ಚೆಂಡು ವಿರೂಪ: ಸ್ಟೀವ್ ಸ್ಮಿತ್ ವಿರುದ್ಧ ಮಿಚೆಲ್ ಸ್ಟಾರ್ಕ್ ಕಿಡಿ


ಮೆಲ್ಬರ್ನ್, ಜೂನ್ 9: ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಜಗತ್ತಿನೆದುರು ತಲೆ ತಗ್ಗಿಸುವಂತೆ ಮಾಡಿದ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ತಂಡ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್, ಮಾಜಿ ನಾಯಕ ಸ್ಟೀವ್ ಸ್ಮಿತ್ ವಿರುದ್ಧ ಕಿಡಿಕಾರಿದ್ದಾರೆ.
ಘಟನೆ ನಡೆದು ತಿಂಗಳುಗಳು ಉರುಳಿದರೂ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದಿದ್ದ ಸ್ಟಾರ್ಕ್, ಕೊನೆಗೂ ಮೌನಮುರಿದಿದ್ದಾರೆ.
ವಿವಾದ ಭುಗಿಲೇಳತ್ತಿದ್ದಂತೆಯೇ ಸ್ಟೀವ್ ಸ್ಮಿತ್ ಅವರು ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆಗಳು ತಮ್ಮ ಮೇಲೂ ಶಂಕೆ ಪಡುವಂತೆ ಮಾಡಿದೆ ಎಂದು ಸ್ಟಾರ್ಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮೊಂದಿಗೆ ಆರೋಪ ಎದುರಿಸಿರುವ ಕ್ಯಾಮೆರಾನ್ ಬ್ಯಾಂಕ್ರಾಫ್ಟ್ ಜತೆ ಸುದ್ದಿಗೋಷ್ಠಿ ನಡೆಸಿದ್ದ ಸ್ಮಿತ್, ಸಂಪೂರ್ಣ ಸತ್ಯವನ್ನು ಬಿಚ್ಚಡದೆ ಇರುವುದು ಇತರೆ ಆಟಗಾರರ ಘನತೆಗೆ ಧಕ್ಕೆ ತಂದಿದೆ ಎಂದು ಸ್ಟಾರ್ಕ್ ಕೋಪಗೊಂಡಿದ್ದಾರೆ.
ಚೆಂಡು ವಿರೂಪಗೊಳಿಸುವ ಸಂದರ್ಭದಲ್ಲಿ ಟಿವಿ ಕ್ಯಾಮೆರಾಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಕೊಂಡಿದ್ದ ಸ್ಮಿತ್ ಮತ್ತು ಬ್ಯಾಂಕ್ರಾಫ್ಟ್, ಸುದ್ದಿಗೋಷ್ಠಿಯಲ್ಲಿ ಚೆಂಡು ವಿರೂಪಗೊಳಿಸುವುದು 'ನಾಯಕತ್ವದ ಗುಂಪಿನ' ನಿರ್ಧಾರವಾಗಿತ್ತು ಎಂದು ಹೇಳಿದ್ದರು.
ನಾಯಕತ್ವದ ಗುಂಪು ಎಂದು ಸ್ಮಿತ್ ಉಲ್ಲೇಖಿಸಿದ್ದರಿಂದ ಸಹಜವಾಗಿಯೇ ಹಿರಿಯ ಆಟಗಾರರಾದ ಸ್ಟಾರ್ಕ್, ಜೋಶ್ ಹೇಜಲ್‌ವುಡ್ ಮತ್ತು ನಥಾನ್ ಲಿಯಾನ್ ಅವರ ಮೇಲೂ ಅನುಮಾನಗಳು ವ್ಯಕ್ತವಾಗಿದ್ದವು. ಆದರೆ, ಈ ವಿಚಾರದ ಬಗ್ಗೆ ತಮಗೆ ಯಾವ ಮಾಹಿತಿಯೂ ಇರಲಿಲ್ಲ ಎಂದು ಈ ಆಟಗಾರರು ಸ್ಪಷ್ಟನೆ ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications