ಕಿಂಗ್‌ಸ್ಟನ್‌ನಲ್ಲಿ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ನಡೆಯುತ್ತಿದೆ. ಶನಿವಾರದಿಂದ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಪ್ರವಾಸಿ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡಲು ಮುಂದಾಗಿ, 225 ರನ್‌ಗಳಿಗೆ ಆಲೌಟ್ ಆಯಿತು. ಇದೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ಸ್ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಶನಿವಾರ ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಸ್ಟಾರ್ ಬ್ಯಾಟರ್‌ಗಳು ಆಧಾರವಾಗಲಿಲ್ಲ. ತಂಡದ ಪರ ಯಾವೊಬ್ಬ ಬ್ಯಾಟರ್ ಅರ್ಧಶತಕ ಬಾರಿಸಿದೇ ಇರುವುದು ಈ ವೇಳೆ ವಿಶೇಷವಾಗಿತ್ತು. ಆರಂಭಿಕರಾದ ಉಸ್ಮಾನ್ ಖವಾಜ (23), ಸ್ಯಾಮ್ ಕನ್‌ಸ್ಟಾಸ್ (17) ರನ್ ಕಲೆ ಹಾಕಲು ಪರದಾಟ ನಡೆಸಿದರು. ಉಭಯ ಆರಂಭಿಕರು ತಂಡದ ಮೊತ್ತ 68 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿದರು.

ಮೂರನೇ ವಿಕೆಟ್‌ಗೆ ಭರವಸೆಯ ಆಟಗಾರ ಸ್ಟೀವನ್ ಸ್ಮಿತ್ ಹಾಗೂ ಕ್ಯಾಮರೂನ್ ಗ್ರೀನ್ ಜೋಡಿ ತಂಡಕ್ಕೆ ಆಸರೆಯಾಯಿತು. ಆದರೆ ಈ ಜೋಡಿ ಸಹ ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಆದರೆ ಈ ಜೋಡಿ ಆರಂಭಿಕ ಆಘಾತದಿಂದ ತಂಡವನ್ನು ಮೆಲೆತ್ತುವಲ್ಲಿ ಶ್ರಮಿಸಿತು. ಈ ಜೋಡಿ 106 ಎಸೆತಗಳಲ್ಲಿ 61 ರನ್ ಸಿಡಿಸಿ ತಂಡಕ್ಕೆ ಆಧಾರವಾಯಿತು. ಈ ವೇಳೆ 46 ರನ್ ಗಳಿಸಿದ್ದ ಕ್ಯಾಮರೂನ್ ಗ್ರೀನ್ ಔಟ್ ಆದರು. ಇವರು ಔಟ್ ಆದ ಬಳಿಕ ಸ್ಟೀವನ್ ಸ್ಮಿತ್ ಸಹ ಪೆವಿಲಿಯನ್ ಹಾದಿ ಹಿಡಿದರು. ಇವರು ಔಟ್ ಆಗುವ ಮುನ್ನ 8 ಬೌಂಡರಿ ನೆರವಿನಿಂದ 48 ರನ್ ಬಾರಿಸಿದರು.
ಉಳಿದಂತೆ ಆಸೀಸ್ ಪರ ಟ್ರಾವಿಸ್ ಹೆಡ್ (20), ಅಲೆಕ್ಸ್ ಕ್ಯಾರಿ (21), ಪ್ಯಾಟ್ ಕಮಿನ್ಸ್ (24) ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ವಿಂಡೀಸ್ ತಂಡದ ಪರ ಶಮರಾ ಜೋಸೆಫ್ 4, ಜೇಡನ್ ಸೀಲ್ಸ್, ಜಸ್ಟಿನ್ ಗ್ರೀವ್ಸ್ ತಲಾ ಮೂರು ವಿಕೆಟ್ ಕಬಳಿಸಿದರು. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 225 ರನ್‌ಗಳಿಗೆ ಆಲೌಟ್ ಅಯಿತು. ವಿಂಡೀಸ್ ಮೊದಲ ಇನಿಂಗ್ಸ್ ಆರಂಭಿಸಿದ್ದು, ದಿನದಾಟದ ಮುಕ್ತಾಉಕ್ಕೆ 1 ವಿಕೆಟ್‌ಗೆ 16 ರನ್ ಕಲೆ ಹಾಕಿತು. ವಿಂಡೀಸ್ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು 209 ರನ್ ಕಲೆ ಹಾಕಬೇಕಿದೆ.

ಮಿಚೆಲ್ ಸ್ಟಾರ್ಕ್ ಈ ಪಂದ್ಯದಲ್ಲಿ ಇತಿಹಾಸ ನಿರ್ಮಿಸಿದರು. ವೇಗದ ಬೌಲರ್ ಆಗಿ 100 ಪಂದ್ಯವಾಡಿದ ವಿಶ್ವದ 11ನೇ ಆಟಗಾರ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು. ಇದಕ್ಕೂ ಮೊದಲು ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್, ಕೋರ್ಟ್ನಿ ವಾಲ್ಷ್, ಗ್ಲೆನ್ ಮೆಕ್‌ಗ್ರಾತ್, ಚಮಿಂಡಾ ವಾಸ್, ಶಾನ್ ಪೊಲಾಕ್, ಟಿಮ್ ಸೌಥಿ, ಇಶಾಂತ್ ಶರ್ಮಾ, ವಾಸಿಮ್ ಅಕ್ರಮ್ ಮತ್ತು ಮಖಾಯ ಎನ್‌ಟಿನಿ ಸಹ ಈ ಸಾಧನೆ ಈ ಮೊದಲು ಮಾಡಿದ್ದಾರೆ. ಮಿಚೆಲ್ ಇನ್ನು ನಾಲ್ಕು ವಿಕೆಟ್ ಪಡೆದಲ್ಲಿ 400 ವಿಕೆಟ್ ಕ್ಲಬ್ ಸೇರಲಿದ್ದಾರೆ.