ಟೆಸ್ಟ್ ಕ್ರಿಕೆಟ್‌ನಿಂದ ಪಾಕಿಸ್ತಾನ ವೇಗಿ ಮೊಹಮ್ಮದ್ ಅಮೀರ್ ನಿವೃತ್ತಿ

ಇಸ್ಲಮಾಬಾದ್, ಜುಲೈ 26: ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕನ್ನು ಪಾಕಿಸ್ತಾನ ವೇಗಿ ಮೊಹಮ್ಮದ್ ಅಮೀರ್ ಕೊನೆಗೊಳಿಸಿದ್ದಾರೆ. ಅಮೀರ್ ನಿವೃತ್ತಿ ಘೋಷಿಸಿರುವುದನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಶುಕ್ರವಾರ ತಿಳಿಸಿದೆ. 2009ರಲ್ಲಿ ಶ್ರೀಲಂಕಾದ ಗ್ಯಾಲೆಯಲ್ಲಿ ಆತಿಥೇಯರ ವಿರುದ್ಧದ ಪಂದ್ಯದಲ್ಲಿ ಅಮೀರ್ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದರು.
27ರ ಹರೆಯದ ಮೊಹಮ್ಮದ್ ಅಮೀರ್, ಒಟ್ಟು 36 ಟೆಸ್ಟ್ ಪಂದ್ಯಗಳಲ್ಲಿ 30.47ರ ಸರಾಸರಿಯಂತೆ 119 ವಿಕೆಟ್‌ಗಳನ್ನು ಪಡೆದಿದ್ದಾರೆ. 2017ರಲ್ಲಿ ಕಿಂಗ್ಸ್‌ಸ್ಟನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 44 ರನ್ನಿಗೆ 6 ವಿಕೆಟ್ ಮುರಿದಿದ್ದು ಅಮೀರ್ ಅವರ ಟೆಸ್ಟ್ ವೃತ್ತಿ ಜೀವನದ ಶ್ರೇಷ್ಠ ಸಾಧನೆಯಾಗಿದೆ.
'ಸಾಂಪ್ರದಾಯಿಕ ಕ್ರಿಕೆಟ್ ಮಾದರಿಯಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದು ಗೌರವವೆಂದು ನಾನು ಭಾವಿಸುತ್ತೇನೆ. ಆದರೆ ದೀರ್ಘ ಕ್ರಿಕೆಟ್ ಮಾದರಿಯಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ. ವೈಟ್ ಬಾಲ್‌ನತ್ತ ಗಮನ ಹರಿಸುತ್ತೇನೆ,' ಎಂದು ಅಮೀರ್ ಹೇಳಿಕೊಂಡಿರುವುದಾಗಿ ಪಿಸಿಬಿ ತಿಳಿಸಿದೆ.
'ಪಾಕಿಸ್ಥಾನಕ್ಕಾಗಿ ಆಡೋದು ನನ್ನ ಅಂತಿಮ ಬಯಕೆ ಮತ್ತು ಉದ್ದೇಶವಾಗಿದೆ. ಮುಂದಿನ ವರ್ಷ ಐಸಿಸಿ ಟಿ20 ವಿಶ್ವಕಪ್ ಸೇರಿಸಿ ಮುಂದಿನ ಎಲ್ಲಾ ಪಂದ್ಯಗಳಲ್ಲಿ ತಂಡದ ಪರ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ,' ಎಂದು ಮೊಹಮ್ಮದ್ ಅಮೀರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications