಯೂ ನನ್ನ ವೃತ್ತಿಜೀವನದ ಆರಂಭಕ್ಕಿಂತ ಅಂತ್ಯಕ್ಕೆ ಹತ್ತಿರವಾಗಿದ್ದೇನೆ. ಮುಂದಿನ ವಿಶ್ವಕಪ್‌ಗೆ ಬಹಳ ಸಮಯ ಇರುವುದರಿಂದ ಒಂದು ಕ್ರಿಕೆಟ್‌ ಮಾದರಿ ಸ್ವರೂಪವನ್ನು ಕೈಬಿಡಬಹುದು.

ಆ ಸ್ವರೂಪವು ನನ್ನ ಕೈ ಬಿಡುತ್ತದೆಯೋ ಇಲ್ಲವೋ, ಗೊತ್ತಿಲ್ಲ. ಆದರೆ ಅದು ಬಾಗಿಲು ತೆರೆಯುತ್ತದೆ ಎಂದು ಸ್ಟಾರ್ಕ್ ನಿವೃತ್ತಿ ಘೋಷಿಸುವ ಮಾತುಗಳ್ನಾಡಿದ್ದಾರೆ.

Mitchell Starc retire from international cricket career

ಆದರೆ ಸ್ಟಾರ್ಕ್‌ ಯಾವ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳುತ್ತಾರೆ ಎಂಬುದನ್ನು ತಿಳಿಸಿಲ್ಲ. ಮುಂಬವರುವ 2025ರ ಚಾಂಪಿಯನ್ಸ್ ಟ್ರೋಫಿ ಹಾಗು 2027ರ ಏಕದಿನ ವಿಶ್ವಕಪ್‌ಗೂ ಮೊದಲು 50-ಓವರ್‌ಗಳ ಪಂದ್ಯಗಳನ್ನು ಸ್ಟಾರ್ಕ್ ಆಡುತ್ತಿಲ್ಲ. ಹೀಗಾಗಿ ಏಕದಿನ ಮಾದರಿ ಅನ್ನು ಸ್ಟಾರ್ಕ್ ಕೈ ಬಿಡುವ ಸಾಧ್ಯತೆಯಿದೆ ಎನ್ನಲಾಗಿದೆ.

ದುಬಾರಿ ಬೆಲೆಯ ಮಿಚೆಲ್‌ ಸ್ಟಾರ್ಕ್

ಕಳೆದ ವರ್ಷ ನಡೆದ ಐಪಿಎಲ್‌ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಅವರಿಗೆ ಬರೋಬ್ಬರ 24.75 ಕೋಟಿ ರೂ.ಗಳನ್ನು ನೀಡಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡಕ್ಕೆ ಕರೆ ತಂದಿತ್ತು.

ಈ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಮಿಚೆಲ್‌ ಸ್ಟಾರ್ಕ್‌ ಅತಿ ಹೆಚ್ಚು ಬೆಲೆಗೆ ಬಿಡ್‌ ಆದ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಆರಂಭದಲ್ಲಿ ಮಿಚೆಲ್‌ ಸ್ಟಾರ್ಕ್ ಸ್ವಲ್ಪ ದುಬಾರಿ ಬೌಲಿಂಗ್‌ ಪ್ರದರ್ಶನ ಮಾಡಿದ್ದರು.

ಬಳಿಕ ಫಾರ್ಮ್‌ ಕಂಡುಕೊಂಡ ಸ್ಟಾರ್ಕ್‌ ನಾಕೌಟ್‌ ಪಂದ್ಯಗಳಿ ಬಿಗಿ ಬೌಲಿಂಗ್‌ ದಾಳಿ ಮಾಡುವ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಕೆಕೆಆರ್‌ ಫೈನಲ್‌ ಗೆಲ್ಲಲು ನೆರವಾಗಿದ್ದರು. ‌

Story first published: Monday, May 27, 2024, 18:17 [IST]
Other articles published on May 27, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+