For Quick Alerts
ALLOW NOTIFICATIONS  
For Daily Alerts
 

PAK vs NZ: ತಾಯ್ನಾಡಿನ ವಿರುದ್ಧವೇ ವಿಶ್ವ ದಾಖಲೆ ಸೃಷ್ಟಿಸಿದ ಕಿವೀಸ್ ಬ್ಯಾಟರ್

ನೇಪಿಯರ್‌ನಲ್ಲಿ ಶನಿವಾರದಂದು ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ನ್ಯೂಜಿಲೆಂಡ್ 73 ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ ಯುವ ಬ್ಯಾಟರ್ ಮೊಹಮ್ಮದ್ ಅಬ್ಬಾಸ್ ಎಲ್ಲರ ಚಿತ್ತ ಕದ್ದರು. ಅವರು ತಮ್ಮ ತವರು ದೇಶ ಪಾಕಿಸ್ತಾನ ತಂಡದ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ಅದ್ಭುತ ಅರ್ಧಶತಕ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದರು.

ಮೊಹಮ್ಮದ್ ಅಬ್ಬಾಸ್ ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಪಂದ್ಯದಲ್ಲಿ ವೇಗವಾಗಿ 50 ರನ್ ಗಳಿಸಿದ ದಾಖಲೆಯನ್ನು ನಿರ್ಮಿಸಿದರು. ಮೊಹಮ್ಮದ್ ಅಬ್ಬಾಸ್ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಗಳಿಸಿ ಮಿಂಚಿದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು 26 ಎಸೆತಗಳಲ್ಲಿ 200 ಸ್ಟ್ರೈಕ್ ರೇಟ್‌ನಲ್ಲಿ 3 ಸಿಕ್ಸರ್‌ಗಳು ಮತ್ತು 3 ಬೌಂಡರಿಗಳ ನೆರವಿನಿಂದ 52 ರನ್ ಗಳಿಸಿದರು.

Mohammad Abbas Created record for fastest half-century in New Zealand vs Pakistan first ODI

ಚೊಚ್ಚಲ ಪಂದ್ಯದಲ್ಲಿ ಆಡಿದ ಮೊಹಮ್ಮದ್ ಅಬ್ಬಾಸ್ ಕೇವಲ 24 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಇದರೊಂದಿಗೆ ತಮ್ಮ ಮೊದಲ ಏಕದಿನ ಪಂದ್ಯದಲ್ಲಿಯೇ ಅತಿ ವೇಗವಾಗಿ ಅರ್ಧಶತಕ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ, ಅವರು 26 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರ ವಿಶ್ವ ದಾಖಲೆಯನ್ನು ಮುರಿದರು.

ಕೃನಾಲ್ ಪಾಂಡ್ಯ 2021 ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ ಅವರು 26 ಎಸೆತಗಳಲ್ಲಿ ಅರ್ಧಶತಕ ಗಳಿಸುವಲ್ಲಿ ಯಶಸ್ವಿಯಾದರು. ಇದೀಗ, ನ್ಯೂಜಿಲೆಂಡ್‌ನ ಮೊಹಮ್ಮದ್ ಅಬ್ಬಾಸ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲೇ ವೇಗವಾಗಿ ಅರ್ಧಶತಕ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಸ್ಟಾರ್ ಬ್ಯಾಟರ್ ಇಶಾನ್ ಕಿಶನ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. 2021 ರಲ್ಲಿ ಶ್ರೀಲಂಕಾ ವಿರುದ್ಧದ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಕಿಶನ್ 33 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.

ಅಬ್ಬಾಸ್ ಹಿನ್ನಲೆ?

21 ವರ್ಷದ ಮೊಹಮ್ಮದ್ ಅಬ್ಬಾಸ್ ಮೂಲತಃ ಪಾಕಿಸ್ತಾನದವರಾಗಿದ್ದು, ತಮ್ಮ ತಾಯ್ನಾಡಿನ ವಿರುದ್ಧ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ . ಅವರ ತಂದೆ ಅಜರ್ ಅಬ್ಬಾಸ್ ಪಾಕಿಸ್ತಾನದ ಲಾಹೋರ್‌ನವರಾಗಿದ್ದು, ಅಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸಿದ್ದರು. ಇದಾದ ನಂತರ ಅವರು ಲಾಹೋರ್‌ನಿಂದ ಮೊಹಮ್ಮದ್ ಅಬ್ಬಾಸ್ ಜನಿಸಿದ ಆಕ್ಲೆಂಡ್‌ಗೆ ತೆರಳಿದರು.

ನೇಪಿಯರ್ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಮೂಲದ ಮೊಹಮ್ಮದ್ ಅಬ್ಬಾಸ್ ಪಾಕಿಸ್ತಾನಿ ಬೌಲರ್‌ಗಳಿಗೆ ದುಃಸ್ವಪ್ನವಾಗಿ ಕಾಡಿದರು. ಪಾಕಿಸ್ತಾನ ತಂಡದ ಬೌಲರ್‌ಗಳ ಬೆವರಿಳಿಸಿದ ಅಬ್ಬಾಸ್ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿ ಸಂಭ್ರಮಿಸಿದರು.

ಪಂದ್ಯದ ಫಲಿತಾಂಶ

ಟಾಸ್ ಗೆದ್ದ ಪಾಕಿಸ್ತಾನ ನಾಯಕ ಮೊಹಮ್ಮದ್ ರಿಜ್ವಾನ್ ನ್ಯೂಜಿಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಮಾರ್ಕ್ ಚಾಪ್ಮನ್ ಅವರ 132 ರನ್‌ಗಳ ಶತಕ ಮತ್ತು ಮೊಹಮ್ಮದ್ ಅಬ್ಬಾಸ್ ಅವರ 52 ರನ್‌ಗಳ ಸಹಾಯದಿಂದ ಕಿವೀಸ್ ಪಡೆ 9 ವಿಕೆಟ್ ನಷ್ಟಲ್ಲೆ 344 ರನ್ ಗಳಿಸಿತು. ಪಾಕಿಸ್ತಾನ ಪರ ಇರ್ಫಾನ್ ಖಾನ್ 3 ವಿಕೆಟ್ ಪಡೆದರು.

ನ್ಯೂಜಿಲೆಂಡ್ ನೀಡಿದ್ದ 345 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಪಾಕಿಸ್ತಾನ 44.1 ಓವರ್‌ಗಳಲ್ಲಿ 271 ರನ್‌ಗಳಿಗೆ ಆಲೌಟಾಯಿತು. ಈ ಮೂಲಕ ಕಿವೀಸ್ ಪಡೆ 73 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಪಾಕಿಸ್ತಾನ ಉತ್ತಮ ಆರಂಭವನ್ನು ನೀಡಿತು. ಆದರೆ ಕೊನೆಯ 6 ವಿಕೆಟ್‌ಗಳನ್ನು ಕೇವಲ 22 ರನ್‌ಗಳಲ್ಲಿ ಕಳೆದುಕೊಳ್ಳುವ ಮೂಲಕ ಪಂದ್ಯವನ್ನು ಕಳೆದುಕೊಂಡಿತು.

Story first published: Saturday, March 29, 2025, 16:03 [IST]
Other articles published on Mar 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+