Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತದ ಮಹಿಳಾ ತಂಡ ಪ್ರಕಟಿಸಿದ ಬಿಸಿಸಿಐ

Mithali Raj, Harmanpreet Kaur to lead India teams in West Indies tour

ನವದೆಹಲಿ, ಸೆಪ್ಟೆಂಬರ್ 28: ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿರುವ ಭಾರತದ ಮಹಿಳಾ ಕ್ರಿಕೆಟ್‌ ತಂಡಕ್ಕೆ ಏಕದಿನದಲ್ಲಿ ಅನುಭವಿ ಬ್ಯಾಟ್ಸ್‌ಮನ್ ಮಿಥಾಲಿ ರಾಜ್ ಮತ್ತು ಟಿ20ಯಲ್ಲಿ ಹರ್ಮನ್‌ಪ್ರೀತ್‌ ಕೌರ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಈ ಸರಣಿಗೆ ಸಂಬಂಧಿಸಿ ಬಿಸಿಸಿಐ ದೇಸಿ ತಂಡಗಳನ್ನೂ ಶುಕ್ರವಾರ (ಸೆಪ್ಟೆಂಬರ್ 27) ಪ್ರಕಟಿಸಿದೆ.

ವೆಸ್ಟ್ ಇಂಡೀಸ್‌ಗೆ ಭಾರತದ ವನಿತಾ ತಂಡದ ಪ್ರವಾಸ ಸರಣಿಯು ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಐದು ಪಂದ್ಯಗಳ ಟಿ20 ಸರಣಿಯನ್ನು ಒಳಗೊಂಡಿದೆ. ಸರಣಿಯು ನವೆಂಬರ್ 1ರಿಂದ ಆರಂಭಗೊಳ್ಳಲಿದೆ. ಏಕದಿನ ಪಂದ್ಯಗಳು ಆ್ಯಂಟಿಗುವಾದಲ್ಲಿ ಮತ್ತು ಟಿ20 ಪಂದ್ಯಗಳು ಸೇಂಟ್ ಲೂಸಿಯಾ ಮತ್ತು ಗಯಾನಾದಲ್ಲಿ ನಡೆಯಲಿವೆ.

ಭಾರತದ ಮಹಿಳಾ ಏಕದಿನ ತಂಡ: ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್‌ ಕೌರ್ (ಉಪ ನಾಯಕಿ), ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ಪೂನಮ್ ರಾವತ್, ಡಿ ಹೇಮಲತಾ, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಪೂನಂ ಯಾದವ್, ಎಕ್ತಾ ಬಿಶ್ತ್, ರಾಜೇಶ್ವರಿ ಗಾಯಕ್ವಾಡ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಪ್ರಿಯಾ ಪೂನಿಯಾ, ಸುಷ್ಮಾ ವರ್ಮಾ.

ಭಾರತದ ಮಹಿಳಾ ಟಿ20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಜೆಮಿಮಾ ರೋಡ್ರಿಗಸ್, ಶೆಫಾಲಿ ವರ್ಮಾ, ಹಾರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಪೂನಂ ಯಾದವ್, ರಾಧಾ ಯಾದವ್, ವೇದಾ ಕೃಷ್ಣಮೂರ್ತಿ, ಅನುಜಾ ಪಾಟಿಲ್, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್, ಮಾನ್ಸಿ ಜೋಶಿ, ಅರುಂಧತಿ ರೆಡ್ಡಿ.

Story first published: Friday, September 27, 2019, 22:53 [IST]
Other articles published on Sep 27, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+