IPL Auction 2024: ಬಿಡ್ಡಿಂಗ್ ಅಂಗಳದಲ್ಲೂ ಇತಿಹಾಸ ಬರೆದ ಸ್ಟಾರ್ಕ್, ಇವರಿಗೆ ಕೆಕೆಆರ್ ನೀಡಿದ ಹಣ ಎಷ್ಟು ಗೊತ್ತಾ?
ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಆದ ವಿಶಿಷ್ಠ ಬೌಲಿಂಗ್ ದಾಳಿಯ ಮೂಲಕ ಹೆಸರುವಾಸಿ ಆಗಿರುವ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅವರಿಗೆ ಐಪಿಎಲ್ ಮಿನಿ ಹರಾಜಿನಲ್ಲಿ ಹಣದ ಹೊಳೆ ಹರಿದಿದೆ. ವೇಗದ ಬೌಲರ್‌ನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಒಟ್ಟು ನಾಲ್ಕು ತಂಡಗಳು ಮುಂದಾಗಿದ್ದವು. ಕೊನೆಗೆ ಮಿಚೆಲ್ ಸ್ಟಾರ್ಕ್‌ಗೆ ತಮ್ಮ ತಂಡದ ಜೆರ್ಸಿ ನೀಡಿ ಕೋಲ್ಕತ್ತಾ ನೈಟ್ ರೈಡರ್ಸ್ ಬರ ಮಾಡಿಕೊಂಡಿದೆ.
ಅಲ್ಲದೆ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚಿನ ಬೆಲೆಗೆ ಬಿಕರಿಯಾದ ಆಟಗಾರ ಎಂಬ ಹೆಗ್ಗಳಿಕೆಯನ್ನು ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ತಮ್ಮದಾಗಿಸಿಕೊಂಡರು.

ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್, ಪರ್ಫೆಕ್ಟ್ ಲೈನ್ ಹಾಗೂ ಲೆಂಥ್ ಮೂಲಕ ಚೆಂಡನ್ನು ಎಸೆಯಬಲ್ಲ ಪ್ಲೇಯರ್. ಇವರನ್ನು ಕೊಂಡುಕೊಳ್ಳಲು ಆರಂಭದಲ್ಲಿ ಮುಂಬೈ ಇಂಡಿಯನ್ಸ್ ಅಖಾಡಕ್ಕೆ ಇಳಿಯಿತು. ಸುಮಾರು 9 ಕೋಟಿ ಒವರೆಗೂ ಹಣ ಹೂಡಲು ಮುಂದಾದ ಮುಂಬೈ, ತದನಂತರ ಅಖಾಡದಿಂದ ಹೊರಗುಳಿಯಿತು.
9 ಕೋಟಿ ಹಣ ಏರಿದ ಬಳಿಕ ಬಿಡ್ ಅಖಾಡಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಜಿದ್ದಿಗೆ ಬಿದ್ದವು. ಈ ಪ್ಲೇಯರ್‌ನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲೇ ಬೇಕು ಎಂದು ಜಿದ್ದಿಗೆ ಬಿದ್ದ ಎರಡೂ ತಂಡಗಳು ಬಿಡ್ ಅಖಾಡದಿಂದ ದೂರ ಸರಿಯಲೇ ಇಲ್ಲ. ಕೊನೆಗೆ
ಈ ಪ್ಲೇಯರ್ ಆಗಮನದಿಂದ ತಂಡಕ್ಕೆ ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಒಳ್ಳೆಯ ಬೌಲಿಂಗ್ ಆಕ್ಷನ್ ಸಿಗುತ್ತದೆ. ಈ ಪ್ಲೇಯರ್ ತಮ್ಮ ವೇರಿಯೆಷನ್ ಮೂಲಕ ವಿಕೆಟ್ ಕಬಳಿಸಿ, ರನ್ ವೇಗಕ್ಕೆ ಕಡಿವಾಣ ಹಾಕಬಲ್ಲರು. ಇನ್ನು ನಿನ್ನೆ ನಡೆದ ಮೌಕ್ ಆಕ್ಷನ್‌ನಲ್ಲಿ ಸ್ಟಾರ್ಕ್‌ಗೆ ಹೆಚ್ಚಿನ ಹೂಡಲು ಮನಸ್ಸು ಮಾಡಿದ್ದ ಆರ್‌ಸಿಬಿ ಬಿಡ್ಡಿಂಗ್ ಅಖಾಡಕ್ಕೆ ಇಳಿಯಲೇ ಇಲ್ಲ.

ಮಿಚೆಲ್ ಸ್ಟಾರ್ಕ್ 27 ಐಪಿಎಲ್ ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications