For Quick Alerts
ALLOW NOTIFICATIONS  
For Daily Alerts
 

ಪ್ರಧಾನಿ ಮೋದಿ ಜೋತೆ ವೇದಿಕೆ ಹಂಚಿಕೊಂಡ ಕ್ರಿಕೆಟ್‌ ದೇವರು

ಭಾರತದ ಪ್ರಧಾನಿ ನರೇಂದ್ರ ಮೋದಿ ಸಮಯ ಸಿಕ್ಕಾಗಲೆಲ್ಲಾ ಕ್ರೀಡಾ ಕ್ಷೇತ್ರದ ಮಹನೀಯರನ್ನು ತಮ್ಮ ಮನೆಗೆ ಕರೆಸಿಕೊಂಡು ಭೇಟಿ ಮಾಡುತ್ತಾರೆ. ಇತ್ತೀಚಿಗೆ ಮಹಿಳಾ ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಭಾರತ ಮಹಿಳಾ ತಂಡವನ್ನು ಸಹ ಮೋದಿ ಭೇಟಿ ಮಾಡಿದರು. ಈಗ ಭಾರತದ ಪ್ರಧಾನಿ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿರುವ ಫೋಟೋ ಒಂದು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಇಬ್ಬರೂ ಗಣ್ಯರು ಭೇಟಿ ಆಗಿದ್ದು ಎಲ್ಲಿ ಎಂಬ ಬಗ್ಗೆ ವಿವರ ಇಲ್ಲಿದೆ.

ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಬುಧವಾರ ಸತ್ಯಸಾಯಿ ಬಾಬಾ ಅವರ ಶತಮಾನೋತ್ಸವ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ಭಾಗವಹಿಸಿದ್ದರು. ಅಲ್ಲದೆ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಸಹ ಈ ಕಾರ್ಯಕಮದಲ್ಲಿ ಕಾಣಿಸಿಕೊಂಡರು.

Modi and Sachin Meet at Satya Sai Baba Centenary in Puttaparthi 100-Rupee Coin Released

ಇದೇ ವೇಳೆ ಪ್ರಧಾನಿ ಮೋದಿ 100 ರೂಪಾಯಿ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ಇದಕ್ಕೂ ಮೊದಲು, ಮೋದಿ ಸತ್ಯಸಾಯಿ ಬಾಬಾ ಅವರ ದೇವಾಲಯ ಮತ್ತು ಸಮಾಧಿಗೆ ಭೇಟಿ ನೀಡಿದರು. ಇದೇ ವೇಳೆ ಅರ್ಚಕರು ಮೋದಿ ಅವರಿಗೆ ಆಶೀರ್ವಾದವನ್ನು ಮಾಡಿದರು. ಇದೇ ವೇಳೆ ಮಾತನಾಡಿದ ಮೋದಿ, ಬಾಬಾ ಅವರ ಅವರ ಶಿಕ್ಷಣ ಪ್ರೀತಿ ಮತ್ತು ಸೇವಾ ಮನೋಭಾವ ಇನ್ನೂ ಕೋಟ್ಯಂತರ ಜನರಿಗೆ ಮಾರ್ಗದರ್ಶನ ನೀಡುತ್ತಿದೆ ಎಂದರು.

ಬಾಬಾ ಸ್ಮರಿಸಿದ ಸಚಿನ್

ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪುಟ್ಟಪರ್ತಿ ಸಾಯಿ ಬಾಬಾ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು. ಚಿಕ್ಕವರಿದ್ದಾಗ ನನ್ನ ಕೇಶ ವಿನ್ಯಾಸ ಬಾಬಾ ಅವರಂತೆ ಕಾಣುತಿತ್ತು. ನನ್ನ ಕೇಶವಿನ್ಯಾಸದಿಂದಾಗಿ ಜನರು ನನ್ನನ್ನು ಚಿನ್ನ ಸತ್ಯ ಸಾಯಿ ಎಂದು ಕರೆಯುತ್ತಿದ್ದರು ಎಂದು ಸಚಿನ್ ಹೇಳಿದರು.

1997 ರಿಂದ ಸತ್ಯ ಸಾಯಿ ಅವರೊಂದಿಗೆ ಸಂಬಂಧ ಹೊಂದಿದ್ದೇ. ನಾನು ಪುಟ್ಟಪರ್ತಿಗೆ ಹಲವು ಬಾರಿ ಬಂದು ಬಾಬಾ ಅವರಿಂದ ಆಶೀರ್ವಾದವನ್ನು ಪಡೆದಿದ್ದೇನೆ. ನಾನು ವಿಚಲಿತನಾದಾಗ ಬಾಬಾ ನನಗೆ ಹಲವು ಬಾರಿ ಸರಿಯಾದ ಮಾರ್ಗದರ್ಶನ ಮಾಡಿದ್ದಾರೆ. ಅವರು ಹೇಳಿದ ಮಾತನ್ನು ಸದಾ ಸ್ಮರಿಸಬೇಕು. ಭಾರತದಲ್ಲಿ 2011ರಲ್ಲಿ ನಡೆದ ಏಕದಿನ ವಿಶ್ವಕಪ್‌ ವೇಳೆ, ಬಾಬಾ ನನಗೆ ಕರೆ ಮಾಡಿ ಪ್ರೋತ್ಸಾಹಿಸಿದರು ಎಂದು ಸಚಿನ್ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಸಹ ಭಾವಗಹಿಸಿದ್ದರು.

Story first published: Wednesday, November 19, 2025, 18:01 [IST]
Other articles published on Nov 19, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+