ಜಿಂಬಾಬ್ವೆ ಸರಣಿಗೆ ಪಾಕ್ ತಂಡದಲ್ಲಿ ಅಮೀರ್, ಸರ್ಫರಾಜ್‌ಗೆ ಸ್ಥಾನವಿಲ್ಲ

ದುಬೈ: ಪಾಕಿಸ್ತಾನದಲ್ಲಿ ನಡೆಯಲಿರುವ ಮುಂಬರಲಿರುವ ಜಿಂಬಾಬ್ವೆ ವಿರುದ್ಧದ ನಿಯಮಿತ ಓವರ್‌ಗಳ ಸರಣಿಗಾಗಿ ಪಾಕಿಸ್ತಾನ ತಂಡದಲ್ಲಿ ಅನ್ ಕ್ಯಾಪ್ಡ್ ಆಟಗಾರ 20ರ ಹರೆಯದ ಅಬ್ದುಲ್ ಶಫಿಕ್ ಕಾಣಿಸಿಕೊಂಡಿದ್ದಾರೆ. ಆದರೆ ಅನುಭವಿ ಆಲ್ ರೌಂಡರ್ ಶೋಯೆಬ್ ಮಲಿಕ್, ವೇಗಿ ಮೊಹಮ್ಮದ್ ಅಮೀರ್ ಮತ್ತು ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ.
ಸೆಂಟ್ರಲ್ ಪಂಜಾಬ್ ವಿರುದ್ಧ ನಡೆದಿದ್ದ ರಾಷ್ಟ್ರೀಯ ಟಿ20 ಪಂದ್ಯದಲ್ಲಿ ಟಿ20ಗೆ ಪಾದಾರ್ಪಣೆ ಮಾಡಿದ್ದ ಶಫಿಕ್ ಉತ್ತಮ ಪ್ರದರ್ಶನ ನೀಡಿದ್ದರು. ಆ ಪಂದ್ಯದಲ್ಲಿ ಶಫಿಕ್ ಶತಕ ಚಚ್ಚಿದ್ದರು. ಅಲ್ಲದೆ ಒಟ್ಟು 10 ಇನ್ನಿಂಗ್ಸ್ ಆಡಿದ್ದ ಶಫಿಕ್ 133 ಸ್ಟ್ರೈಕ್ ರೇಟ್‌ನಲ್ಲಿ 358 ರನ್ ಕಲೆ ಹಾಕಿದ್ದರು. ಶಫಿಕ್ ಆಡಿದ್ದ ಏಕಮಾತ್ರ ಪ್ರಥಮದರ್ಜೆ ಕ್ರಿಕೆಟ್ ಪಂದ್ಯದಲ್ಲೂ ಶತಕ ಬಾರಿಸಿದ್ದರು.
ಮಲಿಕ್ ಬದಲು ತಂಡದಲ್ಲಿ ಶಫಿಕ್ ಕಾಣಿಸಿಕೊಂಡಿದ್ದರೆ, ಸರ್ಫರಾಜ್ ಬದಲು ಮೊಹಮ್ಮದ್ ರಿಝ್ವಾನ್‌ಗೆ ಮೀಸಲು ವಿಕೆಟ್ ಕೀಪರ್ ಆಗಿ ರೊಹೈಲ್ ನಝೀರ್ ಹೆಸರಿಸಲ್ಪಟ್ಟಿದ್ದಾರೆ. ಹಸನ್ ಅಲಿ ಮತ್ತು ನಸೀಮ್ ಶಾ ಗಾಯಾಳಾಗಿರುವುದರಿಂದ ಅವರೂ ಪಾಕ್ ತಂಡದಲ್ಲಿ ಹೆಸರಿಸಲ್ಪಟ್ಟಿಲ್ಲ.
ಜಿಂಬಾಬ್ವೆ ಸರಣಿಗೆ ಪಾಕ್ ತಂಡ
ಬಾಬರ್ ಅಝಾಮ್, ಅಬ್ದುಲ್ಲಾ ಶಫೀಕ್, ಇಮಾಮ್-ಉ-ಹಕ್, ಹ್ಯಾರಿಸ್ ಸೊಹೈಲ್, ಹೈದರ್ ಅಲಿ, ಅಬಿದ್ ಅಲಿ, ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಇಫ್ತಿಖರ್ ಅಹ್ಮದ್, ಮೊಹಮ್ಮದ್ ರಿಜ್ವಾನ್, ಖುಷ್ದಿಲ್ ಷಾ, ಇಮದ್ ವಾಸಿಮ್, ಫಹೀಮ್ ಅಶ್ರಫ್, ರೋಹೈಲ್ ನಜೀರ್, ಶಾದಾಬ್ ಖಾನ್ , ಮೊಹಮ್ಮದ್ ಹಸ್ನೈನ್, ಹ್ಯಾರಿಸ್ ರವೂಫ್, ಮೂಸಾ ಖಾನ್, ವಹಾಬ್ ರಿಯಾಜ್, ಜಾಫರ್ ಗೋಹರ್, ಉಸ್ಮಾನ್ ಖಾದರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications