Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MLC 2023: ಮೇಜರ್​ ಲೀಗ್​ ಕ್ರಿಕೆಟ್​ನಲ್ಲಿ ನ್ಯೂಯಾರ್ಕ್ ಫ್ರಾಂಚೈಸಿ ಖರೀದಿಸಿದ ಮುಂಬೈ ಇಂಡಿಯನ್ಸ್​

MLC 2023: Mumbai Indians Owns New York Franchise In Major League Cricket

ಕ್ರಿಕೆಟ್ ಆಡುವ ಹಲವು ಪ್ರಮುಖ ರಾಷ್ಟ್ರಗಳಲ್ಲಿ ಈಗಾಗಲೇ ಫ್ರಾಂಚೈಸಿ ಟಿ20 ಲೀಗ್‌ಗಳು ನಡೆಯುತ್ತಿವೆ. ಭಾರತದಲ್ಲಿ ಐಪಿಎಲ್, ಆಸ್ಟ್ರೇಲಿಯಾದಲ್ಲಿ ಬಿಬಿಎಲ್, ಪಾಕಿಸ್ತಾನದಲ್ಲಿ ಪಿಎಸ್ಎಲ್, ದಕ್ಷಿಣ ಆಫ್ರಿಕಾದಲ್ಲಿ ಎಸ್ಎ ಟಿ20 ಲೀಗ್‌ಗಳು ಆಯೋಜನೆಗೊಳ್ಳುತ್ತವೆ.

ಅದೇ ರೀತಿಯಾಗಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕದಲ್ಲಿ ಮೇಜರ್ ಲೀಗ್ ಕ್ರಿಕೆಟ್ (MLC) ಎಂಬ ಹೊಸ ಫ್ರಾಂಚೈಸಿ ಲೀಗ್ ಬರುತ್ತಿದೆ. ಇದಕ್ಕಾಗಿ ಹೂಸ್ಟನ್‌ನಲ್ಲಿ ಸೋಮವಾರ, ಮಾರ್ಚ್ 20ರಂದು ತನ್ನ ಉದ್ಘಾಟನಾ ಋತುವಿನ ಡ್ರಾಫ್ಟ್ (ಹರಾಜು) ಪ್ರಕ್ರಿಯೆ ನಡೆಯಿತು.

ಮುಂಬೈ ಇಂಡಿಯನ್ಸ್​ ಇದೀಗ ಮೂರು ಖಂಡಗಳು, ನಾಲ್ಕು ದೇಶಗಳು, ಐದು ಲೀಗ್​ಗಳಲ್ಲಿ ಕ್ರಿಕೆಟ್​ ತಂಡಗಳ ಒಡೆತನವನ್ನು ಹೊಂದಿದ ಫ್ರಾಂಚೈಸಿಯಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್​ ಲಿಮಿಟೆಡ್​ ಒಡೆತನದ ಮುಂಬೈ ಇಂಡಿಯನ್ಸ್ ತನ್ನ ಐದನೇ ಕ್ರಿಕೆಟ್​ ಫ್ರಾಂಚೈಸಿಯಾಗಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕದ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ 'ಎಂಐ ನ್ಯೂಯಾರ್ಕ್​' ತಂಡವನ್ನು ಖರೀದಿಸಿದೆ.

MLC 2023: Mumbai Indians Owns New York Franchise In Major League Cricket


ನ್ಯೂಯಾರ್ಕ್​ ಮೂಲದ ಈ ತಂಡದ ಮಾಲೀಕತ್ವದಿಂದ ಮುಂಬೈ ಇಂಡಿಯನ್ಸ್ ಕುಟುಂಬ ಇನ್ನಷ್ಟು ವಿಸ್ತಾರಗೊಂಡಿದೆ. ಚೊಚ್ಚಲ ಆವೃತ್ತಿಯ ಮೇಜರ್​ ಲೀಗ್ ಕ್ರಿಕೆಟ್​ನಲ್ಲಿ​ (ಎಂಎಲ್​ಸಿ) ಎಂಐ ನ್ಯೂಯಾರ್ಕ್ ಆಡಲಿದೆ.

"ಬೆಳೆಯುತ್ತಿರುವ ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ನ್ಯೂಯಾರ್ಕ್​ ಫ್ರಾಂಚೈಸಿಯನ್ನು ಸ್ವಾಗತಿಸಲು ನಾನು ಅಪಾರ ಉತ್ಸುಕಳಾಗಿದ್ದೇನೆ. ಅಮೆರಿಕದ ಹೊಸ ಫ್ರಾಂಚೈಸಿ ಕ್ರಿಕೆಟ್​ ಲೀಗ್​ಗೆ ಇದೇ ಮೊದಲ ಬಾರಿಗೆ ಪ್ರವೇಶ ಪಡೆಯುತ್ತಿದ್ದೇವೆ," ಎಂದು ಮುಂಬೈ ಇಂಡಿಯನ್ಸ್ ಒಡತಿ ನೀತಾ ಅಂಬಾನಿ ತಿಳಿಸಿದ್ದಾರೆ.

"ನಿರ್ಭೀತಿ ಮತ್ತು ಮನರಂಜನೆಯ ಕ್ರಿಕೆಟ್​ ಆಟದ ಜಾಗತಿಕ ಬ್ರ್ಯಾಂಡ್​ ಆಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು ರೂಪಿಸುವ ಭರವಸೆ ನನ್ನದು. ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ಇದು ಇನ್ನೊಂದು ಹೊಸ ಆರಂಭವಾಗಿದೆ. ನಾನು ಮುಂದಿನ ಉತ್ಸಾಹಿ ಪ್ರಯಾಣವನ್ನು ಎದುರು ನೋಡುತ್ತಿದ್ದೇನೆ," ಎಂದು ನೀತಾ ಅಂಬಾನಿ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ಕುಟುಂಬವು ಕ್ರಿಕೆಟ್​ ಆಟವನ್ನು ಜಗತ್ತಿನೆಲ್ಲೆಡೆ ವಿಸ್ತರಿಸಲು ಮತ್ತು ಪ್ರೋತ್ಸಾಹಿಸಲು ಬದ್ಧವಾಗಿದೆ. ಜೊತೆಗೆ ಪ್ರತಿದಿನ ಬಲಿಷ್ಠವಾಗಿ ಬೆಳೆಯುತ್ತಲೇ ಇದೆ. ಭಾರತದ ಐಪಿಎಲ್‌ನಲ್ಲಿ ದಾಖಲೆಯ ಐದು ಬಾರಿ ಪ್ರಶಸ್ತಿ ಎತ್ತಿ ಹಿಡಿದಿದೆ.

ಎಂಐ ಕುಟುಂಬದಲ್ಲಿ ಮುಂಬೈ ಇಂಡಿಯನ್ಸ್ (IPL​), ಎಂಐ ಕೇಪ್​ಟೌನ್​ (SA20), ಎಂಐ ಎಮಿರೇಟ್ಸ್​ (IL ​T20)ಮತ್ತು ಮುಂಬೈ ಇಂಡಿಯನ್ಸ್ (WPL​) ಬಳಿಕ ಎಂಐ ನ್ಯೂಯಾರ್ಕ್ (MLC) 5ನೇ ಫ್ರಾಂಚೈಸಿ ಆಗಿದ್ದು, ಮೂರು ವಿಭಿನ್ನ ಖಂಡಗಳು, ನಾಲ್ಕು ಭಿನ್ನ ದೇಶಗಳಲ್ಲಿ ಮತ್ತು ಐದು ಭಿನ್ನ ಕ್ರಿಕೆಟ್​ ಲೀಗ್​ಗಳಲ್ಲಿ ತಂಡಗಳನ್ನು ಹೊಂದಿದ ಭಾರತೀಯ ಫ್ರಾಂಚೈಸಿಯಾಗಿದೆ.

ವಿಶ್ವದ ಎಲ್ಲೆಡೆ ಸುಮಾರು 50 ದಶಲಕ್ಷ ಡಿಜಿಟಲ್​ ಫಾಲೋವರ್ಸ್‌ಗಳನ್ನು ಹೊಂದಿರುವ ಮುಂಬೈ ಇಂಡಿಯನ್ಸ್, ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಜಾಗತಿಕ ಕ್ರಿಕೆಟ್​ ಬ್ರ್ಯಾಂಡ್​ ಎನಿಸಿದೆ.

ವಿಶ್ವದೆಲ್ಲೆಡೆಯ ಪ್ರಮುಖ ಫ್ರಾಂಚೈಸಿ ಲೀಗ್​ಗಳಲ್ಲಿ ವರ್ಷದಲ್ಲಿ ಸುಮಾರು 6 ತಿಂಗಳ ಕಾಲ ಕ್ರಿಕೆಟ್​ ಆಡುವ ಎಂಐ ಕುಟುಂಬದ ಐದು ತಂಡಗಳನ್ನು ಅಭಿಮಾನಿಗಳು ಬೆಂಬಲಿಸುತ್ತ ಮತ್ತು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. 2009ರಿಂದ ಮುಂಬೈ ಇಂಡಿಯನ್ಸ್‌ನ ಶೇ.99ರಷ್ಟು ಬ್ರ್ಯಾಂಡ್​ ಮೌಲ್ಯ (ಬ್ರ್ಯಾಂಡ್​ ಫೈನಾನ್ಸ್​) ಪ್ರಗತಿ ಕಂಡಿದೆ.

ಮೇಜರ್​ ಲೀಗ್​ ಕ್ರಿಕೆಟ್ (MLC) ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕದಲ್ಲಿ ಆಡಲಾಗುತ್ತಿರುವ ಮೊದಲ ವೃತ್ತಿಪರ ಟಿ20 ಕ್ರಿಕೆಟ್​ ಚಾಂಪಿಯನ್​ಷಿಪ್​ ಆಗಲಿದೆ. 2023ರ ಜುಲೈ 13ರಿಂದ ಮೇಜರ್​ ಲೀಗ್​ ಕ್ರಿಕೆಟ್​ ಚೊಚ್ಚಲ ಆವೃತ್ತಿ ನಡೆಯಲಿದೆ.

ಎಂಐ ನ್ಯೂಯಾರ್ಕ್ ತಂಡ
ಸ್ಟೀವನ್ ಟೇಲರ್, ಹಮ್ಮದ್ ಅಜಮ್, ಎಹ್ಸಾನ್ ಆದಿಲ್, ನೋಸ್ತೂಶ್ ಹೆಂಜಿಗೆ, ಮೊನಾಂಕ್ ಪಟೇಲ್, ಸರ್ಬ್ಜೀತ್ ಲಡ್ಡಾ, ಶಯಾನ್ ಜಹಾಂಗೀರ್, ಉಸ್ಮಾನ್ ರಫೀಕ್, ಸಾಯಿದೀಪ್ ಗಣೇಶ್.

Story first published: Monday, March 20, 2023, 18:30 [IST]
Other articles published on Mar 20, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+