Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MLC 2023: ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡಕ್ಕೆ ಸುನಿಲ್ ನರೈನ್ ನಾಯಕ

ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಸುನಿಲ್ ನರೈನ್ ಅವರು 2023ರ ಮೇಜರ್ ಲೀಗ್ ಕ್ರಿಕೆಟ್ (ಎಂಎಲ್‌ಸಿ) ಉದ್ಘಾಟನಾ ಆವೃತ್ತಿಯಲ್ಲಿ ನೈಟ್ ರೈಡರ್ಸ್ ಗ್ರೂಪ್ ಒಡೆತನದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡದ ನಾಯಕತ್ವ ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ.

ಯುಎಸ್ಎನ ಚೊಚ್ಚಲ ಪಂದ್ಯಾವಳಿಯು ಜುಲೈ 14ರಿಂದ 31ರವರೆಗೆ ಎರಡು ಸ್ಥಳಗಳಲ್ಲಿ ನಡೆಯಲಿದ್ದು, ಆರು ತಂಡಗಳು ಸ್ಪರ್ಧಿಸಲಿವೆ. MI ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೊ ​​​​ಯುನಿಕಾರ್ನ್ಸ್, ಸಿಯಾಟಲ್ ಓರ್ಕಾಸ್, ಟೆಕ್ಸಾಸ್ ಸೂಪರ್ ಕಿಂಗ್ಸ್ ಮತ್ತು ವಾಷಿಂಗ್ಟನ್ ಫ್ರೀಡಮ್ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಸ್ಪರ್ಧಿಸುವ ಇತರ ತಂಡಗಳಾಗಿವೆ.

MLC 2023

ಸುನಿಲ್ ನರೈನ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಸಹ ಆಟಗಾರ ಆಂಡ್ರೆ ರಸೆಲ್ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಲಾಸ್ ಎಂಜಲೀಸ್ ನೈಟ್ ರೈಡರ್ಸ್ ತಂಡದ ಪರ ಆಡಲಿದ್ದಾರೆ. ನೈಟ್ ರೈಡರ್ಸ್ ತಂಡದಲ್ಲಿರುವ ಇತರ ಪ್ರಮುಖ ಆಟಗಾರರೆಂದರೆ, ಲಾಕಿ ಫರ್ಗುಸನ್, ಜೇಸನ್ ರಾಯ್, ರಿಲೀ ರೋಸ್ಸೌ, ಮಾರ್ಟಿನ್ ಗಪ್ಟಿಲ್ ಮತ್ತು ಆಡಮ್ ಝಂಪಾ ಇದ್ದಾರೆ.

ಅನುಭವಿ ಸ್ಪಿನ್ನರ್ ಸುನಿಲ್ ನರೈನ್ ಅವರು ನಾಯಕನಾಗಿ ಆಯ್ಕೆಗೊಂಡಿದ್ದಕ್ಕೆ ತಮ್ಮ ಸಂತೋಷ ವ್ಯಕ್ತಪಡಿಸಿದರು. ತಾವು ಯಾವಾಗಲೂ ಯಾವುದೇ ಲೀಗ್‌ನಲ್ಲಿ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಲು ಬಯಸುವುದಾಗಿ ತಿಳಿಸಿದರು. ತಂಡದಲ್ಲಿ ಹಲವು ಅನುಭವಿ ಆಟಗಾರರೊಂದಿಗೆ ಮೊದಲ ಋತುವಿನಲ್ಲಿ ಲಾಸ್ ಎಂಜಲೀಸ್ ನೈಟ್ ರೈಡರ್ಸ್ ತಂಡ ಯಶಸ್ವಿಯಾಗಬಹುದೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ, ಜುಲೈ 14ರಂದು ಲಾಸ್ ಎಂಜಲೀಸ್ ನೈಟ್ ರೈಡರ್ಸ್ ತಂಡ ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸಹ-ಮಾಲೀಕತ್ವದ ಟೆಕ್ಸಾಸ್ ಸೂಪರ್ ಕಿಂಗ್ಸ್ ವಿರುದ್ಧ ಮೇಜರ್ ಲೀಗ್ ಕ್ರಿಕೆಟ್ ಅಭಿಯಾನವನ್ನು ಪ್ರಾರಂಭಿಸಲಿದೆ.

MLC 2023

"ನೈಟ್ ರೈಡರ್ಸ್ ಫ್ರಾಂಚೈಸಿ ಎಲ್ಲಿ ಆಡಿದರೂ ಆ ತಂಡವನ್ನು ಪ್ರತಿನಿಧಿಸುವ ಬಯಕೆ ಬಗ್ಗೆ ನಾನು ಯಾವಾಗಲೂ ಮಾತನಾಡುತ್ತೇನೆ. ನಾವು ಯುನೈಟೆಡ್ ಸ್ಟೇಟ್ಸ್‌ಗೆ ಬರುವ ಬಗ್ಗೆ ದೀರ್ಘಕಾಲ ಮಾತನಾಡಿದ್ದೇವೆ. ಅಂತಿಮವಾಗಿ ಇಲ್ಲಿ ಆಡುತ್ತಿರುವುದು ನನಗೆ ಖುಷಿಯಾಗಿದೆ. ಈ ತಂಡದ ನಾಯಕನಾಗಿ, ನಾನು ಸವಾಲನ್ನು ಎದುರು ನೋಡುತ್ತಿದ್ದೇನೆ. ಈ ತಂಡದಲ್ಲಿ ಸಾಕಷ್ಟು ಅನುಭವಿ ಆಟಗಾರರು ಇದ್ದಾರೆ," ಎಂದು ಟ್ರಿನಿಡಾಡ್‌ನ ಕ್ರಿಕೆಟಿಗ ಸುನಿಲ್ ನರೈನ್ ತಿಳಿಸಿದ್ದಾರೆ.

ಫಿಲ್ ಸಿಮನ್ಸ್ ಲಾಸ್ ಎಂಜಲೀಸ್ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್

ಇನ್ನು ವೆಸ್ಟ್ ಇಂಡೀಸ್ ತಂಡದ ಮಾಜಿ ಕ್ರಿಕೆಟಿಗ ಫಿಲ್ ಸಿಮನ್ಸ್ ಅವರನ್ನು ಲಾಸ್ ಎಂಜಲೀಸ್ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೆಕೆಆರ್ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್, ಸಹಾಯಕ ಕೋಚ್ ರಿಯಾನ್ ಟೆನ್ ಡೋಸ್ಚೇಟ್ ಮತ್ತು ತಂಡದ ವಿಶ್ಲೇಷಕ ಎಆರ್ ಶ್ರೀಕಾಂತ್ ಅವರು ಫಿಲ್ ಸಿಮನ್ಸ್‌ಗೆ ಎಂಎಲ್‌ಸಿ ಪಂದ್ಯಾವಳಿಯಲ್ಲಿ ಸಹಾಯ ಮಾಡಲಿದ್ದಾರೆ.

ಫಿಲ್ ಸಿಮನ್ಸ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಟಿ20 ಲೀಗ್‌ಗಳಲ್ಲಿ ಅಗಾಧ ಕೋಚಿಂಗ್ ಪರಿಣತಿಯನ್ನು ಹೊಂದಿದ್ದಾರೆ. 60 ವರ್ಷದ ಸಿಮನ್ಸ್ ಎರಡು ಬಾರಿ ವೆಸ್ಟ್ ಇಂಡೀಸ್ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದರು. ಅಲ್ಲದೆ ಜಿಂಬಾಬ್ವೆ, ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳಿಗೂ ತರಬೇತುದಾರರಾಗಿದ್ದರು.

ಇತ್ತೀಚೆಗೆ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ (ಸಿಪಿಎಲ್) ಅತ್ಯಂತ ಯಶಸ್ವಿ ತಂಡವಾದ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನ ತರಬೇತುದಾರರಾಗಿ ನೇಮಕಗೊಂಡರು. 2019ರಲ್ಲಿ ಬಾರ್ಬಡೋಸ್ ರಾಯಲ್ಸ್ ತಂಡದೊಂದಿಗೆ ಪ್ರಶಸ್ತಿಯನ್ನು ಗೆದ್ದರು. 2023ರಲ್ಲಿ ಫಿಲ್ ಸಿಮನ್ಸ್ ಅವರು ಚೊಚ್ಚಲ ಇಂಟರ್‌ನಾಷನಲ್ ಟಿ20 ಕ್ರಿಕೆಟ್‌ನಲ್ಲಿ ದುಬೈ ಕ್ಯಾಪಿಟಲ್ಸ್ ತಂಡಕ್ಕೆ ಕೋಚ್ ಆಗಿದ್ದರು.

Story first published: Monday, July 10, 2023, 16:39 [IST]
Other articles published on Jul 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+